ಚಿಕ್ಕಬಳ್ಳಾಪುರ, [ನ.03]:  ಕರ್ನಾಟದಲ್ಲಿ ಉಪಸಮರಕ್ಕೆ ದಿನಗಣನೆ ಆರಂಭವಾಗಿದ್ದು, ಇಂದು [ಭಾನುವಾರ] ಬಿಜೆಪಿ ಚಿಕ್ಕಬಳ್ಳಾಪುರದಲ್ಲಿ‌ ಬೋವಿ‌ ಸಮಾಜದ ಸಮಾವೇಶ ಮಾಡುವ ಮೂಲಕ ಉಪಚುನಾವಣೆ ಸಮರಕ್ಕೆ ಚಾಲನೆ ಕೊಟ್ಟಿದೆ. ಈ ಮೂಲಕ  ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಗೆ ಬಲ ಬಂದಂತಾಗಿದೆ.

ಆದ್ರೆ, ಇತ್ತ ಸುಧಾಕರ್ ವಿರುದ್ಧ ಬಂಡಾಯ ಭುಗಿಲೆದ್ದಿದೆ. ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಣೆ ಹಾಕುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಜುನಾಥ್ ಕಾರ್ಯಕರ್ತರೊಂದಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನ ಭೇಟಿಯಾಗಿ ದೂರು ಸಲ್ಲಿಸಿದರು.

ಅನರ್ಹ ಶಾಸಕ ಸುಧಾಕರ್‌ಗೆ ಡಬಲ್ ಧಮಾಕ: ತೀವ್ರ ಕುತೂಹಲ ಮೂಡಿಸಿದ ಡಿಕೆಶಿ ಮುಂದಿನ ನಡೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ನಳಿನ್ ಕುಮಾರ್ ಅವರನ್ನು ಮಂಜುನಾಥ್ ಭೇಟಿ ಮಾಡಿ, ಅನರ್ಹ ಶಾಸಕ ಸುಧಾಕರ್ ಬೆಂಬಲಿಗರಿಗೆ ಮುಖ್ಯಮಂತ್ರಿಗಳು ಮಣೆ ಹಾಕುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. 

ಸುಧಾಕರ್ ಬೆಂಬಲಿಗರಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದು, ಇದರಿಂದಾಗಿ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಸಿಗದಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡರು. 

ಡಿಕೆಶಿಗೆ 'ಮೆಡಿಕಲ್' ಶಾಕ್: ಕಾಲೇಜು ಯುದ್ಧದಲ್ಲಿ ಗೆದ್ದ ಸುಧಾಕರ್..!

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮನೆಗೂ ತೆರಳಿ, ತಮಗಾಗುತ್ತಿರುವ ಅನ್ಯಾಯವನ್ನು ಬಿಎಸ್ ವೈ ಮುಂದೆ ಹೇಳಿಕೊಂಡರು.

ಒಂದಂತೂ ಸಂತ್ಯ ಈಗಾಗಲೇ ಬಿಜೆಪಿ ಡಾ.ಸುಧಾಕರ್ ಗೆ ಟಿಕೇಟ್ ನೀಡುಲು ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಮೆಡಿಕ್ ಕಾಲೇಜು ನೀಡಲಾಗಿದೆ. ಅಷ್ಟೇ ಅಲ್ಲದೇ ಭೋವಿ ಸಮಾಜದ ಸಮಾವೇಶ ಮಾಡುವುದರ ಮೂಲಕ ಉಪಚುನಾವಣೆ ಸುಧಾಕರ್ ಅವರನ್ನು ಗೆಲ್ಲಿಸುವಂತೆ ಕೋರಿದ್ದಾಗಿದೆ.

ಇದೇ ಡಿಸೆಂಬರ್ 05 ರಂದು ಉಪಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಫಲಿತಾಂಶ ಹೊರಬೀಳಲಿದ್ದು, ಸುಧಾಕರ್ ಭವಿಷ್ಯ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.