ಗೃಹ ಸಚಿವರನ್ನು ಭೇಟಿಯಾದ ಬಳಿಕ ಸಚಿವ ಕೆಎನ್ ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅಹಮದಾಬಾದ್‌ನಿಂದ ಬಂದ ಬಳಿಕ ಗೃಹ ಸಚಿವರನ್ನು ಭೇಟಿ ಮಾಡಿದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು (ಏ.12): ಗೃಹ ಸಚಿವರನ್ನು ಭೇಟಿಯಾದ ಬಳಿಕ ಸಚಿವ ಕೆಎನ್ ರಾಜಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅಹಮದಾಬಾದ್‌ನಿಂದ ಬಂದ ಬಳಿಕ ಗೃಹ ಸಚಿವರನ್ನು ಭೇಟಿ ಮಾಡಿದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆ ವಿರುದ್ಧ ಕಿಡಿ: ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಿದ ರಾಜಣ್ಣ, ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಹಲವು ಬೆಲೆ ಏರಿಕೆ ಮಾಡಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಬೇಕು' ಎಂದು ಆಗ್ರಹಿಸಿದರು.
ಹನಿಟ್ರ್ಯಾಪ್ ಪ್ರಕರಣ: ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ, 'ಪ್ರಕರಣ ತನಿಖೆಯ ಹಂತದಲ್ಲಿದೆ. ಈಗ ಏನೂ ಮಾತಾಡುವುದಿಲ್ಲ. ಏಪ್ರಿಲ್ 14ರ ಬಳಿಕ ಸಿಐಡಿ ವಿಚಾರಣೆಗೆ ಹೋಗುತ್ತೇನೆ' ಎಂದು ಸ್ಪಷ್ಟಪಡಿಸಿದರು. ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ರಾಜಣ್ಣ, 'ಯತ್ನಾಳ್ ಸದನದಲ್ಲಿ ನನ್ನ ಹೆಸರು ಪ್ರಸ್ತಾಪಿಸಿದರು. ಆದರೆ, ಚೀಟಿ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ನಾವು ಉತ್ತರ ಕೊಡುತ್ತಲೇ ಇರಬೇಕಿಲ್ಲ' ಎಂದರು.
ಇದನ್ನೂ ಓದಿ: ಸಚಿವ ರಾಜಣ್ಣ ಹನಿಟ್ರ್ಯಾಪ್ ಕೇಸ್‌ನಲ್ಲಿ ಸಾಕ್ಷ್ಯ ಸಿಕ್ಕಿಲ್ಲ: ಪರಮೇಶ್ವರ್‌ಗೆ ಸಿಐಡಿ ಡಿಜಿಪಿ ವಿವರಣೆ
ಜಾತಿಗಣತಿ ವರದಿ: ಜಾತಿಗಣತಿ ವರದಿಯ ಬಗ್ಗೆ ಮಾತನಾಡಿದ ರಾಜಣ್ಣ, ವರದಿ ನಮ್ಮ ಕೈ ಸೇರಿದೆ. ಅದನ್ನು ಅಧ್ಯಯನ ಮಾಡುತ್ತಿದ್ದೇವೆ. ವರದಿ ಸೋರಿಕೆಯಾಗಿದೆ ಎನ್ನುವುದು ನಿಮ್ಮ ವಾದ. ನಾನು ಲೀಕ್ ಆಗಿಲ್ಲ ಎಂದೇ ಹೇಳುತ್ತೇನೆ' ಎಂದು ತಿಳಿಸಿದರು. '10 ವರ್ಷಗಳ ಹಿಂದಿನ ಸರ್ವೇ ಆಗಿರುವುದರಿಂದ ಜನಸಂಖ್ಯೆಯಲ್ಲಿ ಬದಲಾವಣೆಯಾಗಿದೆ. ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸಿ, ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು' ಎಂದು ಒತ್ತಾಯಿಸಿದರು.
ಇದನ್ನೂ ಓದಿ: ನನ್ನ, ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಗೃಹ ಸಚಿವ ಪರಮೇಶ್ವರ್
ಹೈಕಮಾಂಡ್ ಬೇಸರ ವಿಚಾರ: ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್ ಬೇಸರಗೊಂಡಿದೆ ಎಂಬ ಪ್ರಶ್ನೆಗೆ, 'ಯಾರು ಬೇಸರಗೊಳ್ಳುತ್ತಾರೆ, ಯಾರು ಖುಷಿಯಾಗುತ್ತಾರೆ ಎಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗೌರವವನ್ನು ನಾನೇ ಕಾಪಾಡಿಕೊಳ್ಳುತ್ತೇನೆ ಎಂದು ರಾಜಣ್ಣ ತಿರುಗೇಟು ನೀಡಿದರು.
