ಡಿಕೆ ಶಿವಕುಮಾರ್ ಅವರು 'ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು' ಎಂಬ ಹೇಳಿಕೆಗೆ ಸಚಿವ ಕೆಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ. ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಸಿಎಂ ಸ್ಥಾನ ತಲೆಮೇಲಿನ ಹೆಚ್ಚುವರಿ ಕಿರೀಟ ಅಲ್ಲ ಎಂದಿದ್ದಾರೆ.

ಬೆಂಗಳೂರು (ಫೆ.17): ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಅವರು ಕೂಡ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ 'ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು' ಎಂಬ ಹೇಳಿಕೆ ಸಚಿವ ಕೆಎನ್ ರಾಜಣ್ಣ ತಿರುಗೇಟು ನೀಡಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎಲ್ಲದಕ್ಕೂ ಎಐಸಿಸಿ ಹೇಳಿದೆ ಅಂತಾ ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಆರೋಪ ಅಲ್ಲ ವಾಸ್ತವ ಎಂದರು. ಮುಂದುವರಿದು, ನಾನು ಯಾರಿಂದಲೂ ಶಿಸ್ತಿನ ಪಾಠ ಕಲಿಯಬೇಕಿಲ್ಲ. ನಾನು 50 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆ ಹೊರತು ದುಷ್ಪಾರಿಣಾಮದ ಮಾತುಗಳಲ್ಲ ಎಂದರು

ಇದನ್ನೂ ಓದಿ: ದಿನಬೆಳಗಾದ್ರೆ ಸಿದ್ದರಾಮಯ್ಯರ ಹೆಸರು ದುರ್ಬಳಕೆ ನಿಲ್ಲಿಸಿ: ಚುನಾವಣೆಗೆ ಬೇಕೇ ಬೇಕು ಎಂದು ಜಾರಕಿಹೊಳಿಗೆ ಡಿಕೆಶಿ ಪರೋಕ್ಷ ತಿರುಗೇಟು

ಡಿಸಿಎಂ ಸ್ಥಾನ ಎಂದರೆ ತಲೆಮೇಲೆ ಹೆಚ್ಚುವರಿ ಕಿರೀಟ ಇರಲ್ಲ:

ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಆದರೆ ಈಗಲೂ ಅದೇ ರೀತಿ ಕೇಳಲಾಗಲ್ಲ. ಉಪಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು. ಈಗ ಅದನ್ನ ಕೇಳಲ್ಲ. ಅಷ್ಟಕ್ಕೂ ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ. ಪೂರ್ಣಾವಧಿ, ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಈ ಬಗ್ಗೆ ಸಿಎಲ್‌ಪಿ ಸಭೆಯಲ್ಲೇ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನು ಅವರು ಒಪ್ಪಿದ ಮೇಲೆ ಆಯ್ತಲ್ಲ ಎಂದರು.

ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯೋಲ್ಲ!

ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಡಿಕೆಶಿ ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯೋಲ್ಲ. ಎಚ್ಚರಿಕೆ ಎಲ್ಲಾ ಯಾರು ಕೇಳ್ತಾರೆ? ನಂಗೂ ಡಿಕೆ ಶಿವಕುಮಾರ್ ಗೂ ವೈಯುಕ್ತಿಕವಾಗಿ ಏನೂ ಇಲ್ಲಾ, ವಿಚಾರ ಭೇದ ಇರಬಹುದು ಅಷ್ಟೇ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು ಒಟ್ಟಿಗೆ ವಿದೇಶ ಪ್ರವಾಸ ಎಲ್ಲ ಮಾಡಿದ್ದೇವೆ. ವಿಚಾರ ಭೇದ ಅಷ್ಟೆ ವೈಯುಕ್ತಿಕ ಏನೂ ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದ ರಾಜಣ್ಣ.

ಇದನ್ನೂ ಓದಿ: ಕಾಂಗ್ರೆಸ್‌ನ ಒಳಜಗಳದಿಂದ ಸರ್ಕಾರ ಶೀಘ್ರದಲ್ಲೇ ಪತನ: ಆರ್‌ ಅಶೋಕ್ ಬಳಿಕ ಜಗದೀಶ್ ಶೆಟ್ಟರ್ ಭವಿಷ್ಯ!

ಜಿಸಿ ಚಂದ್ರಶೇಖರ್ ವಿರುದ್ಧವೂ ವಾಗ್ದಾಳಿ:

ಜಿಸಿ ಚಂದ್ರಶೇಖರ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನೋಡ್ರೀ, ದೆ ಆರ್ ಆಲ್ ಲಯಾಬಿಲಿಟಿ ಫಾರ್ ಪಾರ್ಟಿ. ಅವರ ಶಕ್ತಿ ಏನಿದೆ? ಶಕ್ತಿ ಮೀರಿ ಅಧಿಕಾರ ಅನುಭವಿಸ್ತಿದ್ದಾರೆ. ಎರಡು ಬಾರಿ ಎಂಪಿ, ಪಾರ್ಟಿಗೆ ಏನ್ ಶಕ್ತಿ ಕೊಟ್ಟಿದ್ದಾರೆ? ಅವ್ರು ಏನ್ ಎತ್ತ ಅಂತಾ ಆತ್ಮವಿಮರ್ಶೆ ಮಾಡಿಕೊಂಡು ಮಾತಾಡಬೇಕು. ಕಾರ್ಪೋರೇಷನ್ ಎಲೆಕ್ಷನ್ ನಲ್ಲಿ ಎಷ್ಟು ವೋಟು ತಗೊಂಡಿದ್ರು? ತಪ್ಪು ಯಾರೇ ಮಾಡಲಿ ಕ್ರಮ ಆಗಲಿ. ಕಾರ್ಯಾಧ್ಯಕ್ಷರಾದ್ರೆ ಎರಡು ಕೊಂಬು ಇರುತ್ತಾ? ಎಂದು ಖಡಕ್ ಆಗಿ ಪ್ರಶ್ನನಿಸಿದರು.