Asianet Suvarna News Asianet Suvarna News

ಮುಡಾ ಹಗರಣ ಕೋಮುವಾದಿಗಳ ಸೃಷ್ಟಿ; ಸಿಎಂ ತಪ್ಪೇ ಮಾಡಿಲ್ಲ: ಸಚಿವ ಮಹದೇವಪ್ಪ 

ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ಪಾತ್ರ ಇಲ್ಲ. ವೈಟ್ನರ್ ಬಳಸಿ ತಿದ್ದಿದ ಆರೋಪ ನಿರಾಧಾರ. ಸುಖಾಸುಮ್ಮನೆ ಇದನ್ನು ರಾಜಕೀಯಕರಣಗೊಳಿಸಿದ್ದಾರೆ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿದರು.

Karnataka minister HC Mahadevappa reacts about cm siddaramaiah in muda case at chamarajanagara rav
Author
First Published Aug 24, 2024, 4:12 PM IST | Last Updated Aug 24, 2024, 4:12 PM IST

ಚಾಮರಾಜನಗರ (ಆ.24): ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರ ಪಾತ್ರ ಇಲ್ಲ. ವೈಟ್ನರ್ ಬಳಸಿ ತಿದ್ದಿದ ಆರೋಪ ನಿರಾಧಾರ. ಸುಖಾಸುಮ್ಮನೆ ಇದನ್ನು ರಾಜಕೀಯಕರಣಗೊಳಿಸಿದ್ದಾರೆ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿದರು.

ಇಂದು ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆ ಕಡೆ ಗಮನ ಹರಿಸದೆ ವೃತ ಕಾಲಹರಣ ಮಾಡುತ್ತಿದ್ದಾರೆ. ಮುಡಾ ವಿಚಾರದಲ್ಲಿ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಆಗಿದೆ. ನ್ಯಾಯಾಲಯದ ಮುಂದೆ ಪ್ರಕರಣ ಇದೆ. ಇದರಲ್ಲಿ ಸಿಎಂ ಅವರ ಯಾವ ಪಾತ್ರವೂ ಇಲ್ಲ, ಹಣಕಾಸು ವ್ಯವಹಾರವೂ ಇಲ್ಲ. ವಿರೋದಿಗಳು ಅಂತೆ ಕಂತೆಗಳ ಸೃಷ್ಟಿಮಾಡಿದ್ದಾರೆ ಆ ಮೂಲಕ ಪ್ರಮಾಣಿಕ ಬದ್ಧತೆ, ಹಿಂದೂಳಿದ ವರ್ಗನ ನಾಯಕನ ವ್ಯಕ್ತಿತ್ವ, ಗೌರವಕ್ಕೆ ಧಕ್ಕೆ ತರುವ ಯತ್ನ ಕೋಮುವಾದಿಗಳು ನಡೆಸಿದ್ದಾರೆ. ಕೋಮುವಾದಿಗಳ ಉದ್ದೇಶ ಗ್ಯಾರಂಟಿ ಯೋಜನೆಗಳು ಜಾರಿ ಆಗಬಾರದು ಎಂಬುದಾಗಿದೆ. ಜೆಡಿಎಸ್ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಎಲ್ಲ ಸೇರಿ ರಾಜಕೀಯ ಪಿತೂರಿ ನಡೆಸಿದ್ದಾರೆ ಎಂದು ಕಿಡಿಕಾರಿದರು.

'3,666 ಎಕರೆ ಜಾಗ ಬರೀ ₹20 ಕೋಟಿಗೆ ಜಿಂದಾಲ್‌ಗೆ ಮಾರಾಟ, 'ಇದೇನು ನಿಮ್ಮಪ್ಪನ ಆಸ್ತಿನಾ?' ಸಿಎಂ ವಿರುದ್ಧ ಬೆಲ್ಲದ್ ಗರಂ

ಸಿಎಂ ರಾಜೀನಾಮೆ ಕೊಡ್ತಾರೆಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,  ಜನರು 136 ಸೀಟು ಕೊಟ್ಟು ಗೆಲ್ಲಿಸಿರೋದು ವಿಜಯೇಂದ್ರ ರಾಜೀನಾಮೆ ಕೇಳಿದ್ರೆ ಕೊಡೋದಕ್ಕಾ? ಇವರೆಲ್ಲ ಏನೇನು ಮಾಡಿದ್ದಾರೆ ಗೊತ್ತಾ? ವಿಜಯೇಂದ್ರ ಯಡಿಯೂರಪ್ಪ, ಅಶೋಕ್, ಹೆಚ್ಡಿಕೆ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಇವರ ಮೇಲೆ ಸಾಕಷ್ಟು ಕೇಸ್‌ಗಳೆಲ್ಲ ಪ್ರಾಸಿಕ್ಯೂಷನ್‌ನಲ್ಲಿ ಬಿದ್ದಿವೆ. ಮೊದಲು ಅವರದೇ ಶುದ್ಧಿ ನೋಡಿಕೊಳ್ಳಲಿ. ಶಾಸಕರು ಮಂತ್ರಿಗಳು ಹೈಕಮಾಂಡ್ ಸಿಎಂ ಸಿದ್ದರಾಮಯ್ಯರ ಪರ ಇದ್ದಾರೆ. ಸಿಎಂ ತಪ್ಪೇ ಮಾಡಿಲ್ಲ ಎಂದರು.

Latest Videos
Follow Us:
Download App:
  • android
  • ios