ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ; ಆದ್ರೂ ಜನ ಮೋದಿ ಮೋದಿ ಅಂತಾ ಕೂಗ್ತಾರೆ: ಎಚ್‌ಸಿ ಮಹದೇವಪ್ಪ ಕಿಡಿ
ಪ್ರಜಾಪ್ರಭುತ್ವ ಮತ್ತು ಸಂವಿಧಾನ ದೇಶದ ಅಭಿವೃದ್ಧಿಗೆ ರಾಜ ಮಾರ್ಗಗಳು. ಆದರೆ ಈ ರಾಜ ಮಾರ್ಗಗಳನ್ನು ಕೋಮುವಾದದ ಮೂಲಕ ಮುಚ್ಚಲು ಬಿಜೆಪಿ ನಿರಂತರ ಪ್ರಯತ್ನಿಸುತ್ತಿದೆ ಎಂದು ಸಚಿವ ಎಚ್‌ಸಿ ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೊಡಗು (ಮಾ.31): ಪ್ರಜಾಪ್ರಭುತ್ವ ಮತ್ತು ಸಂವಿಧಾನ ದೇಶದ ಅಭಿವೃದ್ಧಿಗೆ ರಾಜ ಮಾರ್ಗಗಳು. ಆದರೆ ಈ ರಾಜ ಮಾರ್ಗಗಳನ್ನು ಕೋಮುವಾದದ ಮೂಲಕ ಮುಚ್ಚಲು ಬಿಜೆಪಿ ನಿರಂತರ ಪ್ರಯತ್ನಿಸುತ್ತಿದೆ ಎಂದು ಸಚಿವ ಎಚ್‌ಸಿ ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಬಿಜೆಪಿಯಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಆದರೆ ಜನರು ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಸಂವಿಧಾನದಲ್ಲಿ ನಾವು ಹಿಂದೂ ವೈವಿಧ್ಯಮಯವಾದ ಜೀವನಕ್ಕೆ ಹೋಗುತ್ತಿದ್ದೇವೆ ಎಂದು ಹೇಳುತ್ತದೆ. ಈ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಬದುಕು ಬೇಕಾಗಿದೆ. ನಾವು ವ್ಯಕ್ತಿ ಪೂಜೆ ಮಾಡಬಾರದು. ವ್ಯಕ್ತಿ ಪೂಜೆ ಸರ್ವಾಧಿಕಾರಿಯನ್ನು ಬೆಳೆಸುತ್ತದೆ. ಈ ಸರ್ವಾಧಿಕಾರಿ ಪ್ರಜಾಪ್ರಭುತ್ವವನ್ನೇ ನಾಶ ಮಾಡುತ್ತಾನೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕ್ಷೀಣಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ 400 ಸೀಟು ಗೆದ್ದು ಸಂವಿಧಾನ ಬದಲಾಯಿಸುವ ಗುರಿ ಇಟ್ಟುಕೊಂಡಿದೆ: ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
ಜನರಲ್ ಕಾರ್ಯಪ್ಪ, ತಿಮ್ಮಯ್ಯ ಅವರೆಲ್ಲಾ ಸ್ವಾತಂತ್ರ್ಯದ ದೊಡ್ಡ ಸೇನಾನಿಗಳು. ರಾಷ್ಟ್ರದ ರಕ್ಷಣೆಯಲ್ಲಿ ಕೊಡಗು ದೊಡ್ಡ ಕೊಡುಗೆ ನೀಡಿದೆ. ಇಂತಹ ಪ್ರದೇಶದಲ್ಲಿ ಸ್ವಾತಂತ್ರ್ಯದ ಉದ್ದೇಶಗಳಿಗೆ ಧಕ್ಕೆ ಬೀಳುತ್ತಿದೆ. ಸಂವಿಧಾನ ಉಳಿವಿಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು.