ಚಿಕ್ಕಮಗಳೂರು(ನ. 21) ಉಪಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ವಾಕ್ ಸಮರ ಜೋರಾಗುತ್ತಿದೆ. ಸಿದ್ದರಾಮಯ್ಯ ನಾನು ಸಮಾಜವಾದಿ ಅಂತಾರೆ  ಆದರೆ ಅವರು  ಹಾಕೋದೆಲ್ಲಾ 3,4,5 ಲಕ್ಷದ ಗ್ಲಾಸು  ಕಟ್ಟೋ ವಾಚು 50 ರಿಂದ 60 ಲಕ್ಷದ್ದು. ಓಡಾಡೋ ಕಾರು ಒಂದೂವರೆ ಎರಡು ಕೋಟಿಯದ್ದು ಆದರೂ ಅವರು  ಸಮಾಜವಾದಿ ಹಿನ್ನೆಲೆಯವ್ರು ಎಂದು ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರೇ. ಅವರಿಗೆ ಯಾವ್ಯಾವ ರೀತಿ ಸ್ನೇಹಿತರಿದ್ದಾರೋ ಗೊತ್ತಿಲ್ಲ. ಕೋಟಿಗಟ್ಟಲೇ ಹಣ ಕೋಡೋ ಸ್ನೇಹಿತರನ್ನ ಅವರು ಹೊಂದಿದ್ದಾರೆ. ಕೋಟಿಗಟ್ಟಲೇ ವಾಚು ಕೊಡೋ ಸ್ನೇಹಿತ, ಲಕ್ಷಗಟ್ಟಲೇ ಕನ್ನಡಕ ಕೊಡೋ ಸ್ನೇಹಿತ . ಕೋಟಿಗಟ್ಟಲೇ ಕಾರು ಗಿಫ್ಟ್ ಕೊಡೋ ಸ್ನೇಹಿತ  ಇದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸುಧಾಕರ್ ವಿನೂತನ ಪ್ರಚಾರ, ಬಿಜೆಪಿ ಬಾವುಟ ಎಲ್ಲೂ ಇಲ್ಲ

ಹಿಂದೆ ಸಿದ್ದರಾಮಯ್ಯ ಹುಬ್ಲೋಟ್ ವಾಷ್ ಕಟ್ಟಿದ್ದು ರಾಷ್ಟ್ರೀಯ ಮಟ್ಟದಲ್ಲಿಯೇ ದೊಡ್ಡ ಸುದ್ದಿಯಾಗಿತ್ತು. ನನಗೆ ಸ್ನೇಹಿತರೊಬ್ಬರು ನೀಡಿದ್ದರು ಎಂದು ಹೇಳಿದ್ದ ಸಿದ್ದರಾಮಯ್ಯ ವಾಚ್ ಅನ್ನು ನಂತರ ವಿಧಾನಸಭೆಯ ಸಚಿವಾಲಕ್ಕೆ ನೀಡಿ ವಿವಾದಕ್ಕೆ ಅಂತ್ಯ ಹಾಡಿದ್ದರು.