'ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ರಾಷ್ಟ್ರೀಯವಾದಕ್ಕೆ ಸಿಕ್ಕಂತ ಜಯ'

* ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ 
* ಬಿಜೆಪಿ ಗೆಲುವು ರಾಷ್ಟ್ರೀಯವಾದಕ್ಕೆ ಸಿಕ್ಕಂತ ಜಯ ಎಂದು ಸಚಿವ
* . ರಾಷ್ಟ್ರೀಯವಾದವನ್ನು ದೇಶದ ಜನರು ಒಪ್ಪಿಕೊಳ್ಳುತ್ತಿದ್ದಾರೆ ಎಂದ ನಾಗೇಶ್

Karnataka Minister BC Nagesh On BJP Won In Five States Elections rbj

ಕಾರವಾರ, (ಮಾ.12): ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ (BJP) ಜಯಭೇರಿ ವಿಚಾರವಾಗಿ ಕಾರವಾರದಲ್ಲಿ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಎನ್. ನಾಗೇಶ್ (BC Nagesh) ಪ್ರತಿಕ್ರಯಿಸಿದ್ದಾರೆ.

ಕಾಂಗ್ರೆಸಿನವರು (Congress) ಈಗಲಾದರೂ ಪಾಠ ಕಲಿಯುತ್ತಾರೆ ಎಂದು ಭಾವಿಸಿದ್ದೇನೆ. ಸುಳ್ಳನ್ನು ತುಂಬಾ ದಿನ ಹೇಳಿದ್ರೆ ನಿಜವಾಗುತ್ತೆ ಅನ್ನೋ ಅವರು ಕಲ್ಪನೆ ಈ ಕಾಲದಲ್ಲಿ ನಡೆಯಲ್ಲ. ದೇಶವನ್ನು ವಿಶ್ವಗುರು ಮಾಡಲು ನರೇಂದ್ರ ಮೋದಿ ಸರಕಾರ ಕೆಲಸ ಮಾಡ್ತಿದೆ ಅಂತಾ ಜನರಿಗೆ ಗೊತ್ತಿದೆ ಎಂದರು.

Election 2022 ಪಂಚ ರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ನಾಳೆ ಮಹತ್ವದ ಸಭೆ, ಮೇಜರ್ ಸರ್ಜರಿಗೆ ತಯಾರಿ

ಕಾಂಗ್ರೆಸಿಗರ ಸುಳ್ಳು, ನಾಟಕಗಳನ್ನು  65 ವರ್ಷದಿಂದ ದೇಶದ ಜನರು ನೋಡಿದ್ದಾರೆ. ಪೊಳ್ಳು ಆಶ್ವಾಸನೆಗಳಿಗೆ ದೇಶದ ಜನ ಬೆಲೆ ಕೊಡ್ತಾರೆ ಅಂತಾ ಅನಿಸಲ್ಲ. ರಾಷ್ಟ್ರೀಯವಾದವನ್ನು ದೇಶದ ಜನರು ಒಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದ ಜಯ, ರಾಷ್ಟ್ರೀಯವಾದಕ್ಕೆ ಸಿಕ್ಕಂತ ಜಯ ಎಂದ ಸಚಿವ ಬಿ.ಎನ್. ನಾಗೇಶ್ ಬಣ್ಣಿಸಿದರು.

ಇನ್ನು ಇದೇ ವಿಚಾರವಾಗಿ ಮೀನುಗಾರಿಕಾ ಸಚಿವ ಎಸ್.‌ ಅಂಗಾರ ಪ್ರತಿಕ್ರಿಯಿಸಿ,  ಜನರು ಬಿಜೆಪಿ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ವಿಶ್ವಾಸದ ಆಧಾರದ ಮೇಲೆ ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಆ ರಾಜ್ಯಗಳ ಎಲ್ಲಾ ಮತದಾರರಿಗೆ ಈ ವೇಳೆ ಅಭಿನಂದನೆ ಸಲ್ಲಿಸ್ತೇನೆ. 1952ರಲ್ಲಿ ಪ್ರಾರಂಭವಾದ ಜನಸಂಘ ಅಧಿಕಾರಕ್ಕೆ ಬರಲು 57 ವರ್ಷಗಳ ಕಾಲ ಸಮಯ ಬೇಕಾಯ್ತು. ಬಿಜೆಪಿಯ ವಿಚಾರಗಳೇನು ಅಂತಾ ಒಂದಷ್ಟು ಭಾಗಗಳಲ್ಲಿ ಇನ್ನೂ ಗೊತ್ತಾಗಿಲ್ಲ. ಜನರು ಬಿಜೆಪಿಯ ವಿಚಾರ ತಿಳಿದುಕೊಂಡಾಗ ಪಕ್ಷಕ್ಕೆ ಬೆಂಬಲ ಕೊಡ್ತಾರೆ ಎಂದರು.

ಬಿಜೆಪಿಗೆ ಅಧಿಕಾರ ನೀಡಿದ ಬಳಿಕ ಜನರು ಮತ್ತೆ ಕೆಳಗಿಳಿಸುವ ಕೆಲಸ ಮಾಡಲ್ಲ. ಈ ಕಾರಣದಿಂದ ಬಿಜೆಪಿಯ ವಿಚಾರ ತಿಳಿಸುವ ಕೆಲಸವಾಗಬೇಕಿದ್ದು  ಸಂಘಟನೆಗಳು ನಡೆಯಬೇಕಿದೆ. ಪಕ್ಷ ಗೆಲ್ಲಿಸುವ ಅಭ್ಯರ್ಥಿಗಳನ್ನು ರೆಸಾರ್ಟ್‌ನಲ್ಲಿ ಕುಳ್ಳಿರಿಸುವುದು ಕಾಂಗ್ರೆಸಿಗರ ಜಾಯಮಾನ ಎಂದ ಸಚಿವ ಅಂಗಾರ ಟಾಂಗ್ ಕೊಟ್ಟರು.

399 ಸ್ಥಾನಗಳ ಪೈಕಿ 387ರಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶದತ್ತ ಇಡೀ ದೇಶವೆ ಚಿತ್ತ ನೆಟ್ಟಿತ್ತು. ಈ ಬಾರಿಯ ಯುಪಿ ಚುನಾವಣೆಗೆ ಸ್ಪರ್ಧಿಸಿದ ಶೇಕಡಾ 80 ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ 399 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಇದರಲ್ಲಿ 387 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 403 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಎಸ್‌ಪಿ 290 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಇನ್ನು ಬಿಜಪಿಯ ಕೆಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಪಂಚ ರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಮಹತ್ವದ ಸಭೆ
 ಪಂಚ ರಾಜ್ಯಗಳ ಚುನಾವಣೆಯಲ್ಲಿ(Five State Election 2022) ಬಿಜೆಪಿ ನಾಲ್ಕು ರಾಜ್ಯ ಗೆದ್ದುಕೊಂಡರೆ, ಆಮ್ ಆದ್ಮಿ ಪಾರ್ಟಿ ಹೊಸದಾಗಿ ಮತ್ತೊಂದು ರಾಜ್ಯಕ್ಕೆ ವಿಸ್ತರಣೆಯಾಗಿದೆ. ಆದರ ಕಾಂಗ್ರೆಸ್(Congress) ಇದ್ದ ಅಧಿಕಾರವನ್ನೂ ಕಳೆದುಕೊಂಡಿತು, ಇನ್ನುಳಿದ ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತಾಯಿತು. ಈ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕರು ನಾಳೆ(ಮಾ.13) ಸಭೆ ಸೇರಿ ಸೋಲಿನ ಕುರಿತು ಮಹತ್ವದ ಚರ್ಚೆ ನಡೆಸಲು ನಿರ್ಧರಿಸಿದೆ.

ಮಾರ್ಚ್ 13ರ ಸಂಜೆ 4 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕಾಂಗ್ರೆಸ್ ಹಿರಿಯ ನಾಯಕರನ್ನೊಳಗೊಂಡ ಸಮಿತಿ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi), ನಾಯಕ ರಾಹುಲ್ ಗಾಂಧಿ(Rahul Gandhi) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra) ಕೂಡ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪಂಚ ರಾಜ್ಯಗಳ ಚುನಾವಣೆಗಳ ಸೋಲಿನ ಕಾರಣ, ಅದರಲ್ಲೂ ಮುಖ್ಯವಾಗಿ ಪಂಜಾಬ್ ಕಳೆದುಕೊಳ್ಳಲು ಕಾರಣವನ್ನು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ರಾಜಕೀಯ ಪಂಡೀತರು, ಜನಸಾಮಾನ್ಯರು ಸೇರಿದಂತೆ ಬಹುತೇಕರು ಕಾಂಗ್ರೆಸ್ ನಾಯಕತ್ವ ಕೊರತೆ ಎದುರಿಸುತ್ತಿದೆ ಎಂದಿದ್ದಾರೆ. ಹೀಗಾಗಿ ಮುಂಬರವು ಚುನಾವಣೆಗಳಲ್ಲಿ ಕಾಂಗ್ರೆಸ್ ಎದರಿಸಲು ಸೂಕ್ತ ನಾಯಕತ್ವ ನೀಡುವ ಕುರಿತು ಚರ್ಚೆಯಾಗಲಿದೆ.

ಉತ್ತರ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಪ್ರಿಯಾಂಕಾ ವಾದ್ರಾ 403 ಸ್ಥಾನಗಳ ಪೈಕಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಶೇಕಡಾ 2.4 ರಷ್ಟು ಮತಗಳಿಕೆ ಪಡೆದಿದೆ. ಈ ಎಲ್ಲಾ ಅಂಶಗಳನ್ನು ಕಾಂಗ್ರೆಸ್ ಚರ್ಚಿಸಲಿದೆ. ಕಾಂಗ್ರೆಸ್‌ನಿಂದ ಬಂಡಾಯ ಎದ್ದಿರುವ ಹಿರಿಯ ನಾಯಕರ ಗುಂಪು ಮತ್ತೆ ನಾಯಕತ್ವ ಬದಲಾವಣೆಗೆ ಸೂಚನೆ ನೀಡಿದೆ. ಹೀಗಾಗಿ ಗಾಂಧಿ ಪರಿವಾರ ಹೊರತು ಮತ್ತೊಬ್ಬ ಸೂಕ್ತ ನಾಯಕನಿಗೆ ಪಟ್ಟ ಕಟ್ಟುವ ಕುರಿತು ಕಾಂಗ್ರೆಸ್ ಚರ್ಚೆ ನಡೆಸಲಿದೆ.

Latest Videos
Follow Us:
Download App:
  • android
  • ios