ಕೇಸರಿ ಭದ್ರಕೋಟೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ನೋಟಾ ಓಟು, ದಕ್ಷಿಣ ಕನ್ನಡ ರಾಜ್ಯಕ್ಕೆ ಫಸ್ಟ್!

ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ನೋಟಾ ಮತ ಹಾಕಿದ ಪ್ರಮಾಣ ಈಗ ಹೊರಬಿದ್ದಿದೆ. ವಿಶೇಷವೆಂದರೆ ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಟಾಪ್‌ ಸ್ಥಾನ ಪಡೆದಿದೆ.

Karnataka Lok Sabha Elections 2024 Dakshina Kannada first in NOTA gow

ಬೆಂಗಳೂರು (ಜೂ.5):  ಜೂನ್‌ 4 ರಂದು ಪ್ರಕಟವಾದ ಕರ್ನಾಟಕ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ನೋಟಾ ಮತ ಹಾಕಿದ ಪ್ರಮಾಣ ಈಗ ಹೊರಬಿದ್ದಿದೆ. ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿ ಜನ  ನೋಟಾವನ್ನು ಆಯ್ಕೆ ಮಾಡಿದ್ದಾರೆ ಎಂಬುದು ಫಲಿತಾಂಶದಲ್ಲಿ ಬಹಿರಂಗವಾಗಿದೆ. ರಾಜ್ಯಾದ್ಯಂತ 2,18,300 ನೋಟಾ ಮತಗಳನ್ನು ಜನ ಬೆಂಬಲಿಸಿದ್ದಾರೆ. ಅಂದರೆ ಒಟ್ಟು ಮತದಾನದ 0.56% ಮತ ನೋಟಾಕ್ಕೆ ಬಿದ್ದಿದೆ. 2019 ರ ಚುನಾವಣೆಗೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆಯಾಗಿದೆ. ಇದರಲ್ಲಿ 2,50,810 ನೋಟಾ ಮತಗಳು ಅಂದರೆ 0.72% ಮತ ಹಂಚಿಯಾಗಿತ್ತು.

ಪ್ರದೀಪ್‌ ಈಶ್ವರ್ ಕೆಲವೇ ಕ್ಷಣಗಳಲ್ಲಿ ರಾಜೀನಾಮೆ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್!

ಅಂಕಿ ಅಂಶಗಳ ಪ್ರಕಾರ, ಅತಿ ಹೆಚ್ಚು ನೋಟಾ ಮತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿದ್ದಿದೆ.  ಜಿಲ್ಲೆಯಲ್ಲಿ ಬರೋಬ್ಬರಿ 23,576 ಮಂದಿ ನೋಟಾವನ್ನು ಬೆಂಬಲಿಸಿದ್ದಾರೆ.  ಇನ್ನು ಎರಡನೇ  ಸ್ಥಾನದಲ್ಲಿ ಬೆಂಗಳೂರು ಉತ್ತರ- 13,554 ನೋಟಾ ಮತ್ತು ಬೆಂಗಳೂರು ಸೆಂಟ್ರಲ್-12,126 ಆಗಿದೆ. ಚಿಕ್ಕೋಡಿ ಈ ಆಯ್ಕೆಯಲ್ಲಿ ಕೊನೆಯ ಸ್ಥಾನದಲ್ಲಿದೆ ಇಲ್ಲಿ 2,608 ನೋಟಾ ಮತ ಬಿದ್ದಿದೆ.  ಹಾಗೆ ನೋಡಿದರೆ  ಕೇಸರಿಯ ಭದ್ರಕೋಟೆ ಎನಿಸಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಬರೋಬ್ಬರಿ 45 ಸಾವಿರಕ್ಕೂ ಅಧಿಕ ನೋಟಾ ಮತಗಳು ಬಂದಿರುವುದು ವಿಶೇಷ ಎನಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತಿ ಹೆಚ್ಚು ಅಂದರೆ 7,690 ನೋಟಾ ಮತಗಳು ಬಿದ್ದಿವೆ. ಕ್ಷೇತ್ರದ ಇತರ ಕಡೆಗಳಾದ ಮೂಡುಬಿದಿರೆ (2166), ಮಂಗಳೂರು ನಗರ ಉತ್ತರ (2019), ಮಂಗಳೂರು ನಗರ ದಕ್ಷಿಣ (1551), ಮಂಗಳೂರು (892), ಬಂಟ್ವಾಳ (2353), ಪುತ್ತೂರು (2302) ಮತ್ತು ಸುಳ್ಯ (4541) ಅಲ್ಲದೆ 61 ಅಂಚೆ ಮತಗಳು ನೋಟಾ ಬಿದ್ದಿದೆ.

ಹೀನಾಯ ಸೋಲಿನ ಬಳಿಕ ಚನ್ನಪಟ್ಟಣ ಬೈ ಎಲೆಕ್ಷನ್‌ ಮೇಲೆ ಕಣ್ಣಿಟ್ಟ ಡಿಕೆ ಬ್ರದರ್ಸ್!

10 ಸಾವಿರ ಕ್ಕಿಂತ ಹೆಚ್ಚು ನೋಟಾ ಮತ ಪಡೆದ ಜಿಲ್ಲೆಗಳ ಪಟ್ಟಿ
ದಕ್ಷಿಣ ಕನ್ನಡ- 23,576
ಬೆಂಗಳೂರು ಉತ್ತರ - 13,554 
ಬೆಂಗಳೂರು ಕೇಂದ್ರ -12,126
ಉಡುಪಿ ಚಿಕ್ಕಮಗಳೂರು - 11,269
ಹಾವೇರಿ -10,865
ಬೆಂಗಳೂರು ಗ್ರಾಮಾಂತರ - 10,649
ಉತ್ತರ ಕನ್ನಡ-10,176

ನೋಟಾ ಆಯ್ಕೆ ಮಾಡುವ ಮತದಾರರು ಅಭ್ಯರ್ಥಿಗಳನ್ನು ತಿರಸ್ಕರಿಸುತ್ತಾರೆ ಅಥವಾ ಪ್ರಜಾಪ್ರಭುತ್ವದ ವಿರುದ್ಧ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂಬ ಅರ್ಥವನ್ನು ತೋರಿಸುತ್ತದೆ. ಇದು ರಾಜಕೀಯ ಸ್ಥಾಪನೆಯ ವಿರುದ್ಧ ಪ್ರತಿಭಟಿಸುವ ವಿಧಾನವಾಗಿದೆ. ಮತದಾರರು ತಾವು ನಿಜವಾದ ಬದ್ಧ ಮತದಾರರು ಎಂದು ಹೇಳಲು ಬಯಸುತ್ತಿರುವುದನ್ನು  ಕೂಡ ಇದು ತೋರಿಸುತ್ತದೆ. ಅಂದರೆ ಅವರು ಪಕ್ಷಕ್ಕೆ ಬಂದಿರುವ ಒಕ್ಕೂಟದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಅಥವಾ ಸ್ಪರ್ಧಿಸುವ ಅಭ್ಯರ್ಥಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದರ್ಥ ಎಂದು  ಪಿಸೆಫಾಲಜಿಸ್ಟ್ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕ ಚಂದನ್ ಗೌಡ ಹೇಳಿಕೆ ನೀಡಿ, ರಾಜಕೀಯ ಪಕ್ಷಗಳು ಇದನ್ನು ಗಮನಿಸುವುದಿಲ್ಲ, ಇದನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಬಾರದು. ಇದು ಅಭ್ಯರ್ಥಿಯ ಆಯ್ಕೆಯ ಬಗ್ಗೆ ಮತದಾರರ ಅಸಮಾಧಾನದ ಸಂಕೇತವಾಗಿದೆ. ಉತ್ತಮ ಅಭ್ಯರ್ಥಿಗಳ ಅಗತ್ಯತೆ ಮತ್ತು ಉತ್ತಮ ವಿಷಯಗಳ ಕುರಿತು ಚರ್ಚೆಯಾಗಬೇಕು ಇದು ಸ್ಪಷ್ಟಪಡಿಸುತ್ತದೆ. ಮತದಾರರು ಪ್ರಜಾಪ್ರಭುತ್ವದ ಸ್ಥಾಪನೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ. 

Latest Videos
Follow Us:
Download App:
  • android
  • ios