Asianet Suvarna News Asianet Suvarna News

ಬಿಬಿಎಂಪಿ ಚುನಾವಣೆ ಭವಿಷ್ಯ: ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಚುನಾವಣೆ ಯಾವಾಗ..?

Karnataka high court Orders To bbmp elections rbj
Author
Bengaluru, First Published Dec 4, 2020, 3:34 PM IST

ಬೆಂಗಳೂರು, (ಡಿ.04):  ಬಿಬಿಎಂಪಿ ಚುನಾವಣೆ ಸಂಬಂಧ ಕರ್ನಾಟಕ  ಹೈಕೋರ್ಟ್ ಇಂದು (ಶುಕ್ರವಾರ)  ತೀರ್ಪು ಪ್ರಕಟಿಸಿದ್ದು, ಸಾಧ್ಯವಾದಷ್ಟು ಬೇಗ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್​ ಆದೇಶ ಹೊರಡಿಸಿದೆ. 

ಇಂದಿನಿಂದ 6 ವಾರಗಳಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಸಿಜೆ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿದೆ.

ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟ: ಯಾರಿಗೆ ಯಾವ ವಾರ್ಡ್ ಮೀಸಲು..? 

ಇಂದಿನಿಂದ 6 ವಾರ ಚುನಾವಣೆ ಘೋಷಣೆಗೆ ಕಾಲಾವಕಾಶ ನೀಡಲಾಗುವುದು. ಎಷ್ಟು ಬೇಗ ಸಾಧ್ಯವೋ ಅಷ್ಟೂ ಬೇಗ ಚುನಾವಣೆ ನಡೆಸಬೇಕು. ಒಂದು ತಿಂಗಳಲ್ಲಿ ಮಿಸಲಾತಿ ಅಧಿಸೂಚನೆ ಹೊರಡಿಸಿ. ಮೀಸಲಾತಿ ಆದೇಶ ಹೊರಡಿಸಿದ 6 ವಾರದಲ್ಲಿ ಎಲೆಕ್ಷನ್ ನಡೆಯಬೇಕು. ನಗರದಲ್ಲಿರುವ 198 ವಾರ್ಡ್​​ಗೆ ಚುನಾವಣೆ ನಡೆಸುವಂತೆ ಕೋರ್ಟ್​ ಆದೇಶ ಹೊರಡಿಸಿದೆ.

ಬಿಬಿಎಂಪಿ ಚುನಾವಣೆ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನ ಹೈಕೋರ್ಟ್ ಇಂದಿಗೆ ಕಾಯ್ದಿರಿಸಿತ್ತು. ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು. 

Follow Us:
Download App:
  • android
  • ios