ಕೋರ್ಟ್‌ ತೀರ್ಪಿನ ಬಗ್ಗೆ ಶುಕ್ರವಾರ ಮಧ್ಯಾಹ್ನ ನನಗೆ ಗೊತ್ತಾಯ್ತು. ಕೋರ್ಟ್‌ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಹಾಗಾಗಿ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತಂದೆ ಎಚ್‌.ಡಿ.ರೇವಣ್ಣ ಹಾಗೂ ದೇವೇಗೌಡರ ಜೊತೆ ಚರ್ಚೆ ಮಾಡುತ್ತೇನೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ, ಮಾಡೇ ಮಾಡುತ್ತೇವೆ ಎಂದು ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ.

ಹಾಸನ (ಸೆ.02): ಕೋರ್ಟ್‌ ತೀರ್ಪಿನ ಬಗ್ಗೆ ಶುಕ್ರವಾರ ಮಧ್ಯಾಹ್ನ ನನಗೆ ಗೊತ್ತಾಯ್ತು. ಕೋರ್ಟ್‌ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಹಾಗಾಗಿ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತಂದೆ ಎಚ್‌.ಡಿ.ರೇವಣ್ಣ ಹಾಗೂ ದೇವೇಗೌಡರ ಜೊತೆ ಚರ್ಚೆ ಮಾಡುತ್ತೇನೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ, ಮಾಡೇ ಮಾಡುತ್ತೇವೆ ಎಂದು ಪ್ರಜ್ವಲ್‌ ರೇವಣ್ಣ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ ಹಾಗೂ ಚುನಾವಣಾ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆಗೆ ತಮ್ಮ ಆಯ್ಕೆಯನ್ನು ಅಸಿಂಧುಗೊಳಿಸಿದ ಹೈಕೋರ್ಟ್‌ ತೀರ್ಪಿನ ಕುರಿತು ಪ್ರತಿಕ್ರಿಯಿಸಿ, ಹಲವು ಕಾರಣ ನೀಡಿ ದೂರು ನೀಡಲಾಗಿತ್ತು. 

ಹಾಗಾಗಿ, ಯಾವ ಆಧಾರದಲ್ಲಿ ತೀರ್ಪು ಬಂದಿದೆ ಎಂಬುದನ್ನು ನೋಡಬೇಕಾಗುತ್ತದೆ. ವಕೀಲರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ, ಮಾಡೇ ಮಾಡುತ್ತೇವೆ. ಚುನಾವಣೆ ವೇಳೆಯಲ್ಲಿ ಎಲ್ಲಾ ದಾಖಲೆ ನೀಡಿದ್ದೇವು. ಚುನಾವಣೆ ನಾಮಪತ್ರ ಸಲ್ಲಿಕೆ ನಮಗೆ ಹೊಸದಲ್ಲ. ಹಲವು ಬಾರಿ ಅರ್ಜಿ ಹಾಕಿದ್ದೇವೆ. ಹೀಗಾಗಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವು. ಇದೆಲ್ಲಾ ದೇವರ ಪರೀಕ್ಷೆ ಅಷ್ಟೇ. ಮುಂದೆ ಏನೇನಾಗುತ್ತೋ ನೋಡೋಣ. ಇದಕ್ಕೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದರು.

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

15 ನೇ ವಯಸ್ಸಿಗೆ 23 ಕೋಟಿ ಆಸ್ತಿ: ಪ್ರಜ್ವಲ್‌ ರೇವಣ್ಣ ಅವರು ತಮ್ಮ 15 ನೇ ವಯಸ್ಸಿನಲ್ಲಿಯೇ 23 ಕೋಟಿ ರು. ಮೌಲ್ಯದ ಆಸ್ತಿ ಸಂಪಾದನೆ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಐಟಿ ರಿಟನ್ಸ್‌ರ್‍ ನಲ್ಲಿ ಈ ಮಾಹಿತಿಯಿಲ್ಲ. ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಆಸ್ತಿ ವಿವರದ ಘೋಷಣೆಯ ಅಫಿಡವಿಟ್‌ನಲ್ಲೂ ಇದನ್ನು ತೋರಿಸಿಲ್ಲ. ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ನಡೆದು ಶಿಕ್ಷೆಯಾಗಬೇಕು. ಹಾಗೆಯೇ ಕಬಳಿಕೆ ಆಗಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ವಕೀಲ ದೇವರಾಜೇಗೌಡರು ಅಪೀಲು ಹಾಕಿದ್ದರು.

ಎ.ಮಂಜು ಅಂದು ಬಿಜೆಪಿ ಇಂದು ಜೆಡಿಎಸ್‌: ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ದಾವೆ ಹಾಕಿದ್ದವರಲ್ಲಿ ಹಾಲಿ ಅರಕಲಗೂಡು ಶಾಸಕ ಎ.ಮಂಜು ಕೂಡ ಒಬ್ಬರು. ಆದರೆ, ಅವರು ಅಂದು ದಾವೆ ಹೂಡುವಾಗ ಬಿಜೆಪಿಯಲ್ಲಿದ್ದರು. ಆದರೆ, ಇಂದು ಜೆಡಿಎಸ್‌ ಶಾಸಕ ಎನ್ನುವುದೇ ಎ.ಮಂಜುಗೆ ಮುಜುಗರದ ಸಂಗತಿಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಹಾಗೂ ಅದರ ನಾಯಕ ಎಚ್‌.ಡಿ.ರೇವಣ್ಣ ಅವರ ಮೇಲೆ ಅತಿ ಹೆಚ್ಚು ವಾಗ್ಧಾಳಿ ನಡೆಸಿದವರಿದ್ದರೆ ಅದು ಎ.ಮಂಜು. ಅದರಲ್ಲೂ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಂತೂ ಎ.ಮಂಜು ಅವರು ರೇವಣ್ಣ ಅವರ ಮೇಲೆ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ತೀವ್ರ ವಾಗ್ದಾಳಿ ನಡೆಸಿದ್ದರು. 

ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಸೋತ ನಂತರವೂ ಈ ಆಕ್ರೋಶ ಇಮ್ಮಡಿಯಾಗಿತ್ತು. ಹಾಗಾಗಿ ಪ್ರಜ್ವಲ್‌ ತಾನು ನಾಮಪತ್ರದೊಂದಿಗೆ ಸಲ್ಲಿಸಿದ್ದ ಆಸ್ತಿ ವಿವರದ ಅಫಿಡವಿಟ್‌ನಲ್ಲಿದ್ದ ಲೋಪದೋಷಗಳನ್ನು ಹುಡುಕಿ ಚುನಾವಣಾ ಆಯೋಗ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಜ್ವಲ್‌ ಸಂಸದ ಸ್ಥಾನ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಆಗಾಗ ಹೇಳುತ್ತಿದ್ದರು. ಆದರೆ, ರಾಜಕೀಯ ಬೆಳವಣಿಗೆಗಳಲ್ಲಿ ಎ.ಮಂಜು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದರು. ಆದರೆ, ಕಾಂಗ್ರೆಸಿನಲ್ಲಿಯೇ ಇದ್ದ ಮಗ ಮಂಥರ್‌ಗೌಡನನ್ನು ಬೆಂಬಲಿಸುತ್ತಿದ್ದಾರೆ. 

ಉಪೇಂದ್ರ ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು: ಧಿಕ್ಕಾರ ಕೂಗುವ ಮೂಲಕ ಆಕ್ರೋಶ

ಇದು ಪಕ್ಷದ್ರೋಹಿ ಕೆಲಸ ಎಂದು ಪರಿಗಣಿಸಿ ಎ.ಮಂಜು ಅವರನ್ನು ಬಿಜೆಪಿಯಲ್ಲೂ ಮೂಲೆಗುಂಪು ಮಾಡಲಾಯಿತು. ಅಷ್ಟೊತ್ತಿಗೆ 2023 ರಲ್ಲಿ ವಿಧಾನಸಭಾ ಚುನಾವಣೆ ಬಂದಾಗ ಟಿಕೆಟ್‌ಗಾಗಿ ಜೆಡಿಎಸ್‌ ಬಾಗಿಲು ತಟ್ಟಿದರು. ‘ರಾಜಕೀಯದಲ್ಲಿ ಯಾರು ಶತ್ರುಗಳೂ ಅಲ್ಲ, ಯಾರೂ ಮಿತ್ರರೂ ಅಲ್ಲ’ ಎನ್ನುವ ಮಾತಿನಂತೆಯೇ ಜೆಡಿಎಸ್‌ ನಾಯಕರು ಎ.ಮಂಜು ಅವರನ್ನು ಟಿಕೆಟ್‌ ಕೊಟ್ಟು ಜೆಡಿಎಸ್‌ನೊಳಕ್ಕೆ ಕರೆದುಕೊಂಡರು. ಜೆಡಿಎಸ್‌ನಿಂದ ಟಿಕೆಟ್‌ ಪಡೆದ ಎ.ಮಂಜು ಅರಕಲಗೂಡು ಕ್ಷೇತ್ರದಲ್ಲಿ ಗೆದ್ದು ಶಾಸಕರೂ ಆದರು. ಆದರೆ, ಅದೇ ಪಕ್ಷದ ಏಕೈಕ ಸಂಸದ ಪ್ರಜ್ವಲ್‌ ಮೇಲೆ ಹಾಕಿದ್ದ ದಾವೆ ಮಾತ್ರ ಕೋರ್ಟ್‌ನಲ್ಲಿ ನಡೆಯುತ್ತಲೇ ಇತ್ತು. ಇದೀಗ ತೀರ್ಪು ಬಂದು ಪ್ರಜ್ವಲ್‌ ಸಂಸದ ಸ್ಥಾನ ಕಳೆದುಕೊಂಡಾಗಿದೆ. ಇದಕ್ಕೆ ಅವರದೇ ಪಕ್ಷದ ಶಾಸಕ ಎ.ಮಂಜು ಕಾರಣ ಎನ್ನುವುದು ಜೆಡಿಎಸ್‌ಗೆ ಅರಗಿಸಿಕೊಳ್ಳಲಾಗದ ಸತ್ಯ.