ಬೆಂಗಳೂರು[ಅ.10]: ಹೈಕಮಾಂಡ್‌ ಈಗ ತುಂಬಾ ಸ್ಟ್ರಾಂಗ್‌ (ಶಕ್ತಿಶಾಲಿ) ಆಗಿದೆ. ಮೊದಲಿನ ರೀತಿ ಹೈಕಮಾಂಡ್‌ ಇಲ್ಲ. ಹೀಗಾಗಿ ಯಾರು ಯಾರ ಬಗ್ಗೆ ಚಾಡಿ ಹೇಳಿದರೂ ನಡೆಯುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಮೋದಿ -ಅಮಿತ್ ಶಾಗೆ ಯತ್ನಾಳ್ ಪತ್ರ, ಒಂದೊಂದು ಪಾಯಿಂಟ್ಸ್ ನೋಡ್ಲೇಬೇಕು

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ರಾಜ್ಯದ ಕೇಂದ್ರ ಸಚಿವರು ಹೈಕಮಾಂಡ್‌ ಹತ್ತಿರ ಚಾಡಿ ಹೇಳುತ್ತಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಹೇಳಿಕೆಗೆ ಬುಧವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಮುಗಿಸುವ ಪ್ರಯತ್ನ ಇಲ್ಲಿ ನಡೆಯುವುದಿಲ್ಲ. ಪ್ರಧಾನಿ ಮೋದಿ ಸೇರಿದಂತೆ ಅಮಿತ್‌ ಶಾ ಹಾಗೂ ಬಿ.ಎಲ್‌.ಸಂತೋಷ್‌ ಅವರು ಒಟ್ಟುಗೂಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಂದು ತೀರ್ಮಾನ ಮಾಡಿದ್ದಾರೆ. ಆದ್ದರಿಂದ ಯಾರ ಚಾಡಿ ಮಾತುಗಳೂ ನಡೆಯುವುದಿಲ್ಲ ಎಂದರು.

ರಾಜ್ಯದ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿದ್ದು, ಗುರುವಾರದಿಂದ ಅರಂಭವಾಗುವ ಅಧಿವೇಶನಕ್ಕೆ ನಾವು ಸಜ್ಜಾಗಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.