ಬೆಂಗಳೂರು, (ಜ.06): ಚುನಾವಣೆ ವೇಳೆ ಆಸ್ತಿ ವಿವರ ಬಚ್ಚಿಟ್ಟ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಪಿ.ಸಿ.ಮೋಹನ್ ವಿರುದ್ಧ ವಿಚಾರಣೆ ಮುಂದುವರಿಸಲು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಇದರಿಂದ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್‌ಗೆ ಸಂಕಷ್ಟ ಎದುರಾಗಿದೆ.

ಚುನಾವಣಾ ಪ್ರಮಾಣ ಪತ್ರದಲ್ಲಿ ಸಂಸದ ಪಿ.ಸಿ.ಮೋಹನ್ ಕೆಲ ಆಸ್ತಿ ವಿವರ ಘೋಷಿಸಿಲ್ಲ ಎಂದು ಆನಂದ್.ಟಿ.ಆರ್. ಎಂಬುವವರು ದೂರು ದಾಖಲಿಸಿದ್ದರು. 

ಪಂಚ ರಾಜ್ಯ ಅಸೆಂಬ್ಲಿ ಎಲೆಕ್ಷನ್: ಕರ್ನಾಟಕದ ತ್ರಿಮೂರ್ತಿಗಳಿಗೆ ಮಹತ್ವದ ಜವಾಬ್ದಾರಿ

ಜನಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಪಿ.ಸಿ.ಮೋಹನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಾನ್ ಮೈಕೆಲ್ ಕುನ್ಹಾ ಅರವರಿದ್ದ ಪೀಠ ಸಿಆರ್‌ಪಿಸಿ ಸೆ.190, 200, 202ನಂತೆ ವಿಚಾರಣೆಗೆ ಸೂಚನೆ ನೀಡಿದೆ.