ನವದೆಹಲಿ, (ಜ.06): 2021ರಲ್ಲಿ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪಕ್ಷಗಳು ಚುನಾವಣೆಯ ಪೂರ್ವ ತಯಾರಿ ನಡೆಸಿವೆ. 

ಇನ್ನು ಕಾಂಗ್ರೆಸ್​ ಕೂಡ ಪಕ್ಷದ ನಾಯಕರುಗಳಿಗೆ ಚುನಾವಣೆಯ ಜವಾಬ್ದಾರಿ ಹಂಚಿದ್ದು, ಕರ್ನಾಟಕದ ಮೂರು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಹಿರಿಯ ನಾಯಕ ಕಾಂಗ್ರೆಸ್ ತೊರೆಯುವುದು ಖಚಿತ, ಜೆಡಿಎಸ್ ಸೇರ್ಪಡೆ ಫಿಕ್ಸ್ ..!

ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತ ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನ ಸಭಾ ಚುನಾವಣೆ ನಡೆಯಲಿದೆ. ಅದಕ್ಕೆಂದು ಐದೂ ರಾಜ್ಯಗಳ ಚುನಾವಣಾ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಕರ್ನಾಟಕದ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಕೇರಳದ ಹಿರಿಯ ಚುನಾವಣಾ ವೀಕ್ಷಕರಾಗಿ ಜವಾಬ್ದಾರಿ ನೀಡಿದ್ರೆ, ವೀರಪ್ಪ ಮೊಯ್ಲಿಗೆ ತಮಿಳುನಾಡು, ಪುದುಚೇರಿ ಜವಾಬ್ದಾರಿ ಕೊಡಲಾಗಿದೆ.  ಇನ್ನು ತೀವ್ರ ಕುತೂಹಲ ಮೂಡಿಸಿರುವ ಪಶ್ವಿಮ ಬಂಗಾಳ ಚುನಾವಣಾ ವೀಕ್ಷಕರಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನ ನೇಮಿಸಲಾಗಿದೆ.