ರಾಜ್ಯದಲ್ಲಿ ನಡೆಯಬೇಕಿದ್ದ ವಿಧಾನಪರಿಷತ್ ಚುನಾವಣೆ ಮುಂದೂಡಿಕೆ...!
ಗ್ರಾಮ ಪಂಚಾಯಿತಿ ಬಳಿಕ ಇದೀಗ ವಿಧಾನಪರಿಷತ್ ಎಲೆಕ್ಷನ್‌ಗಳನ್ನು ಸಹ ರಾಜ್ಯ ಚುನಾವಣೆ ಆಯೋಗ ಮುಂದೂಡಿದೆ.
ಬೆಂಗಳೂರು, (ಜೂನ್.08): ರಾಜ್ಯದಲ್ಲಿ ಮೆಲ್ಮನೆಗೆ ನಡೆಯಬೇಕಿದ್ದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ ಎರಡು ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ.
ಕೋವಿಡ್ 19 ಸೋಂಕಿನ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಮತದಾರರ ಭಾಗೀದಾರಿಕೆಯಲ್ಲಿ ಚುನಾವಣೆಗಳನ್ನು ನಡೆಸುವುದು ಅಸಾಧ್ಯವಾಗಿರುವ ಕಾರಣದಿಂದ ರಾಜ್ಯ ಚುನಾವಣೆ ಆಯೋಗ ನಾಲ್ಕು ಪರಿಷತ್ ಚುನಾವಣೆಯನ್ನು ಮುಂದೂಡಿದೆ.
ಗ್ರಾಮ ಪಂಚಾಯಿತಿ ಎಲೆಕ್ಷನ್: ಪಕ್ಷಗಳ ಗಲಾಟೆ ಮಧ್ಯೆ ಚುನಾವಣೆ ಆಯೋಗದಿಂದ ಪ್ರಕಟಣೆ
ಮೆಲ್ಮನೆಗೆ ನಡೆಯಬೇಕಿದ್ದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ ಎರಡು ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ.
ರಾಜ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿನ ತಲಾ ಎರಡು ಸ್ಥಾನಗಳ ಅವಧಿ ಇದೇ ಜೂನ್ 30ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿತ್ತು.
ಆದರೆ ಕೋವಿಡ್ ಸೋಂಕಿನ ಬಾಧೆ ಜೋರಾಗಿರುವುದರಿಂದ ಮತ್ತು ಪೂರ್ವಭಾವಿ ಹಾಗೂ ಚುನಾವಣಾ ತಯಾರಿಗಳನ್ನು ನಡೆಸುವುದು ಅಸಾಧ್ಯವೆಂದು ಕಂಡುಬಂದಿರುವ ಕಾರಣದಿಂದ ಹಾಗೂ ಲಾಕ್ ಡೌನ್ ಸಂಬಂಧಿತವಾಗಿ ಕೇಂದ್ರ ಗೃಹ ಇಲಾಖೆಯ ಮಾರ್ಗದರ್ಶಿ ನಿಯಮಗಳು ಜಾರಿಯಲ್ಲಿರುವುದನ್ನು ಮನಗಂಡು ಚುನಾವಣಾ ಆಯೋಗವು ನಾಲ್ಕು ಕ್ಷೇತ್ರಗಳ ಚುನಾವಣೆಯನ್ನು ಅನಿರ್ಧಾಷ್ಟವಧಿಗೆ ಮುಂದೂಡಿ ಆದೇಶವನ್ನು ಹೊರಡಿಸಿದೆ.
ಇನ್ನು ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಸಹ ಮುಂದೂಡಿರುವುದನ್ನು ಇಲ್ಲಿ ಸ್ಮರಿಸಬಹುದು.