Asianet Suvarna News Asianet Suvarna News

ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ

ಮುಡಾ ಹಗರಣ ಎಂದು ನಮ್ಮ ಮೇಲೆ ಆರೋಪ ಮಾಡಿ ಏನೂ ಬಿಂಬಿಸಲು ಹೊರಟಿದೆ. ಅವರ ಹಗರಣವನ್ನ ನಮ್ಮ ಮೂತಿಗೆ ಒರೆಸುವ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Karnataka former MP DK Suresh outraged against union minister hd kumaraswamy rav
Author
First Published Aug 3, 2024, 2:07 PM IST | Last Updated Aug 5, 2024, 2:17 PM IST

ಬೆಂಗಳೂರು (ಆ.3): ಮುಡಾ ಹಗರಣ ಎಂದು ನಮ್ಮ ಮೇಲೆ ಆರೋಪ ಮಾಡಿ ಏನೂ ಬಿಂಬಿಸಲು ಹೊರಟಿದೆ. ಅವರ ಹಗರಣವನ್ನ ನಮ್ಮ ಮೂತಿಗೆ ಒರೆಸುವ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದದ ಅವರು, ಬಿಜೆಪಿ-ಜೆಡಿಎಸ್ ಕುತಂತ್ರವನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ನಾವು ಜನಾಂದೋಲನ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಮೇಲೆ ಆರೋಪ ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರ ನೋಟಿಸ್ ನೀಡಿರುವುದು ದುರುದ್ದೇಶದಿಂದ ನೀಡಲಾಗಿದೆ. ರಾಜ್ಯಪಾಲರು ತಮ್ಮ ಹುದ್ದೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಬಿಜೆಪಿ ಎಷ್ಟರಪಟ್ಟಿಗೆ ಅಧಿಕಾರ ದುರುಪಯೋಗ ಮಾಡಿಕೊಳ್ತಿದೆ ಅಂತಾ ಇದರಿಂದ ಗೊತ್ತಾಗುತ್ತಿದೆ ಎಂದರು.

10 ವರ್ಷ ಅಲ್ಲ, ಹತ್ತು ತಿಂಗಳು ಅಧಿಕಾರದಲ್ಲಿ ಮುಂದುವರಿಯಿರಿ ನೋಡೋಣ: ಕೇಂದ್ರ ಸಚಿವ ಎಚ್‌ಡಿಕೆ ಸವಾಲು!

ಪ್ರಾಸಿಕ್ಯೂಷನ್ ನೀಡಲು ಅವರ ಬಳಿ ಇನ್ನು ಅನೇಕ ಅರ್ಜಿಗಳಿವೆ. ಆದರೆ ಇದಕ್ಕೇ ಯಾಕೆ ಅಷ್ಟೊಂದು ಪ್ರಾಮುಖ್ಯತೆ ನೀಡಬೇಕು? ಒಬ್ಬ ಖಾಸಗಿ ವ್ಯಕ್ತಿ ಕೊಟ್ಟಿರೋ ಅರ್ಜಿಗೆ ನೋಟಿಸ್ ಕೊಟ್ಟಿದ್ದಾರೆ. ಇದು ಆ ಹುದ್ದೆಗೆ ಗೌರವ ತರುವಂತದ್ದಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ನಾಯಕರು ಉತ್ತರ ಕೊಟ್ಟಿದ್ದಾರೆ ಎಂದರು. ಇದೇ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಮಾಜಿ ಸಂಸದರು. ಕುಮಾರಸ್ವಾಮಿಗೆ ಡಿಕೆ ಶಿವಕುಮಾರ ವಿಚಾರ ಮಾತನಾಡದಿದ್ರೆ ನಿದ್ದೆ ಬರೊಲ್ಲ, ಊಟ ಸೇರಲ್ಲ ಅದಕ್ಕಾಗಿ ಪದೇಪದೆ ಅವರ ಬಗ್ಗೆ ಮಾತಾಡ್ತಾರೆ. ಅವರಿಗೆ ಪಿಕ್ಚರ್ ತೆಗೆದು ಅಭ್ಯಾಸ ಇದೆ. ಅವರು ಪ್ರೊಡ್ಯೂಸರ್, ನಟನೆ, ಹಂಚಿಕೆ ಎಲ್ಲವೂ ಗೊತ್ತಿದೆ. ಹಾಗಾಗಿ ಸುಳ್ಳನ್ನು ಸತ್ಯ ಮಾಡುವುದು ಅವರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios