ಕರ್ನಾಟಕ ಚುನಾವಣೆ ಘೋಷಣೆ ಆಗಿರುವ ಬೆನ್ನಲ್ಲಿಯೇ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರ ಪಟ್ಟಿ ಕೂಡ ರೆಡಿಯಾಗಿದೆ. ಪ್ರಿಯಾಂಕಾ ವಾದ್ರಾ ಗಾಂಧಿಯನ್ನು ರಾಜ್ಯಕ್ಕೆ 3-4 ಬಾರಿ ಕರೆಸುವ ಪ್ಲ್ಯಾನ್‌ ರೂಪಿಸಲಾಗಿದೆ. 

ಬೆಂಗಳೂರು (ಮಾ.29): ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್‌ನಿಂದ ಪ್ರಚಾರ ಪ್ಲಾನ್ ಕೂಡ ರೆಡಿಯಾಗುತ್ತಿದೆ. ಎಐಸಿಸಿ ಸ್ಟಾರ್ ಕ್ಯಾಂಪೇನರ್ ಮೂಲಕ‌ ಪ್ರಚಾರಕ್ಕೆ ಭರ್ಜರಿ ತಯಾರಿ ಮಾಡಲಾಗುತ್ತಿದೆ. ರಾಹುಲ್ ಗಾಂಧಿ, ಸೋನಿಯಾಗಾಂಧಿ ಮೂಲಕ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸರಣಿ ಪ್ರಚಾರ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್‌ ಸಿಂಗ್‌ ಸಕ್ಕು, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಸೇರಿದಂತೆ ಕೆಲ ಘಟಾನುಘಟಿ ನಾಯಕರನ್ನು ರಾಜ್ಯಕ್ಕೆ ಕರೆಸಲು ಪ್ಲ್ಯಾನ್‌ ರೂಪಿಸಲಾಗಿದೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತಯಾರಿ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶನಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ರಾಜ್ಯಕ್ಕೆ ಕನಿಷ್ಢ 3 ರಿಂದ 4 ಬಾರಿ ಕರೆಸುವ ಯೋಚನೆಯಲ್ಲಿ ರಾಜ್ಯ ಕಾಂಗ್ರೆಸ್‌ ಇದೆ. ಆ ಮೂಲಕ ಯುವ ಮತದಾರರನ್ನು ಸೆಳೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಪಕ್ಷವಿದೆ. ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೂಲಕವೂ ಸರಣಿ ಪ್ರಚಾರಕ್ಕೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ಅದರೊಂದಿಗೆ ರಾಜ್ಯದಲ್ಲಿ ವರ್ಚಸ್ಸು ಹೊಂದಿರುವ ನಾಯಕರಿಂದಲೂ ಪ್ರಚಾರದ ಭರಾಟೆಯನ್ನು ಏರಿಸುವ ಇರಾದೆಯಲ್ಲಿದೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಹರಿಪಸ್ರಾದ್, ಎಂ.ಬಿ ಪಾಟೀಲ್, ಪರಮೇಶ್ವರ್ ಸೇರಿದಂತೆ ಕೆಲ ನಾಯಕರಿಂದ ನಿರಂತರ ಪ್ರಚಾರ. ಅದಕ್ಕಾಗಿ 30 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೆಪಿಸಿಸಿ ರೆಡಿ ಮಾಡಿದೆ. ವಿಧಾನಸಭಾ ಕ್ಷೇತ್ರಾವಾರು ಸಮಾವೇಶಗಳ ಆಯೋಜನೆಗೂ ಪ್ಲ್ಯಾನ್‌ ಮಾಡಲಾಗುತ್ತಿದೆ. ಎಲ್ಲಾ 224 ಕ್ಷೇತ್ರಗಳು ಅದರಲ್ಲೂ ಗೆಲ್ಲುವಂತಹ ಕ್ಷೇತ್ರಗಳಲ್ಲಿ ಭರ್ಜರಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲು ಚಿಂತನೆ ಮಾಡುತ್ತಿದೆ.

Karnataka Elections 2023: ನೀತಿ ಸಂಹಿತೆ ಜಾರಿ ಬೆನ್ನಲ್ಲಿಯೇ ಶಿವಮೊಗ್ಗದಲ್ಲಿ 4 ಲಕ್ಷ ರೂಪಾಯಿ ವಶ!

ಸಿನಿಮಾ ಸ್ಟಾರ್‌ಗಳಿಂದಲೂ ಪ್ರಚಾರ: ರಾಷ್ಟ್ರ ಹಾಗೂ ರಾಜ್ಯ ನಾಯಕರು ಮಾತ್ರವಲ್ಲದೆ, ಪ್ರಮುಖ ಸಿನಿಮಾ ತಾರೆಯರಿಂದಲೂ ಪ್ರಚಾರ ನಡೆಸಲು ತಂತ್ರ ರೂಪಾಗಿದೆ. ಹೆಚ್ಚು ಜನಪ್ರಿಯರಾಗಿರುವ ಸಿನಿಮಾ ತಾರೆಯರ ಮೂಲಕವೂ ಪ್ರಚಾರಕ್ಕೆ ಪ್ಲ್ಯಾನ್‌ ಮಾಡಲಾಗುತ್ತದೆ. ಸ್ಯಾಂಡಲ್‌ವುಡ್‌ ಹಾಗೂ ಕರ್ನಾಟಕದ ಅಯಾ ಭಾಗದಲ್ಲಿ ಜನಪ್ರಿಯರಾಗಿರುವ ದೇಶದ ವಿವಿಧ ಕಡೆಗಳ ಸಿನಿಮಾ ನಟ-ನಟಿಯರನ್ನು ಕರೆಸುವ ಪ್ಲ್ಯಾನ್‌ ಕೂಡ ರೂಪಿಸಲಾಗಿದೆ.

ಕಳೆದ ಮೂರು ಅವಧಿಯ ಸಿಎಂಗಳ ಕೊನೆಯ ಕಾರ್ಯಕ್ರಮ ರದ್ದು: ವಿಶೇಷತೆಗೆ ಸಾಕ್ಷಿಯಾದ ಕೊಪ್ಪಳ..!