*  ಅವಧಿಪೂರ್ವ ಚುನಾವಣೆ ಬಂದರೆ ಅಚ್ಚರಿ ಇಲ್ಲ*  ರಾಜ್ಯ​ದಲ್ಲಿ ಯಾವಾಗ ಚುನಾ​ವಣೆ ನಡೆ​ದ​ರೂ ನಾವು ಅದನ್ನು ಎದು​ರಿ​ಸಲು ಸಿದ್ಧ *  ಏ.10ರಿಂದ ರಾಜ್ಯಾ​ದ್ಯಂತ ಪಕ್ಷ ಸಂಘ​ಟನೆ 

ರಾಮ​ನ​ಗರ(ಮಾ.31):  ರಾಜ್ಯ​ದ​ಲ್ಲಿ ಅವ​ಧಿಗೂ ಮುನ್ನ ಚುನಾವಣೆ ಬಂದರೂ ಅಚ್ಚರಿ ಇಲ್ಲ. ಗುಜರಾತ್‌(Gujarat) ಜೊತೆಗೆ ನಮ್ಮಲ್ಲೂ ಚುನಾವಣೆ(Election) ಆಗ​ಬ​ಹು​ದು ಅಥವಾ ಮುಂದಿನ ಏಪ್ರಿಲ…ನಲ್ಲೂ ನಡೆಯಬಹುದು ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ(HD Kumaraswamy) ತಿಳಿ​ಸಿ​ದ​ರು. ನಗ​ರ​ದ​ಲ್ಲಿ ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ರಾಜ್ಯ​ದಲ್ಲಿ ಯಾವಾಗ ಚುನಾ​ವಣೆ ನಡೆ​ದ​ರೂ ನಾವು ಅದನ್ನು ಎದು​ರಿ​ಸಲು ಸಿದ್ಧ ಎಂದು ತಿಳಿ​ಸಿ​ದ​ರು.

ಕರ್ನಾಟಕದಲ್ಲಿ(Karnataka) ಚುನಾವಣಾ ವರ್ಷ ಪ್ರಾರಂಭವಾಗಿದ್ದು, ಇನ್ನು ರಾಷ್ಟ್ರೀಯ ಪಕ್ಷಗಳ ನಾಯಕರು ಮತ​ಬೇ​ಟೆ​ಗೆ ಆಗ​ಮಿ​ಸು​ತ್ತಾ​ರೆ. ಮೊದಲು ಅವರು ನಮ್ಮ ರಾಜ್ಯದ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಂಡು ಬರಲಿ. ರಾಷ್ಟ್ರೀಯ ಪಕ್ಷ​ಗಳು ಕರ್ನಾ​ಟ​ಕದ ನದಿ ನೀರಿನ ಸಮಸ್ಯೆ, ಅಭಿ​ವೃದ್ಧಿ ವಿಚಾ​ರದಲ್ಲಿ ಯಾವ​ತ್ತೂ ಗಂಭೀ​ರ​ವಾ​ಗಿಲ್ಲ. ಇದೇ ವಿಷ​ಯ​ ಮುಂದಿ​ಟ್ಟು​ಕೊಂಡು ನಾವು ಜನರ ಮುಂದೆ ಹೋಗು​ತ್ತೇವೆ ಎಂದರು.
ಕಾಂಗ್ರೆಸ್‌(Congress) ಮತ್ತು ಬಿಜೆಪಿ(BJP) ಕರ್ನಾ​ಟ​ಕಕ್ಕೆ ಮಾಡಿ​ರುವ ಅನ್ಯಾ​ಯದ ವಿರುದ್ಧ ಜೆಡಿ​ಎ​ಸ್‌(JDS)s ಹೋರಾಟ ನಡೆ​ಸ​ಲಿದ್ದು, ಏ.10ರಿಂದ ರಾಜ್ಯಾ​ದ್ಯಂತ ಪಕ್ಷ ಸಂಘ​ಟನೆ ಆರಂಭಿ​ಸ​ಲಾ​ಗು​ವುದು ಎಂದು ಇದೇ ವೇಳೆ ಕುಮಾ​ರ​ಸ್ವಾಮಿ ತಿಳಿ​ಸಿ​ದರು.

Halal Row: ಕಲಾಪದಲ್ಲಿಯೂ ಹಲಾಲ್ ಪ್ರತಿಧ್ವನಿ, HDK ಓದಿದ ಕರಪತ್ರ

ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK

ಮುಸ್ಲಿಂ ವರ್ತಕರ ಅಂಗಡಿಗಳಲ್ಲಿ ಹೋಗಿ ವ್ಯಾಪರ (Muslim Traders) ಮಾಡದೇ ಕೇವಲ ಹಿಂದು ಅಂಗಡಿಗಳಿಗೆ ಹೋಗಿ ವ್ಯಾಪಾರ ವಹಿವಾಟು ಮಾಡಿ ಎಂದು ವಾಟ್ಸಪ್‌ ಗಳಲ್ಲಿ ಅಭಿಯಾನ ಶುರುವಾಗಿದ್ದು, ಇದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಕೆಲ ಹಿಂದು ಸಂಘಟನೆಗಳ ನಡುವಳಿಕೆ ಹಾಗೂ ರಾಜ್ಯ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ್ದರು. ಇವರು ದೇಶ ಉಳಿಸುವವರಲ್ಲ... ಅಮಾಯಕರು ದೇಶ ಉಳಿಸಿದ್ರು. ಯುವಕರಿಗೆ ಹೇಳುತ್ತೇನೆ ಯಾರು ಯುವಕರು ಇದಕ್ಕೆ ಬಲಿಯಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ಅವರು ಮಣ್ಣಿಗೆ ಹೋಗುವವರು, ನಾವು ಮಣ್ಣಿಗೆ ಹೋಗುವವರೇ... ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಕರ್ನಾಟಕದ ಜನರು ಬಹಿಷ್ಕಾರ ಮಾಡಬೇಕು. ಬಹಿಷ್ಕಾರ ಮಾಡಿಲ್ಲಾಂದ್ರೆ ಮುಂದೆ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರಲ್ಲ ಎಂದು ಎಚ್ಚರಿಕೆ ನೀಡಿದರು.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ರಾಜ್ಯದಲ್ಲಿ ಸರ್ಕಾರದ ಇದ್ಯಾ ?

ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರ ಇದ್ಯಾ..? ಏನು ಮಾಡ್ತಿದೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ರು.
ಮುಖ್ಯಮಂತ್ರಿಗಳ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ರಿ...ಈ ರೀತಿಯ ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದ್ದರು. 

ಈಗ ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ಕಾರಣ ಎಂದು ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ನಮಗೆ ಕಾಂಗ್ರೆಸ್ ನವರು ಜೆಡಿಎಸ್ ಗೆ ಕೊಟ್ಟ ಕಿರುಕುಳ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್... ಮತ್ತೊಂದು ಕಡೆ ಬಿಜೆಪಿಯವರು ಕಾರಣ ಎಂದು ಗುಡುಗಿದರು.