2018ರ ವಿಧಾನಸಭೆಗೆ ಹೋಲಿಸಿದರೆ, ಕಾಂಗ್ರೆಸ್‌ ಪಕ್ಷ ವೋಟ್‌ ಶೇರ್‌ನಲ್ಲಿ ಬರೋಬ್ಬರಿ ಶೇ.4ರಷ್ಟು ಏರಿಕೆಯಾಗಿದೆ. ಇದು ಪಕ್ಷ ಗೆದ್ದ ಸೀಟ್‌ಗಳಲ್ಲೂ ವ್ಯಕ್ತವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟಾರೆ ಶೇ. 38.04ರಷ್ಟು ವೋಟ್‌ ಶೇರ್‌ ಪಡೆದಿದ್ದರೆ, ಈ ಬಾರಿ ಶೇ. 42.88ಕ್ಕೆ ಏರಿದೆ.

ಬೆಂಗಳೂರು (ಮೇ.14): ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಾದ್ಯಂತ ಕಾಂಗ್ರೆಸ್ ತನ್ನ ವೋಟ್‌ ಶೇರ್‌ಗಳನ್ನುಶೇಕಡಾ 4 ಕ್ಕಿಂತ ಹೆಚ್ಚಿಸಿಕೊಂಡಿದೆ. ಇದರಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬರೋಬ್ಬರಿ 135 ಸೀಟ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೇ.10 ರಂದು ನಡೆದ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬಹುತೇಕ ಎಲ್ಲಾ ಕಡೆ ಕಾಂಗ್ರೆಸ್‌ನ ಮತ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಒಂದೆಡೆ ಕಾಂಗ್ರೆಸ್‌ ಪಕ್ಷದ ವೋಟ್‌ ಶೇರ್‌ ಅಂದಾಜು ಶೇ. 4ಕ್ಕಿಂತ ಹೆಚ್ಚು ಏರಿಕೆಯಾಗಿದ್ದರೆ, ಜೆಡಿಎಸ್‌ನ ವೋಟ್‌ ಶೇರ್‌ನಲ್ಲಿ ಮಹಾಕುಸಿತ ಉಂಟಾಗಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಜೆಡಿಎಸ್‌ ವೋಟ್‌ ಶೇರ್‌ನಲ್ಲಿ ಶೇ.5ಕ್ಕಿಂತ ಹೆಚ್ಚು ಪ್ರಮಾಣದ ಏರಿಕೆಯಾಗಿದೆ ಎಂದು ವಿಧಾನಸಭೆ ಚುನಾವಣೆಯ ಕೇಂದ್ರ ಚುನಾವಣಾ ಆಯೋಗದ ಡೇಟಾ ತಿಳಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಶೇ. 38.04ರಷ್ಟು ವೋಟ್‌ ಶೇರ್‌ ಪಡೆದುಕೊಂಡಿದ್ದರೆ, ಬಿಜೆಪಿ ಶೇ.36.22 ರಷ್ಟು ವೋಟ್‌ಗಳನ್ನು ಪಡೆದುಕೊಂಡಿತ್ತು. ಜಾತ್ಯಾತೀತ ಜನತಾದಳ ಪಕ್ಷ ಶೇ. 18.36ರಷ್ಟು ವೋಟ್‌ ಶೇರ್‌ ಪಡೆದಿತ್ತು.

ಆದರೆ, ಈಗಷ್ಟೇ ಮುಗಿದ 16ನೇ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ವೋಟ್‌ ಶೇರ್‌ ಪ್ರಮಾಣ ದಿಗ್ಗನೆ ಏರಿದ್ದು, ಬರೋಬ್ಬರಿ 42.88ರಷ್ಟು ವೋಟ್‌ ಶೇರ್‌ ಪಡೆದುಕೊಂಡಿದೆ. ಇನ್ನು ಜೆಡಿಎಸ್‌ನ ವೋಟ್‌ಶೇರ್‌ನಲ್ಲಿ ದೊಡ್ಟ ಮಟ್ಟದ ಕುಸಿತವಾಗಿದ್ದು ಶೇ. 13.29ಕ್ಕೆ ಇಳಿದಿದ್ದರೆ, ಬಿಜೆಪಿಯ ವೋಟ್‌ ಶೇರ್‌ ಪ್ರಮಾಣ ಶೇ. 36ಕ್ಕೆ ಕುಸಿದಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸೀಟ್‌ನಲ್ಲಿ ಗೆಲುವು ಕಂಡಿದ್ದರೆ ಬಿಜೆಪಿ 65 ಹಾಗೂ ಜೆಡಿಎಸ್‌ 19 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ವರದಿಗಳ ಪ್ರಕಾರ, ಕಾಂಗ್ರೆಸ್‌ ಕಿತ್ತೂರು ಕರ್ನಾಟಕ ವಲಯದಲ್ಲಿ ತನ್ನ ದೊಡ್ಡ ಪಾಲನ್ನು ಪಡೆದುಕೊಂಡಿದೆ. ಒಟ್ಟಾರೆ 50 ಕ್ಷೇತ್ರಗಳಿರುವ ಈ ವಲಯದಲ್ಲಿ ಕಾಂಗ್ರೆಸ್‌ ಪಕ್ಷ 33 ಸೀಟ್‌ಗಳಲ್ಲಿ ಗೆಲುವು ಸಾಧಿಸಿದೆ.

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದ್ದ 41 ಸೀಟ್‌ಗಳ ಪೈಕಿ ಕಾಂಗ್ರೆಸ್‌ ಪಕ್ಷ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದೇ ವಲಯದಲ್ಲಿ ಕಾಂಗ್ರೆಸ್‌ ಕಳೆದ ಬಾರಿ 20 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಇನ್ನೊಂದೆಡೆ ಈ ವಲಯದಲ್ಲಿ ಬಿಜೆಪಿ 17 ಕ್ಷೇತ್ರವನ್ನು ಕಳೆದ ಬಾರಿ ಗೆದ್ದಿದ್ದರೆ, ಈ ಬಾರಿ ಕೇವಲ 10 ಸೀಟ್‌ಗಳಲ್ಲಿ ಗೆಲುವು ಕಂಡಿದೆ.

BELAGAVI ELECTION RESULT 2023: ಆಪ್ತರ ಸೋಲಿನ ಬಳಿಕ ರಮೇಶ ಜಾರಕಿಹೊಳಿ ಏಕಾಂಗಿ..!

ಇನ್ನು ಒಕ್ಕಲಿಗ ಪ್ರಾಬಲ್ಯವಿರುವ ಕರ್ನಾಟಕದ ದಕ್ಷಿಣದ ಹಳೆ ಮೈಸೂರು ವಲಯದಲ್ಲಿ ಕಾಂಗ್ರೆಸ್‌ ಜಾಕ್‌ಪಾಟ್‌ ಹೊಡೆದಿದ್ದು. 59 ಕ್ಷೇತ್ರಗಳ ಪೈಕಿ 37ರಲ್ಲಿ ಗೆಲುವು ಕಂಡಿದೆ. ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ ಬರೋಬ್ಬರಿ 29 ಕ್ಷೇತ್ರಗಳನ್ನು ಗೆದ್ದಿದ್ ಜೆಡಿಎಸ್‌ ಈ ಬಾರಿ ಕೇವಲ 14 ಸೀಟ್‌ನಲ್ಲಿ ಗೆದ್ದಿದ್ದರೆ, ಕಳೆದ ಬಾರಿ 9 ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಗೆದ್ದಿದ್ದು 6 ಕ್ಷೇತ್ರಗಳಲ್ಲಿ ಮಾತ್ರ.

ನನ್ನ ಗೆಲುವು ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಅರ್ಪಣೆ: ಬಿಜೆಪಿ ನೂತನ ಶಾಸಕ ಕಿರಣ್‌ ಕೊಡ್ಗಿ