ಪ್ರಸಕ್ತ ಚುನಾವಣೆಯಲ್ಲಿ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್‌ ಬಿಜೆಪಿಯನ್ನು ಬೆಂಬಲಿಸಿದರಾದರೂ ಪಕ್ಷದ ಯಾವೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಲೀ, ಎರಡನೇ ಸ್ಥಾನ ದೊರಕಿಸುವುದಕ್ಕಾಗಲೀ, ಕೆಲವರ ಠೇವಣಿ ಉಳಿಸುವುದಕ್ಕೂ ಸಾಧ್ಯವಾಗದಿರುವುದು ವಿಪರ್ಯಾಸವೆನಿಸಿದೆ.

ಮಂಡ್ಯ (ಮೇ.14): ಪ್ರಸಕ್ತ ಚುನಾವಣೆಯಲ್ಲಿ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್‌ ಬಿಜೆಪಿಯನ್ನು ಬೆಂಬಲಿಸಿದರಾದರೂ ಪಕ್ಷದ ಯಾವೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಲೀ, ಎರಡನೇ ಸ್ಥಾನ ದೊರಕಿಸುವುದಕ್ಕಾಗಲೀ, ಕೆಲವರ ಠೇವಣಿ ಉಳಿಸುವುದಕ್ಕೂ ಸಾಧ್ಯವಾಗದಿರುವುದು ವಿಪರ್ಯಾಸವೆನಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸಾಧಿಸಿದ ಗೆಲುವು, ಜೆಡಿಎಸ್‌ಗೆ ಪ್ರಬಲ ಎದುರಾಳಿಯಾಗಿ ಕಂಡುಬಂದಿದ್ದ ಸುಮಲತಾ ವರ್ಚಸ್ಸು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರ ನೆಲೆ ಕಂಡುಕೊಳ್ಳುವುದಕ್ಕೆ ನೆರವಾಗಲಿದೆ ಎಂದು ಬಿಜೆಪಿ ಭಾವಿಸಿತ್ತು. ಅದೇ ಕಾರಣದಿಂದಲೇ ಸುಮಲತಾ ಅವರಿಗೆ ರತ್ನಗಂಬಳಿ ಹಾಸಿ ಕಮಲ ಪಡೆ ನಾಯಕರು ಪಕ್ಷಕ್ಕೆ ಬರಮಾಡಿಕೊಂಡಿದ್ದರು.

ಶ್ರೀರಂಗಪಟ್ಟಣದಿಂದ ತಮ್ಮ ಆಪ್ತ ಎಸ್‌.ಸಚ್ಚಿದಾನಂದ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಎಲ್ಲ ಕ್ಷೇತ್ರಗಳಲ್ಲೂ ಭರ್ಜರಿಯಾಗಿ ಪ್ರಚಾರವನ್ನೂ ನಡೆಸಿದ್ದರು. ಜೆಡಿಎಸ್‌ ಪಕ್ಷದ ಕುಟುಂಬ ರಾಜಕಾರಣ, ನಾಯಕರನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದರು. ಆದರೆ, ಅವರ ಪ್ರಭಾವ, ವರ್ಚಸ್ಸು ಬಿಜೆಪಿ ಅಭ್ಯರ್ಥಿಗಳಿಗೆ ಕೊಂಚ ಮಟ್ಟಿನ ಲಾಭವನ್ನು ತರಲಿಲ್ಲ. ಇದಲ್ಲದೆ ಬಿಜೆಪಿ ಸೇರ್ಪಡೆಗೊಂಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇರಲಿಲ್ಲ: ಸುಮಲತಾ ಅಂಬರೀಶ್‌

ಯಾವುದೇ ಪಕ್ಷ ನನ್ನ ಟಾರ್ಗೆಟ್‌ ಅಲ್ಲ: ಪ್ರ​ಧಾನಮಂತ್ರಿ ನ​ರೇಂದ್ರ ​ಮೋ​ದಿ ಆ​ಡ​ಳಿತ ಮೆಚ್ಚಿ ಚುನಾವಣೆಯಲ್ಲಿ ಬಿ​ಜೆಪಿ ಬೆಂಬ​ಲಿ​ಸು​ತ್ತಿ​ದ್ದೇ​ನೆಯೇ ಹೊ​ರತು ಯಾ​ವುದೋ ಒಂದು ಪ​ಕ್ಷ​ವನ್ನು ಟಾರ್ಗೆಟ್‌ ಮಾಡಿಕೊಂಡು ಮುಗಿಸಲು ನಾನು ಬಂದಿಲ್ಲ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌ ಸ್ಪಷ್ಟಪಡಿಸಿದರು. ಜಿಲ್ಲಾ ಬಿ​ಜೆಪಿ ವಿ​ಕಾಸ ಭ​ವ​ನ​ದ​ಲ್ಲಿ ನ​ಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತನಾಡಿ, ಪ​ಕ್ಷದ ಶಿಸ್ತು, ಬ​ದ್ಧತೆ, ಕಾರ್ಯವೈಖರಿಮೆಚ್ಚಿ ಬಿ​ಜೆಪಿ ಬೆಂಬ​ಲಿ​ಸು​ತ್ತಿ​ದ್ದೇನೆ. ಯಾವುದೇ ಪಕ್ಷವನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ನಾನೆಂದಿಗೂ ಮಾಡುವುದಿಲ್ಲ ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು.

ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ನೊಂದವರ ಸಮಸ್ಯೆಗಳಿಗೆ ಸ್ಪಂದನೆ ಮುಖ್ಯ: ಅ​ತಿ​ವೃಷ್ಟಿವೇಳೆ ಪ್ರ​ಧಾ​ನಿ​ಯಂತಹ ಹು​ದ್ದೆ​ಯ​ಲ್ಲಿ​ರು​ವ​ವರು ಸ್ಥ​ಳಕ್ಕೆ ಬ​ರ​ಬೇ​ಕೆಂದೇನೂ ಇಲ್ಲ. ಆಡಳಿತ ನಡೆಸುವವರು ನೊಂದ​ವ​ರ ಸ​ಮ​ಸ್ಯೆ​ಗ​ಳಿಗೆ ಸ್ಪಂದಿ​ಸು​ವುದು ಅ​ಗತ್ಯ. ಮನೆ ಕ​ಳೆ​ದು​ಕೊಂಡ​ವ​ರಿಗೆ, ಹಾ​ನಿ​ಗೊ​ಳ​ಗಾ​ದ​ವ​ರಿಗೆ 1 ಲಕ್ಷ ರು. ನಿಂದ 5 ಲ​ಕ್ಷ​ ರು.​ವ​ರೆಗೂ ಪ​ರಿ​ಹಾರ ನೀ​ಡ​ಲಾ​ಗಿದೆ. ಇಂತಹ ಕಾ​ರ‍್ಯ​ಗಳು ಸ​ಮ​ರೋ​ಪಾ​ದಿ​ಯಲ್ಲಿ ನ​ಡೆ​ಯ​ಬೇಕೋ ಅ​ಥವಾ ಅ​ವರು ಖುದ್ದು ಭೇಟಿ ನೀಡಿ ಭ​ರ​ವಸೆ ನೀಡಿ ಹೋ​ಗು​ವುದು ಮು​ಖ್ಯವೋ ಎಂದು ಪ್ರ​ಶ್ನಿ​ಸಿದರು. ಡ​ಬಲ್‌ ಎಂಜಿನ್‌ ಸರ್ಕಾರ​ಗಳ ಜ​ನ​ಪರ ಕಾ​ರ‍್ಯ​ಗ​ಳಿಂದಾಗಿ ಜನ ಬಿ​ಜೆ​ಪಿ​ಯತ್ತ ಮುಖ ಮಾ​ಡಿ​ದ್ದಾರೆ. ಈ ಬಾರಿ ಜಿ​ಲ್ಲೆ​ಯಲ್ಲೂ ಸಹ ನಿ​ರೀ​ಕ್ಷೆಗೂ ಮೀ​ರಿದ ಫ​ಲಿ​ತಾಂಶ ಬ​ರುವ ಸಾ​ಧ್ಯ​ತೆ​ಗ​ಳಿ​ವೆ. ಈ ಚು​ನಾ​ವಣೆ ಮುಂದಿನ ಲೋ​ಕ​ಸಭಾ ಚು​ನಾ​ವ​ಣೆಗೆ ದಿ​ಕ್ಸೂ​ಚಿ​ಯಾ​ಗ​ಲಿದೆ ಎಂ​ದ​ರು.