Asianet Suvarna News Asianet Suvarna News

Dakshina Kannada Election Result 2023: ಸುಳ್ಯಕ್ಕೆ ಮುರುಳ್ಯ, ದಕ್ಷಿಣ ಕನ್ನಡ ಬಿಜೆಪಿಗೆ ಭದ್ರ

ದಕ್ಷಿಣ ಕನ್ನಡದಲ್ಲಿ ಈ ಬಾರಿ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ ಮತ್ತೆ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದೆ. ಜಿಲ್ಲೆಯಲ್ಲಿ ಓರ್ವ ಮಹಿಳಾ ಅಭ್ಯರ್ಥಿ ಗೆಲುವು ಕಂಡಿದ್ದಾರೆ.

karnataka-election-result-2023-bjp victiry in dakshinaka Kannda assembly-constituencies-winning-candidates-gow
Author
First Published May 13, 2023, 10:05 PM IST

ಮಂಗಳೂರು (ಮೇ.13): 2018ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಗೆಲ್ಲುವ ಮೂಲಕ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿತ್ತು. ಈ ಬಾರಿ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. 2 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿ, ಈ ಬಾರಿ ಎಂಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಹೊಸಮುಖಗಳನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್‌ ಕೂಡ ಐದು ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿತ್ತು. ಪುತ್ತೂರು ಮತ್ತು ಉಳ್ಳಾಲದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಕಂಡಿದೆ.

ಜಿಲ್ಲೆಯ ಒಟ್ಟು ಮತದಾರರು: 1781389
ಪುರುಷ ಮತದಾರರು:870991
ಮಹಿಳಾ ಮತದಾರರು:910314
ಇತರೆ:84
ಈ ಬಾರಿಯ ಶೇಕಡಾವಾರು ಮತದಾನ: 76.25%

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಮೊದಲ ಅವಧಿಯಲ್ಲಿ ಗೆದ್ದು ಬಳಿಕ ಸಮಾಜ ಸೇವೆಯಿಂದ ‘ಶ್ರಮಿಕ’ ಶಾಸಕ ಎಂದೇ ಕರೆಸಿಕೊಳ್ಳುತ್ತಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ   ಎರಡನೇ ಬಾರಿ ಕೂಡ ಗೆಲುವು ಪಡೆದು ವಿಧಾನಸಭೆಗೆ ಲಗ್ಗೆ ಇಟ್ಟಿದ್ದಾರೆ. ಇವರಿಗೆ ಪ್ರಮುಖ ಎದುರಾಳಿ ಕಾಂಗ್ರೆಸ್‌ನ ರಕ್ಷಿತ್‌ ಶಿವರಾಮ್‌.  ಕಾಂಗ್ರೆಸ್‌ ಹೊಸಮುಖವನ್ನುಈ ಬಾರಿ ಕಣಕ್ಕೆ ಇಳಿಸಿತ್ತು. ರಕ್ಷಿತ್‌ ಶಿವರಾಮ್‌ ಅವರು ಮಾಜಿ ಪೊಲೀಸ್‌ ಅಧಿಕಾರಿಯ ಪುತ್ರನಾಗಿದ್ದು, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರ ಸಂಬಂಧಿ.  ಇವರಿಬ್ಬರ ನಡುವೆ ನೇರ ಹಣಾಹಣಿ ಇತ್ತು.

ಹರೀಶ್ ಪೂಂಜಾ, ಬಿಜೆಪಿ- 1,01,004
ರಕ್ಷಿತ್ ಶಿವರಾಂ- ಕಾಂಗ್ರೆಸ್- 82,788
ಗೆಲುವಿನ ಅಂತರ- 18,216

ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ: ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್‌ ನಾಲ್ಕನೇ ಬಾರಿಗೆ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಕಳೆದ ಅವಧಿಯಲ್ಲಿ ದ.ಕ.ದಲ್ಲೇ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದ್ದು. ಆದರೆ, ಈ ಬಾರಿ ಗೆಲುವಿನ ಅಂತರ ಕಡಿಮೆ ಆಗಿದೆ.  ಕಾಂಗ್ರೆಸ್‌, ಯುವ ಅಭ್ಯರ್ಥಿ ಮಿಥುನ್‌ ರೈ ಸೋಲು ಕಂಢಿದ್ದಾರೆ. ಕೋಟ್ಯಾನ್‌, ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿದ್ದರು.

ಉಮಾನಾಥ್ ಕೋಟ್ಯಾನ್, ಬಿಜೆಪಿ- 86,925
ಮಿಥುನ್ ರೈ, ಕಾಂಗ್ರೆಸ್- 64,457
ಗೆಲುವಿನ ಅಂತರ- 22,468

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ: ಮಂಗಳೂರು ದಕ್ಷಿಣದಲ್ಲಿ ಈ ಬಾರಿಯೂ 2018ರಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ  ಮುಖಾಮುಖಿಯಾಗಿದ್ದರು. ಹಾಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಎರಡನೇ ಅವಧಿಗೆ ಗೆಲುವು ಕಂಡಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಆರ್‌.ಲೋಬೋ  ಸೋಲು ಕಂಡಿದ್ದಾರೆ.  ಕ್ರೈಸ್ತರು ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಮೂರನೇ ಬಾರಿ ಟಿಕೆಟ್‌ ಪಡೆಯುಲ್ಲಿ ಜೆ.ಆರ್‌.ಲೋಬೋ ಯಶಸ್ವಿಯಾಗಿದ್ದರು.  

ವೇದವ್ಯಾಸ ಕಾಮತ್, ಬಿಜೆಪಿ- 91,437
ಜೆ.ಆರ್.ಲೋಬೋ, ಕಾಂಗ್ರೆಸ್- 67,475
ಗೆಲುವಿನ ಅಂತರ- 23,962
 
ಮಂಗಳೂರು ವಿಧಾನ ಸಭಾ ಕ್ಷೇತ್ರ: ಮಂಗಳೂರು(ಉಳ್ಳಾಲ), ಹಾಲಿ ಶಾಸಕ ಕಾಂಗ್ರೆಸ್‌ನ ಯು.ಟಿ.ಖಾದರ್‌ 4ನೇ ಬಾರಿಗೆ ಗೆದ್ದು ವಿಧಾನ ಸಭೆ ಪ್ರವೇಶಿಸಿದ್ದಾರೆ. ತಂದೆ ಯು.ಟಿ.ಫರೀದ್‌ ನಿಧನದ ನಂತರ ಅಲ್ಪಾವಧಿಗೆ ಉಪಚುನಾವಣೆಯಲ್ಲಿ ಪುತ್ರ ಯು.ಟಿ. ಖಾದರ್‌ ಶಾಸಕರಾದರು. ಕಳೆದ ಮೂರು ಅವಧಿಯಲ್ಲೂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಖಾದರ್ ಮತ್ತೆ ಗೆದ್ದು ಭೀಗಿದ್ದಾರೆ.  ಈ ಬಾರಿ ಬಿಜೆಪಿ ಹೊಸಮುಖವಾಗಿ ಸೌಮ್ಯವಾದಿ ಮುಖಂಡ ಎನಿಸಿದ, ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್‌ ಕುಂಪಲ ಅವರನ್ನು ಸ್ಪರ್ಧೆಗೆ ಇಳಿಸಿತ್ತು. ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆದ್ದ ಇತಿಹಾಸ ಬಿಟ್ಟರೆ, ಉಳಿದಂತೆ ಕಾಂಗ್ರೆಸ್‌ನದ್ದೇ ಅಧಿಪತ್ಯ. ಇಲ್ಲಿ ಎಸ್‌ಡಿಪಿಐ ಕೂಡ ಕಾಂಗ್ರೆಸ್‌ ಗೆಲುವಿಗೆ ಅಡ್ಡಗಾಲು ಹಾಕಲು ಮುಂದಾಗಿತ್ತು. ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತಾದರೂ ಅಂತಿಮ ದಿನ ದಿಢೀರ್‌ ಆಗಿ ಅಭ್ಯರ್ಥಿ ನಾಮಪತ್ರ ವಾಪಸ್‌  ಪಡೆದಿತ್ತು.

ಯು.ಟಿ.ಖಾದರ್, ಕಾಂಗ್ರೆಸ್- 83,219
ಸತೀಶ್ ಕುಂಪಲ, ಬಿಜೆಪಿ- 60,429
ರಿಯಾಜ್ ಪರಂಗೀಪೇಟೆ, ಎಸ್ಡಿಪಿಐ- 15,054
ಗೆಲುವಿನ ಅಂತರ- 22790

ಸುಳ್ಯ ವಿಧಾನ ಸಭಾ ಕ್ಷೇತ್ರ: ಪರಿಶಿಷ್ಟಜಾತಿ(ಎಸ್‌ಸಿ) ಮೀಸಲು ಕ್ಷೇತ್ರ ಸುಳ್ಯದಲ್ಲಿ ಮೊದಲ ಬಾರಿಗೆ ಸ್ಫರ್ಧಿಸಿದ್ದ ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯಗೆ ಗೆಲುವಾಗಿದೆ. ಈ ಮೂಲಕ ಮೊದಲ ಬಾರಿಗೆ ಮುರುಳ್ಯ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಖರ್ಗೆ  ಅವರ ಆಪ್ತ ಜಿ ಕೃಷ್ಣಪ್ಪಗೆ ಸೋಲಾಗಿದೆ. ಈ ಬಾರಿ ಇಲ್ಲಿ ಇಬ್ಬರೂ ಕೂಡ ಹೊಸ ಮುಖಗಳಾಗಿತ್ತು. ಹಾಲಿ ಶಾಸಕ ಅಂಗಾರ ಅವರು ಎಂಟನೇ ಬಾರಿ ಸ್ಪರ್ಧಿಸುವ ಆಕಾಂಕ್ಷೆಯಲ್ಲಿದ್ದರು. ಆದರೆ ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಇದು ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಣೆವರೆಗೆ ಪರಿಣಾಮ ಬೀರಿತ್ತು. ಕೊನೆಗೆ ಪಕ್ಷ ನಾಯಕರು ಅಂಗಾರ ಅವರನ್ನು ಸಮಾಧಾನಪಡಿಸಿ ಮತ್ತೆ ಸಕ್ರಿಯರಾಗುವಂತೆ ಮಾಡಿದ್ದರು.
ಭಾಗೀರಥಿ ಮುರುಳ್ಯ, ಬಿಜೆಪಿ- 93,911
ಕೃಷ್ಣಪ್ಪ, ಕಾಂಗ್ರೆಸ್- 63,037
ಗೆಲುವಿನ ಅಂತರ- 30,874

ಬಂಟ್ವಾಳ ವಿಧಾನ ಸಭಾ ಕ್ಷೇತ್ರ: ಬಂಟ್ವಾಳದಲ್ಲಿ ಹಾಲಿ ಶಾಸಕ ಬಿಜೆಪಿಯ ರಾಜೇಶ್‌ ನಾಯ್ಕ್‌ ಎರಡನೇ ಬಾರಿ ಗೆಲುವು ಕಂಡಿದ್ದಾರೆ.  ಮಾಜಿ ಸಚಿವ ರಮಾನಾಥ ರೈ ಅವರು ಕಾಂಗ್ರೆಸ್‌ನಿಂದ ಸೋಲು ಕಂಡಿದ್ದಾರೆ.  ಈ ಮೂಲಕ ಎರಡು ಮೂರನೇ ಬಾರಿಗೆ ರಮಾನಾಥ ರೈಗೆ ಸೋಲಾಗಿದೆ. ರಮಾನಾಥ ರೈಗೆ ಇದು ಒಂಭತ್ತನೇ ಸಲದ ಸ್ಪರ್ಧೆಯಾಗಿತ್ತು. ಈ ಬಾರಿ ಕೊನೆ ಸ್ಪರ್ಧೆ ಎಂಬಂತೆ ಪ್ರಚಾರ  ನಡೆಸಿದ್ದರು. ಇಲ್ಲಿ ಬಿಲ್ಲವರು ಹಾಗೂ ಮುಸ್ಲಿಮರು ಪ್ರಮುಖವಾಗಿ ಇದ್ದಾರೆ.  

ರಾಜೇಶ್ ನಾಯ್ಕ್-ಬಿಜೆಪಿ- 93,324
ರಮಾನಾಥ್ ರೈ-ಕಾಂಗ್ರೆಸ್- 85,042
ಇಲ್ಯಾಸ್ ತುಂಬೆ- ಎಸ್ಡಿಪಿಐ- 5436
ಗೆಲುವಿನ ಅಂತರ- 8,282

Hassan Election Results 2023: ಹಾಸನದಲ್ಲಿ ದಳಪತಿಗಳ ಹೊರೆ ಇಳಿಸಿದ ರಾಷ್ಟ್ರೀಯ ಪಕ್ಷಗಳು

ಮಂಗಳೂರು  ಉತ್ತರ ವಿಧಾನ ಸಭಾ ಕ್ಷೇತ್ರ: ಹಲವು ಕೈಗಾರಿಕೆಗಳ ಬೀಡು ಎಂದೆನಿಸಿದ ಮಂಗಳೂರು ಉತ್ತರ ಕ್ಷೇತ್ರವನ್ನು  ಬಿಜೆಪಿ ಉಳಿಸಿಕೊಂಡಿದೆ. ಹಾಲಿ ಶಾಸಕ ಡಾ.ಭರತ್‌ ಶೆಟ್ಟಿ ಅವರು ಗೆಲುವು ಕಂಡಿದ್ದಾರೆ.  ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಮಾಜಿ ಶಾಸಕ ಮೊಯ್ದಿನ್‌ ಬಾವಾ ಹಾಗೂ ಉದ್ಯಮಿ ಇನಾಯತ್‌ ಆಲಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೂ ಇನಾಯತ್‌ ಆಲಿ ಟಿಕೆಟ್‌ ದಕ್ಕಿಸಿಕೊಂಡಿದ್ದರು. ಹಾಗಾಗಿ ಮೊಯ್ದಿನ್‌ ಬಾವಾ ಅವರು ಕೊನೆಕ್ಷಣದಲ್ಲಿ ಜೆಡಿಎಸ್‌ಗೆ ಜಿಗಿದು ಸ್ಪರ್ಧಿಸಿದ್ದರು. ಹೀಗಾಗಿ,  ಇಲ್ಲಿ  ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇಂದಿನ ಫಲಿತಾಂಶದ ಬಳಿಕ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂತರದಿಂದ ಗೆಲುವು ಕಂಡ ಶಾಸಕ ಭರತ್ ಶೆಟ್ಟಿ ಆಗಿದ್ದಾರೆ.

ಡಾ.ವೈ.ಭರತ್ ಶೆಟ್ಟಿ, ಬಿಜೆಪಿ- 1,03,531
ಇನಾಯತ್ ಆಲಿ, ಕಾಂಗ್ರೆಸ್- 70,609
ಮೊಯಿದ್ದೀನ್ ಬಾವಾ, ಜೆಡಿಎಸ್- 5,256
ಗೆಲುವಿನ ಅಂತರ- 32,922

Udupi Election Results 2023: ಸೋಲಿನ ಸಾಗರದಲ್ಲಿ ಬಿಜೆಪಿಗೆ ಉಡುಪಿ ಹ್ಯಾಪಿ
 
ಪುತ್ತೂರು ವಿಧಾನ ಸಭಾ ಕ್ಷೇತ್ರ: ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಶೋಕ್  ರೈ ಗೆಲುವು ಕಂಡಿದ್ದಾರೆ. ಈ ಮೂಲಕ ಪಕ್ಷೇತರ ಮತ್ತು ಬಿಜೆಪಿ ಜಗಳದಲ್ಲಿ ಕ್ಷೇತ್ರ ಮಾತ್ರ ಮೂರನೆಯವನ ಪಾಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡ ಉದ್ಯಮಿ ಅಶೋಕ್‌ ಕುಮಾರ್‌ ರೈ  3,352 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಒಟ್ಟು ಶೇ. 79.91 ಮತದಾನವಾಗಿತ್ತು.
ಅಶೋಕ್ ರೈ: 64,687 ಮತಗಳು
ಅರುಣ್ ಪುತ್ತಿಲ: 61,336 ಮತಗಳು
ಆಶಾ ತಿಮ್ಮಪ್ಪ 36,526  ಮತಗಳು

Follow Us:
Download App:
  • android
  • ios