Asianet Suvarna News Asianet Suvarna News

Babalehwara Election Result 2023: ಎಂಬಿ ಪಾಟೀಲ್‌ಗೆ ಗೆಲುವಿನ ಸಂಭ್ರಮ, ಸಿಎಂ ರೇಸಲ್ಲಿ ಲಿಂಗಾಯಿತ ನಾಯಕ!

ಕಾಂಗ್ರೆಸ್ ಪಕ್ಷದಲ್ಲಿನ ಪ್ರಮುಖ ಲಿಂಗಾಯಿತ ನಾಯಕ ಎಂಬಿ ಪಾಟೀಲ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಲಿಂಗಾಯಿತ ಸಮುದಾಯದಿಂದ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಚರ್ಚಿಸಿದರೆ ಇಲ್ಲಿ ಬರುವ ಮೊದಲು ಹೆಸರು ಎಂಬಿ ಪಾಟೀಲ್. 

Karnataka Election Result 2023 Babaleshwara-mb-patil-election-results-2023-live-updates-winning-candidates ckm
Author
First Published May 13, 2023, 2:39 PM IST

ವಿಜಯಪುರ(ಮೇ.13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದ ಗೆಲುವು ಸಾಧಿಸಿದೆ. ಕಾಂಗ್ರೆಸ್ ಪ್ರಮುಖ ನಾಯಕರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಬಬಲೇಶ್ವರ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಗೆಲುವು ದಾಖಲಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹಾಗೂ ಬಿಜೆಪಿ ನಾಯಕ ವಿಜಯ ಕುಮಾರ್ ಪಾಟೀಲ್ ತೀವ್ರ ಜಿದ್ದಾಜಿದ್ದಿ ಎರ್ಪಟ್ಟಿತ್ತು. ಎಂಬಿ ಪಾಟೀಲ್ 63777 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದರೆ. ಇತ್ತ ಪ್ರತಿಸ್ಪರ್ಧಿ ಬಿಜೆಪಿ ನಾಯಕ ವಿಜಯ್ ಕುಮಾರ್ ಪಾಟೀಲ್ 53410    ಮತಗಳನ್ನು ಪಡೆದಿದ್ದಾರೆ.

ಎಂಬಿ ಪಾಟೀಲ್ 15,000 ಮತಗಳ ಅಂತರದಿಂದ ಎಂಬಿ ಪಾಟೀಲ್ ಗೆಲುವು ದಾಖಲಿಸಿದ್ದಾರೆ. ಇದೀಗ ಎಂಬಿ ಪಾಟೀಲ್ ನಿವಾಸದ ಎದುರು ಬೆಂಬಲಿಗರು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.  ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಎಂಬಿ ಪಾಟೀಲ್ ಹಿರಿಯ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. 

Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು

ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್ ಭದ್ರಕೊಟೆ. 2008ರಿಂದಲೂ ಇಲ್ಲಿ ಎಂಬಿ ಪಾಟೀಲ್ ಗೆಲುವಿನ ಅಲೆಯಲ್ಲಿದ್ದಾರೆ. 2008ರಿಂದ ಈ ಕ್ಷೇತ್ರದಲ್ಲಿ ಎಂಬಿ ಪಾಟೀಲ್ ಸತತ ಗೆಲುವು ದಾಖಲಿಸಿದ್ದಾರೆ. ಇದೀಗ ಎಂಬಿ ಪಾಟೀಲ್‌ಗೆ ಈ ಕ್ಷೇತ್ರದಲ್ಲಿ ಇದು ನಾಲ್ಕನೇ ಗೆಲುವಾಗಿದೆ. 2018ರಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಎಂಬಿ ಪಾಟೀಲ್ 98,339     ಮತಗಳನ್ನ ಪಡೆದು ಗೆಲುವು ದಾಖಲಿಸಿದ್ದರು. ಇತ್ತ ಬಿಜೆಪಿ ನಾಯಕ ವಿಜಯಕುಮಾರ್ ಪಾಟೀಲ್ 68,624 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಎಂಬಿ ಪಾಟೀಲ್ ಗೆಲುವಿನಿಂದ ಕಾಂಗ್ರೆಸ್ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ ಇದೀಗ ಸಿಎಂ ರೇಸ್‌ನಲ್ಲಿ ಎಂಬಿ ಪಾಟೀಲ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಲಿಂಗಾಯಿತ ನಾಯಕ ಎಂಬಿ ಪಾಟೀಲ್ ಈಗಾಗಗಲೇ ತಾವು ಕೂಡ ಸಿಎಂ ರೇಸ್‌ನಲ್ಲಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಒಂದು ವೇಳೆ ಕಾಂಗ್ರೆಸ್ ಲಿಂಗಾಯಿತ ಸಮುದಾಯದಿಂದ ಸಿಎಂ ನಾಯಕನಾಗಿ ಆಯ್ಕೆ ಮಾಡಿದರೆ ಎಂಬಿ ಪಾಟೀಲ್ ಮೊದಲ ಆಯ್ಕೆಯಾಗಲಿದೆ. ಆದರೆ ಈ ಸಾಧ್ಯತೆಗಳು ತೀರಾ ವಿರಳವಾಗಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ತೀವ್ರ ಪೈಪೋಟಿ ಇದೆ. 

Karnataka Election Result 2023 ಕನಕಪುರದಲ್ಲಿ ಬಂಡೆ ಪ್ರಚಂಡ, ಸಾಮ್ರಾಟ ಸಾಷ್ಟಾಂಗ!

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕಿತ್ತು.
 

Follow Us:
Download App:
  • android
  • ios