ಟಿಕೆಟ್ ಕೈತಪ್ಪಿದ ಆಕ್ರೋಶ, ಬಿಜೆಪಿಗೆ ಶಾಸಕ ಗೂಳಿಹಟ್ಟಿ ಶೇಖರ್ ಗುಡ್ ಬೈ!
ಬಿಜೆಪಿ ಟಿಕೆಟ್ ವಂಚಿತರ ಆಕ್ರೋಶ ಜೋರಾಗುತ್ತಿದೆ. ಒಬ್ಬೊಬ್ಬ ನಾಯಕರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ.
ಚಿತ್ರದುರ್ಗ(ಏ.12): ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬಳಿಕ ಹಲವು ಕ್ಷೇತ್ರಗಳಲ್ಲಿ ಅಸಮಾಧಾನದ ಹೊಗೆ ಜೋರಾಗುತ್ತಿದೆ. ಹಲವು ನಾಯಕರು ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇದೀಗ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಬಿಸಿ ಜೋರಾಗಿದೆ. ಹೊಸದುರ್ಗ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ ಬಿಡೆಪಿ ಟಿಕೆಟ್ ನೀಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಗೂಳಿಹಟ್ಟಿ ಶೇಖರ್ ಬೆಂಬಲಿಗರ ಜೊತೆ ಸತತ ಸಭೆ ನಡೆಸಿದ್ದಾರೆ. ಇದೀಗ ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಪಕ್ಷೇತರ ಅಥವಾ ಜನಾರ್ಧನ ರೆಡ್ಡಿ ಅವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ.
ಹೊಸದುರ್ಗ ಕ್ಷೇತ್ರಕ್ಕೆ ಶಾಸಕ ಗೂಳಿಹಟ್ಟಿಶೇಖರ್ ಕೈ ಬಿಟ್ಟು ಲಿಂಗಮೂರ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದ ತಾಲೂಕಿನ ಹಾರನಕಣಿವೆ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಗೂಳಿಹಟ್ಟಿ ಸತತ ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಗೂಳಿಹಟ್ಟಿ, ಟಿಕೆಟ್ ಕೈತಪ್ಪಲು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಕಾರಣ ಎಂದು ಆರೋಪಿಸಿದ್ದಾರೆ. 2008ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನನ್ನ ಅವಶ್ಯಕತೆ ಇತ್ತು. ಇಂದು ಅವರಿಗೆ ಬೇಡವಾಗಿದ್ದೇನೆ. ಸರ್ಕಾರದ ಅವಧಿಯಲ್ಲಿಯೂ ನನಗೆ ಬೇಕಾಬಿಟ್ಟಿ ನಿಗಮ ಮಂಡಳಿ ಕೊಟ್ಟರು. ಬಿಎಸ್ ವೈ ಅವರ ಆಪ್ತರಿಗೆ ಅತ್ಯುತ್ತಮ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಕೊಟ್ರು ಅದ್ರಲ್ಲಿ ಲಿಂಗಮೂರ್ತಿ ಕೊಟ್ಟ ಖನಿಜ ನಿಗಮವೂ ಒಂದು. ಯಡಿಯೂರಪ್ಪ ಅವರು ಅವರ ಆಪ್ತರಿಗೆ ಒಳಿತಾಗಲಿ ಎಂದು ಗೂಳಿಹಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಕಚೇರಿಗೆ ನುಗ್ಗಿ ಸೈಲೆಂಟ್ ಸುನೀಲ ಬೆಂಬಲಿಗರ ಗಲಾಟೆ, ಚಾಮರಾಜಪೇಟೆ ಜಂಗ್ಲಿ ಕುಸ್ತಿಗೆ ಕಾಂಗ್ರೆಸ್ ಟಾಂಗ್!
ಬಿಜೆಪಿ ಸರ್ಕಾರ ಬರಲು ನಾನು ತ್ಯಾಗ ಮಾಡಿದ ಕೆಲಸವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ತೀವ್ರ ನೋವಾಗಿದೆ ಎಂದು ಬೆಂಬಲಿಗರ ಸಭೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯಿತ ವಿರೋಧಿ ಅಲೆ ಆರೋಪಕ್ಕೂ ಗೂಳಿಹಟ್ಟಿ ತಿರುಗೇಟು ನೀಡಿದ್ದಾರೆ. ಕೆಲ ಮುಖಂಡರ ಕುತಂತ್ರದಿಂದ ಈ ರೀತಿ ಕ್ಷೇತ್ರದಲ್ಲಿ ತಪ್ಪು ಮಾಹಿತಿ ರವಾನೆ ಆಗುತ್ತಿದೆ. ಇಲ್ಲಿ ಸಭೆ ಸೇರಿರೋ ಬಹುತೇಕ ಮಂದಿ ಲಿಂಗಾಯತ ಸಮುದಾಯದವರು ಇದ್ದಾರೆ. ನಾನು ಲಿಂಗಾಯತ ವಿರೋಧಿ ಶಾಸಕ ಅಲ್ಲ ಅವರ ಪರ ಹಾಗೂ ಕಟ್ಟ ಕಡೆಯ ಸಮುದಾಯದ ವ್ಯಕ್ತಿಯ ಪರವಾಗಿದ್ದೇನೆ. ಸದ್ಯದಲ್ಲೇ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿಯಬೇಕೋ? ಅಥವಾ ಜನಾರ್ಧನ ರೆಡ್ಡಿ ಅವರು ಸಂಪರ್ಕ ಮಾಡಿರುವ ಕಾರಣ ಅವರ ಪಕ್ಷದಿಂದ ಕಣಕ್ಕಿಳಿಯಬೇಕೋ ಎಂಬುದನ್ನು ಶೀಘ್ರದಲ್ಲೇ ತಿಳಿಸುವೆ ಎಂದಿದ್ದಾರೆ.
ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!
ಕಳೆದ 5 ವರ್ಷಗಳಲ್ಲಿ ತಾಲೂಕಿನಲ್ಲಿ ಹಿಂದೆಂದೂ ಮಾಡಿರದಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸರ್ಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಇಂದು ಇಲ್ಲಿ ಸೇರಿರುವ ಅಭಿಮಾನಿಗಳನ್ನು ಕಂಡು ನನಗೆ ತುಂಬಾ ಸಂತಸವಾಗುತ್ತಿದೆ. ನಿಮ್ಮಗಳ ಈ ಋುಣಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಯಾವುದೇ ಜಾತಿ ಧರ್ಮದವರನ್ನು ಕಡೆಗಣಿಸಿಲ್ಲ. ಎಲ್ಲಾ ಸಮುದಾಯದವರನ್ನು ಒಗ್ಗಟ್ಟಿನಿಂದ ಕರೆದೊಯ್ದಿದ್ದೇನೆ ಇತ್ತೀಚಿಗೆ ನನ್ನ ಏಳಿಗೆಯನ್ನು ಕಂಡು ಕೆಲವರು ನನ್ನ ಮೇಲೆ ಅಪಪ್ರಚಾರ ಮಾಡಿದರು. ಸರ್ಕಾರದಲ್ಲಿ ನನ್ನ ಮೇಲೆ ಸುಖಾಸುಮ್ಮನೆ ಆರೋಪಗಳನ್ನು ಹೊರಿಸಿದರು. ನಾನು ಕೆಲವು ಇಲಾಖೆಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿದ್ದೇ ನನಗೆ ಮುಳುವಾಯಿತು ಎಂದರು.