ಇದು ನನ್ನ ಕೊನೆ ಚುನಾವಣೆ, ನಿಮ್ಮ ಸೇವೆಗೆ ಅವಕಾಶ ಕೊಡಿ: ಎಚ್‌ವೈ ಮೇಟಿ

ನಗರದ ಶೇಹಾನಷ ಅಲಿ ದರ್ಗಾ, ದೊಡ್ಡ ಸಾಬಣ್ಣ ಬಡಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವೈ.ಮೇಟಿ ಅವರು ಗುರುವಾರ ಬೆಳಗ್ಗೆ ಬಿರುಸಿನ ಪ್ರಚಾರ ಆರಂಭಿಸಿದರು.

Karnataka election news This is my last election give vote says HY Meti at bagalkote rav

ಬಾಗಲಕೋಟೆ (ಏ.28) : ನಗರದ ಶೇಹಾನಷ ಅಲಿ ದರ್ಗಾ, ದೊಡ್ಡ ಸಾಬಣ್ಣ ಬಡಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವೈ.ಮೇಟಿ ಅವರು ಗುರುವಾರ ಬೆಳಗ್ಗೆ ಬಿರುಸಿನ ಪ್ರಚಾರ ಆರಂಭಿಸಿದರು.

ನೂರಾರು ಯುವಕರು ಸೇರಿ ಕಾಂಗ್ರೆಸ್‌ ಘೋಷಣೆ ಕೂಗಿ, ಕೇಕೆ ಹಾಕಿ ಹೂಗುಚ್ಚ ನೀಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರು ನನಗೆ ಮತ ನೀಡಿ ಸದಾಕಾಲ ನಿಮ್ಮ ಜೊತೆಗೆ ಇದ್ದು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ. ಈ ಚುನಾವಣೆ ಕೊನೆ ಚುನಾವಣೆ ಆಗಿರುವುದರಿಂದ ನೀವು ಮತ ನೀಡುವುದರ ಮೂಲಕ ನನಗೆ ಆಶೀರ್ವದಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ವೇಳೆ ಚಿಟ್ಟು ನೀಲನಾಯಕ, ನಗರಸಭೆ ಸದಸ್ಯ ಲಕ್ಷ್ಮಣ ಮುಚಖಂಡಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಮುಚಖಂಡಿ, ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಆನಂದ ಜಿಗಜಿನ್ನಿ, ಮಲ್ಲಿಕಾರ್ಜು ಮೇಟಿ, ಹನಮಂತ ರಾಕುಂಪಿ, ಮಹೇಶ ಜಾಲವಾದಿ, ಪ್ರವೀಣ ಹಿರೇಕುಂಬಿ, ಅಶಿಫ್‌, ಗಣೇಶ, ಈರಣ್ಣ, ಬಸವರಾಜ್‌ ಅಂಬಿಗೇರ, ಕಲ್ಲು ಹಳ್ಳೂರ, ಖಾವಾಜಾನ್‌ ಮುಲ್ಲಾ, ಜಾವೀಧ್‌ ಶೇಖ್‌,ಅಜ್ಜುರುದ್ದೀನಿ ಮಲ್ಲಿಕ್‌, ರಾಜು ಇತರರು ಇದ್ದರು.

ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಬದ್ಧರಾಗಬೇಕು: ಬಿಎಸ್‌ವೈ

ತಂದೆ ಪರ ಮಗಳ ಪ್ರಚಾರ:

ಬಾಗಲಕೋಟೆ ಮತಕ್ಷೇತ್ರ(Bagalkot assembly constituency)ದ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಎಚ್‌.ವೈ.ಮೇಟಿ(Congress candidate HY Meti) ಪರ ಪುತ್ರಿ ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ನೀಲಾನಗರ ತಾಂಡದಲ್ಲಿ ಮತಯಾಚಿಸಿದರು. ಮನೆ ಮನೆಗೆ ತೆರಳಿ ವೇಳೆ ತಾಂಡಾ ಯುವಕರು, ಮಹಿಳೆಯರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು. ಮುಖಂಡರಾದ ಹನಮಂತ ಪೂಜಾರಿ, ವಿಷ್ಣು ಪೂಜಾರಿ, ಗೋಕುಲ ದೊಡ್ಡಮನಿ, ರಮೇಶ ಕಟ್ಟಿಮನಿ, ನಾಗಪ್ಪ ಪವಾರ, ದೀಲಿಪ್‌ ರಾಠೋಡ, ಮಲ್ಲು ಲಮಾಣಿ, ಗಂಗಾರಾಮ ಲಮಾಣಿ, ಶಂಕರ ಚವ್ಹಾಣ, ರಮೇಶ ಪೂಜಾರಿ, ಶೇಖರ ದೊಡ್ಡಮನಿ, ರಂಗನಾಥ ಪೂಜಾರಿ, ತಾವರಪ್ಪ ಕಟ್ಟಿಮನಿ, ಪಾಂಡಪ್ಪ ಜಾಧವ್‌, ರಂಗನಾಥ ಕಟ್ಟಿಮನಿ ಇತರರು ಇದ್ದರ.

ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ

Latest Videos
Follow Us:
Download App:
  • android
  • ios