Asianet Suvarna News Asianet Suvarna News

Karnataka election 2023: ನಿವೃತ್ತ ಎಎಸ್‌ಐ ಮತ ಹಾಕಲು ನಿರಾಕರಿಸಿದ ಚುನಾವಣಾ ಸಿಬ್ಬಂದಿ

ಯಾದಗಿರಿಯಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಮತದಾನ ಮಾಡಲು ನಿಮಗೆ ಅವಕಾಶವಿಲ್ಲ ಎಂದು ವಾಪಸ್‌ ಕಳಿಸಿದ ಘಟನೆ ನಡೆದಿದೆ.

Karnataka election 2023 yadagiri Election staff refused to vote for retired ASI sat
Author
First Published May 10, 2023, 7:23 PM IST

ಯಾದಗಿರಿ (ಮೇ 10): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದಲೂ ಮತದಾನ ನಡೆಯುತ್ತಿದ್ದರೂ ಸಂಜೆ 6 ಗಂಟೆ ವೇಳೆಯಲ್ಲಿ ಮತಗಟ್ಟೆಗೆ ಆಗಮಿಸಿದ ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ನಾನು ಮತ ಹಾಕಲೇಬೇಕು ಎಂದು ಪಟ್ಟು ಹಿಡಿದು ಚುನಾವಣಾ ಸಿಬ್ಬಂದಿಯೊಂದಿಗೆ ವಾಗವಾದ ಮಾಡಿದ್ದಾರೆ. ಆದರೂ, ಈಗಾಗಲೇ ಎಲ್ಲ ಮತಯಂತ್ರಗಳಲ್ಲಿ ಕ್ಲೋಸ್‌ ಮಾಡಲಾಗಿದ್ದು, ಈಗ ಮತ ಹಾಕಲು ಅವಕಾಶವಿಲ್ಲ ಎಂದು ವಾಪಸ್‌ ಕಳುಹಿಸಿದ್ದಾರೆ.

ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದರೂ ಆಗಮಿಸದ ನಿವೃತ್ತ ಪೊಲೀಸ್‌ ಅಧಿಕಾರಿ ಮತದಾನ ಪ್ರಕ್ರಿಯೆ ಸಮಯ ಪೂರ್ಣಗೊಂಡ ನಂತರ, ಮತದಾನಕ್ಕೆ ಆಗಮಿಸಿದ್ದಾರೆ. ಇನ್ನು ಮತಗಟ್ಟೆ ಅಧಿಕಾರಿಗಳು ಈಗ ಮತದಾನ ಮಾಡುವ ಸಮಯ ಮುಕ್ತಾಯ ಆಗಿದ್ದು, ಮತದಾನ ಮಾಡಲು ಅವಕಶಾವಿಲ್ಲ ಎಂದು ಹೇಳಿದ್ದಾರೆ. ಆದರೂ, ಮತಗಟ್ಟೆಯ ಗೇಟ್‌ ತೆರೆದು ಮತಗಟ್ಟೆಯೊಳಗೆ ನುಗ್ಗಿದ ನಿವೃತ್ತ ಎಎಸ್‌ಐ ಚುನಾವಣಾ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದ್ದಾರೆ. ಚುನಾವಣಾ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕಿಳಿದವರನ್ನು  ಮೇಘನಾಥ್ ನಿವೃತ್ತ ಎಎಸ್‌ಐ ಎಂದು ಗುರುತಿಸಲಾಗಿದೆ.

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...

ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ: ಇನ್ನು ಮತದಾನದ ಸಮಯ ಮುಕ್ತಾಯಗೊಂಡಿದೆ ಎಮದು ಹೇಳಿದರೂ ಸುಮ್ಮನಾಗದ ನಿವೃತ್ತ ಎಎಸ್‌ಐ  ತಳ್ಳಿ ಏಕವಚನದಲ್ಲೇ ನಿಂದನೆ ಮಾಡಿದ್ದಾರೆ. ಏನೇ ಮಾಡಿದರೂ ಸರಿ, ಈಗಾಗಲೇ ಮತಯಂತ್ರವನ್ನು ಬಂದ್‌ ಮಾಡಿ ಲಾಕ್‌ ಮಾಡಲಾಗಿದೆ. ಅದನ್ನು ಪುನಃ ತೆರೆದು ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಡಲು ಅವಕಾಶವಿಲ್ಲ ಎಂದು ಮತದಾನ ಮಾಡಲು ನಿರಾಕರಣೆ ಮಾಡಿದ್ದಾರೆ. ಇದನ್ನು ಕೇಳದ ಪೊಲೀಸ್‌ ಅಧಿಕಾರಿ ನನ್ನ ವಾಚ್ ನಲ್ಲಿ ಇನ್ನು 6 ಗಂಟೆ ಆಗಿಲ್ಲ ಮತ ಹಾಕ್ತೇನೆ ಎಂದು ವಾದ ಮಾಡಿದ್ದಾರೆ. 

ನನ್ನ ಮತದ ಬೆಲೆ ನಿನಗೇಗು ಗೊತ್ತು:  ಮತದಾನಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಕ್ಕೆ ನೀನು ನಾಲಾಯಕ್ ಇದ್ದೀಯ. ನನ್ನ ಮತದ ಬೆಲೆ ನಿನಗೇನು ಗೊತ್ತು? ಎಂದು ನಿವೃತ್ತ ಎಎಸ್‌ಐ ಮೇಘನಾತ್‌ ಚುನಾವಣಾ ಸಿಬ್ಬಂದಿಗೆ ಗದರಿಸಿದ್ದಾರೆ. ಆದರೂ ಅವರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಈ ಘಟನೆ ಯಾದಗಿರಿ ನಗರದ ಮತಗಟ್ಟೆ ಸಂಖ್ಯೆ 70 ರಲ್ಲಿ ನಡೆದಿದೆ.  ಯಾದಗಿರಿ ಮತ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾನ ಮಾಡಲಾಗದೇ ಕೊನೆಗೆ ಮತಗಟ್ಟೆಯಿಂದ ವಾಪಸ್‌ ಮನೆಗೆ ಹೋಗಿದ್ದಾರೆ. 

Karnataka elections 2023: ಗುಪ್ತ ಮತದಾನದ ನಿಯಮ ಉಲ್ಲಂಘನೆ: ವೋಟ್‌ ಹಾಕಿದ ವಿಡಿಯೋ, ಫೋಟೋ ವೈರಲ್‌!

ಶಾಂತಿಯುತವಾಗಿ ಮತದಾನ ಮುಕ್ತಾಯ: ಯಾದಗಿರಿ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಕೊನೆಯ ಹಂತದ ಪ್ರಕ್ರಿಯೆ ಮುಕ್ತಾಯಗೊಳಿಸಿದ ಚುನಾವಣಾ ಸಿಬ್ಬಂದಿ, ಮತಕೇಂದ್ರದ ಏಜೆಂಟ್ ಗಳ ಸಮ್ಮುಖದಲ್ಲಿ EVM ಕ್ಲೋಸ್ ಮಾಡಿದ್ದಾರೆ. ಡಿ-ಮಸ್ಟರಿಂಗ್ ಬಳಿಕ ಮತ ಎಣಿಕೆ ಕೇಂದ್ರದ ಕಡೆ ಹೊರಟ ಮತಪೆಟ್ಟಿಗೆಗಳು. ಯಾದಗಿರಿ ನಗರದ ಜ್ಯೂನಿಯರ್ ಕಾಲೇಜು ಮೈದಾನದ ಕೊಠಡಿ ಸೇರಿದ ಮತಪೆಟ್ಟಿಗೆಗಳು. ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ 37 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬಹುತೇಕ ಕಡೆ ಶಾಂತಿಯಿತವಾಗಿ ಮತದಾನ ಮುಕ್ತಾಯಗೊಂಡಿದೆ.

Follow Us:
Download App:
  • android
  • ios