Asianet Suvarna News Asianet Suvarna News

ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್‌

ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿಯಲ್ಲಿ ನ್ಯಾಯ, ಸಮಾನತೆ ಇಲ್ಲ ಎಂದು ಅನೇಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
 

Karnataka Election 2023 We are not doing politics on emotions Says DK Shivakumar gvd
Author
First Published May 5, 2023, 11:03 AM IST

ಮೈಸೂರು/ಹೊನ್ನಾವರ/ಹೂವಿನಹಡಗಲಿ (ಮೇ.05): ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿಯಲ್ಲಿ ನ್ಯಾಯ, ಸಮಾನತೆ ಇಲ್ಲ ಎಂದು ಅನೇಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಡ್ಯಾಮ್‌ ಒಡೆದು ಹೋಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ವಿಜಯನಗರ ಜಿಲ್ಲೆಯ ಹೂವಿನಹಡಗಲಿ, ಹೊನ್ನಾವರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಗುರುವಾರ ಪ್ರಚಾರ ನಡೆಸಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೈಕಲ್‌ ಮತ್ತು ಸೀರೆ ಬಿಟ್ಟರೆ ಜನರಿಗೆ ಏನು ಕೊಟ್ಟಿದ್ದಾರೆ? 

ರಾಜ್ಯದ ಜನರಿಗಾಗಿ ಯಾವ ಹೊಸ ಯೋಜನೆಗಳನ್ನು ನೀಡಿದ್ದಾರೆ? ಬಿಜೆಪಿ ಕೇವಲ ಭಾವನಾತ್ಮಕವಾಗಿ ಮಾತನಾಡಿ ಮತಗಳನ್ನು ಗಳಿಸುವ ತಂತ್ರಗಾರಿಕೆ ಮಾಡುತ್ತದೆ. ಆದರೆ ಕಾಂಗ್ರೆಸ್‌ ಜನರ ಬದುಕಿನ ಬಗ್ಗೆ ಮಾತನಾಡಿ, ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಬಿಜೆಪಿಗರಿಗೆ ಕೊಟ್ಟಮಾತು ಊಳಿಸಿಕೊಳ್ಳಲು ಆಗಿಲ್ಲ. ಬಿಜೆಪಿ ಅನ್ನಭಾಗ್ಯ ನೀಡುವುದಿಲ್ಲ, ಅದು ಭ್ರಷ್ಟಾಚಾರ ಭಾಗ್ಯ ನೀಡುತ್ತದೆ ಎಂದರು.

ಕಾಂಗ್ರೆಸ್‌ ಭದ್ರಕೋಟೆ ಚಾಮರಾಜನಗರದಲ್ಲಿ ಸೋಮಣ್ಣರಿಂದ ಬಿಜೆಪಿ ರಣಕಹಳೆ

ನಾವೂ ಬಜರಂಗಬಲಿಯ ಭಕ್ತರು: ಬಜರಂಗದಳ ನಿಷೇಧ ವಿಚಾರ ವಿವಾದ ಸ್ವರೂಪ ಪಡೆಯುತ್ತಿರುವ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಈ ಸಂಬಂಧ ಸಮಜಾಯಿಷಿಗೆ ಮುಂದಾಗಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಗುರುವಾರ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೂ ಬಜರಂಗ ಬಲಿಯ ಭಕ್ತರು. ನೋಡಿ ಬಜರಂಗಬಲಿ ಕುಂಕುಮ ಇಟ್ಟು ಕೊಂಡಿದ್ದೇನೆ ಎಂದು ತೋರಿಸಿದರು. 

ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ವೇ? ಬಜರಂಗ ದಳ ಒಂದು ರಾಜಕೀಯ ಪಕ್ಷದ ವಿಭಾಗ.  ಹನುಮಂತನ ಹೆಸರು ಇಟ್ಟು ಕೊಂಡವರೆಲ್ಲ ಹನುಮಂತ ಆಗಲು ಸಾಧ್ಯವೇ? ಬಜರಂಗದಳದವರು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಯುವಕರಲ್ಲಿ ಆಂಜನೇಯನ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು. ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ದೇವರ ಹೆಸರನ್ನು ರಾಜಕೀಯವಾಗಿ ಬಳಸಲು ಪ್ರಧಾನಿ ಹಾಗೂ ಬಿಜೆಪಿ ಯತ್ನಿಸುತ್ತಿದೆ. 

ಶೆಟ್ಟರ್‌ ಬಿಟ್ಟು ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಜಗದೀಶ್‌ ಸಾಥ್‌ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ

ಬಿಜೆಪಿಯವರು ಒಂದು ಆಂಜನೇಯನ ದೇವಾಲಯವನ್ನಾದರೂ ಕಟ್ಟಿದ್ದಾರಾ? ಆದರೆ ನಾವು ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ರಚಿಸುತ್ತೇವೆ. ಪ್ರತಿ ತಾಲೂಕಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios