Asianet Suvarna News Asianet Suvarna News

Karnataka Election 2023: ಬಳ್ಳಾರಿಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗನಿಂದ ಮತದಾನ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗರೊಬ್ಬರು ಬಳ್ಳಾರಿಯಲ್ಲಿ ಮತದಾನ ಚಲಾಯಿಸಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ  ಕೊಳಗಲ್ಲು ಗ್ರಾಮದ ಮುಸ್ತಫಾ ಅವರಿಗೆ ಕೈಗಳೆರಡು ಇಲ್ಲ. 

Karnataka Election 2023 voting by the disabled man in ballari gvd
Author
First Published May 10, 2023, 5:28 PM IST

ಬಳ್ಳಾರಿ (ಮೇ.10): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗರೊಬ್ಬರು ಬಳ್ಳಾರಿಯಲ್ಲಿ ಮತದಾನ ಚಲಾಯಿಸಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದ  ಕೊಳಗಲ್ಲು ಗ್ರಾಮದ ಮುಸ್ತಫಾ ಅವರಿಗೆ ಕೈಗಳೆರಡು ಇಲ್ಲ. ಆದರೂ ಅತ್ಯಂತ ಹುರುಪಿನಿಂದ ಮತಗಟ್ಟೆಗೆ ಬಂದ ಮುಸ್ತಫಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಮೂಲಕ ಉಳಿದವರಿಗೂ ಮಾದರಿಯಾದರು. ಈ ವೇಳೆ ಚುನಾವಣಾ ಅಧಿಕಾರಿಗಳು ಮುಸ್ತಫಾಗೆ ಎರಡೂ ಕೈ ಇಲ್ಲದ ಕಾರಣ ಕಾಲು ಬೆರಳಿಗೆ ಮತದಾನದ ಶಾಹಿ ಹಾಕಿದರು. ದಿವ್ಯಾಂಗರಾದ ಎಂ.ಡಿ ಮುಸ್ತಫಾ ಅವರು ಮತದಾನ ಮಾಡಿದರು. ಇನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ದಿವ್ಯಾಂಗೆ ಲಕ್ಷ್ಮೀದೇವಿಯೂ ಕೂಡಾ ಕಾಲಿನಿಂದ ಮತಚಲಾಯಿಸಿದ್ದಾರೆ
 
47 ವಿಶೇಷ ಮತಗಟ್ಟೆ: ವಿಜಯನಗರ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಹಾಗೂ ಮತದಾನಕ್ಕೆ ಪ್ರೇರಣೆಗಾಗಿ ಜಿಲ್ಲಾಡಳಿತ 47 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳಾಗಿ ರೂಪಿಸಿದೆ. ಜಿಲ್ಲೆಯಲ್ಲಿ ಒಟ್ಟು 1219 ಮತಗಟ್ಟೆಗಳಿವೆ. ಹೂವಿನಹಡಗಲಿಯಲ್ಲಿ 218, ಹಗರಿಬೊಮ್ಮನಹಳ್ಳಿಯಲ್ಲಿ 252, ವಿಜಯನಗರದಲ್ಲಿ 247, ಕೂಡ್ಲಿಗಿಯಲ್ಲಿ 245 ಮತ್ತು ಹರಪನಹಳ್ಳಿಯಲ್ಲಿ 257 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Karnataka Election 2023: ಬಳ್ಳಾರಿಯ ಮತದಾನ ಕೇಂದ್ರದ ಆವರಣದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!

ವಿಶೇಷ ಮತಗಟ್ಟೆಗಳು: ಜಿಲ್ಲೆಯಲ್ಲಿ ಆಯ್ದ 47 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳನ್ನಾಗಿ ರೂಪಿಸಲಾಗಿದೆ. ಮಹಿಳೆಯರಿಗಾಗಿ ಸಖಿ(ಪಿಂಕ್‌ )ಮತಗಟ್ಟೆ12, ಅಂಗವಿಕಲರಿಗೆ 5 ಮತಗಟ್ಟೆಗಳು ಹಾಗೂ ಯುವಜನರಿಗೆ 5 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇನ್ನೂ 25 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸುವ ಜತೆಗೆ ಆಯಾ ವರ್ಗದ ಮತದಾರರಿಗೆ ಅವಶ್ಯವುಳ್ಳ ಸೌಕರ್ಯಗಳನ್ನು ಜಿಲ್ಲಾಡಳಿತದ ವತಿಯಿಂದ ಒದಗಿಸಲಾಗಿದೆ.

ಮಹಿಳಾ ಮತದಾರರಿಗೆ ಆದ್ಯತೆ ನೀಡಲು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಿಂಕ್‌ ಬಣ್ಣ ಬಳಿಯಲಾಗಿದ್ದು, ಇಲ್ಲಿ ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾರ್ಯ ಮಾಡಲಾಗಿದೆ. ಇನ್ನೂ ಅಂಗವಿಕಲರಿಗಾಗಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮತಗಟ್ಟೆಸ್ಥಾಪಿಸಲಾಗಿದೆ. ಅಂಗವಿಕಲರಿಗಾಗಿ ರ್ಯಾಂಪ್‌ ವ್ಯವಸ್ಥೆ ಮಾಡಲಾಗಿದೆ. ಯುವ ಮತದಾರರಿಗಾಗಿ ಐದು ಮತಗಟ್ಟೆಮತ್ತು 25 ಮಾದರಿ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗಿದೆ.

ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನ ಪುಡಿಪುಡಿ ಮಾಡಿ ಧ್ವಂಸ: 23 ಜನರ ಬಂಧನ

ಮತದಾರರಲ್ಲಿ ಜಾಗೃತಿ ಅಭಿಯಾನ: ಜಿಲ್ಲಾಡಳಿತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು ಎಂದು ನಿರಂತರ ಜಾಗೃತಿ ಅಭಿಯಾನ ನಡೆಸಿದೆ. ಹೊಸದಾಗಿ ವೋಟಿಂಗ್‌ ನಡೆಸುವ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿದೆ. ವಯೋವೃದ್ಧರು, ಶತಾಯುಷಿಗಳಲ್ಲೂ ಜಾಗೃತಿ ಮೂಡಿಸಿದೆ. ದಿನಗೂಲಿ ಕಾರ್ಮಿಕರು, ನರೇಗಾ ಕಾರ್ಮಿಕರಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ಕಾಲೇಜುಗಳ ಹಂತದಲ್ಲೂ ಜಾಗೃತಿ ನಡೆಸಿ, ನಗರ, ಪಟ್ಟಣಗಳಲ್ಲಿ ಬೈಕ್‌ ರ್ಯಾಲಿ ನಡೆಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios