ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದ್ರೆ ಸವದಿ ಹೆಣ ಬಿದ್ದಂಗೆ ಲೆಕ್ಕ: ಜಾರಕಿಹೊಳಿ
ಸವದಿಯನ್ನ ಕೆಡವೋಕೆ ಜನ ಒಳಗಿಂದೊಳಗೆ ತಯಾರಾಗಿದ್ದಾರೆ. ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದರೆ ಸವದಿ ಹೆಣ ಬಿದ್ದಂಗೆ ಲೆಕ್ಕ ಎಂದು ರಮೇಶ್ ಜಾರಕಿಹೊಳಿ ಮತ್ತೆ ಲಕ್ಷ್ಮಣ್ ಸವದಿ ವಿರುದ್ಧ ಹರಿಹಾಯ್ದಿದ್ದಾರೆ.
ಚಿಕ್ಕೋಡಿ (ಮೇ.1): ಕಾಗವಾಡದ ಅನಂತಪುರದಲ್ಲಿ ರಮೇಶ ಜಾರಕಿಹೊಳಿ ಮತಪ್ರಚಾರದ ವೇಳೆ ಮತ್ತೆ ಲಕ್ಷ್ಮಣ ಸವದಿ ವಿರುದ್ದ ಹರಿಹಾಯ್ದಿದ್ದಾರೆ. ಅಥಣಿ ಜನ ಒಳಗಿಂದೊಳಗೆ ತಯಾರಿ ಆಗಿ ಕುಳಿತಿದ್ದಾರೆ. ಸವದಿಯನ್ನ ಕೆಡವೋಕೆ ಜನ ಒಳಗಿಂದೊಳಗೆ ತಯಾರಾಗಿದ್ದಾರೆ. ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದರೆ ಸವದಿ ಹೆಣ ಬಿದ್ದಂಗೆ ಲೆಕ್ಕ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳೊ ದುಡ್ಡು ಅವಂದಲ್ಲ. ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ ಎಂದಿದ್ದಾರೆ.
ಕಡೆಯ ಘಳಿಗೆಯಲ್ಲಿ ಸವದಿಗೆ ಸ್ವಾಭಿಮಾನ ಕಾಡ್ತಿದೆ. ಎರಡು ವರ್ಷ ಆತ ಆರಾಮಾಗಿದ್ದ ಚುನಾವಣೆ ಘೋಷಣೆ ಆದ ಬಳಿಕ ಅವನಿಗೆ ಸ್ವಾಭಿಮಾನ ಕಾಡ್ತಿದೆ. ಗಂಡಸಾಗಿದ್ರೆ ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ ರಮೇಶ ತಂದ ಸರ್ಕಾರದಲ್ಲಿ ಮಂತ್ರಿ ಆಗೊಲ್ಲ ಅಂತ ಹೇಳ್ಬೇಕಿತ್ತು. ಮುಂದೆ ಆರಿಸಿ ಬಂದು ಮಂತ್ರಿ ಆಗ್ತಿನಿ ಅಂದಿದ್ರೆ ಅವನಿಗೆ ಗಂಡಸು ಅಂತ ಅಂತಿದ್ವಿ, ಸವದಿ ಸಾಯ್ಕೊಂಡು ಓಡಿಹೋಗಿ ಮಂತ್ರಿಯಾದ. ಕೊನೆಗೆ ಚುನಾವಣೆ ಘೋಷಣೆಯಾದ ಬಳಿಕ ಅವನಿಗೆ ಸ್ವಾಭಿಮಾನ ಕಾಡಿತು. ಇಂತಹ ಬೋಗಸ್ ಸ್ವಾಭಿಮಾನ ಸವದಿಯದ್ದು ಎಂದು ರಮೇಶ ಜಾರಕಿಹೊಳಿ ಹಿಗ್ಗಾಮುಗ್ಗಾ ಹೇಳಿಕೆ ನೀಡಿದ್ದಾರೆ.
ರಸ್ತೆ ಬದಿ ಪಡ್ಡು ತಯಾರಿಸಿ ಮತಯಾಚಿಸಿದ ಶಾಮನೂರು ಸೊಸೆ-ಮೊಮ್ಮಕ್ಕಳು!
ಸವದಿ ದ್ವೇಷ ರಾಜಕಾರಣ ಮಾಡ್ತಾನೆ ಅವನನ್ನ ನಂಬಬೇಡಿ. ಅವನನ್ನ ಪೂರ್ಣ ಪ್ರಮಾಣಲ್ಲಿ ಮುಗಿಸಿ ಉಗಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸೋಕೆ ಕಳಿಸ್ತಿನಿ. ನಮಗೆ ವಯಕ್ತಿಕವಾಗಿ ದ್ರೋಹ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ,
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.