ಪ್ರಧಾನಿ ಮೋದಿ ಆರ್ಶೀರ್ವದಿಸಲು ಜನತೆಗೆ ಸಂಸದ ತೇಜಸ್ವಿ ಸೂರ್ಯ ಮನವಿ

ಬೆಂಗಳೂರು ನಗರದಲ್ಲಿ ಸುಮಾರು 26 ಕಿ.ಮೀ. ರೋಡ್‌ ಶೋ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರ್ಶೀರ್ವದಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಜನತೆ ಕುಟುಂಬ ಸಮೇತರಾಗಿ ಆಗಮಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. 

Karnataka Election 2023 MP Tejaswi Surya appeals to people to bless PM Narendra Modi gvd

ಬೆಂಗಳೂರು (ಮೇ.06): ಬೆಂಗಳೂರು ನಗರದಲ್ಲಿ ಸುಮಾರು 26 ಕಿ.ಮೀ. ರೋಡ್‌ ಶೋ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರ್ಶೀರ್ವದಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಜನತೆ ಕುಟುಂಬ ಸಮೇತರಾಗಿ ಆಗಮಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. ಶುಕ್ರವಾರ ಸಂಜೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಶನಿವಾರ ಬೆಳಗ್ಗೆ 10 ಗಂಟೆಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬ್ರಿಗೇಡ್‌ ಮಿಲೆನಿಯಂ ಬಳಿ ರೋಡ್‌ ಶೋ ಪ್ರಾರಂಭವಾಗುತ್ತದೆ. 

ಅಲ್ಲಿಂದ ಜೆ.ಪಿ.ನಗರ 24ನೇ ಮುಖ್ಯರಸ್ತೆಯ ಮೂಲಕ ರಾಘವೇಂದ್ರಸ್ವಾಮಿ ಮಠ, ಆರ್‌.ವಿ.ಆಸ್ಟರ್‌ ಆಸ್ಪತ್ರೆ ಮಾರ್ಗವಾಗಿ ಸಾಗಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಕಚೇರಿ ಮೂಲಕ ಜಯನಗರ ಪ್ರವೇಶಿಸಲಿದ್ದಾರೆ.  ನಂತರ ಕೂಲ್‌ ಜಾಯಿಂಟ್‌, ಜಯನಗರ ಪೊಲೀಸ್‌ ಠಾಣೆ ಮಾರ್ಗವಾಗಿ ಸೌತ್‌ಎಂಡ್‌ ಸರ್ಕಲ್‌ಗೆ ರಾರ‍ಯಲಿ ಆಗಮಿಸಲಿದೆ. ಬಳಿಕ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸುವ ಮೋದಿ ರೋಡ್‌ ಶೋ, ಕೃಷ್ಣರಾವ್‌ ಪಾರ್ಕ್, ಗುಣಶೀಲ ಆಸ್ಪತ್ರೆ, ನೆಟ್ಟಕಲ್ಲಪ್ಪ ಸರ್ಕಲ್‌, ಗಣಪತಿ ದೇವಸ್ಥಾನ ಮೂಲಕ ರಾರ‍ಯಲಿ ಸಾಗಲಿದೆ. ಅಲ್ಲಿಂದ ಎನ್‌.ಆರ್‌.ಕಾಲೋನಿ, ದೊಡ್ಡ ಗಣಪತಿ ದೇವಾಲಯ, ರಾಮಕೃಷ್ಣ ಆಶ್ರಮ, ಉಮಾ ಚಿತ್ರಮಂದಿರ ಮಾರ್ಗವಾಗಿ ಸಿರ್ಸಿ ಸರ್ಕಲ್‌ ತಲುಪಲಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ಮೋದಿ ಬೆಂಗ್ಳೂರು ಮೆಗಾ ರೋಡ್‌ ಶೋಗೆ ಹೈಕೋರ್ಟ್‌ ಅಸ್ತು

ಮಾಗಡಿ ರಸ್ತೆ ಮೂಲಕ ರೋಡ್‌ ಶೋ ಸಾಗಿ ಪ್ರಸನ್ನ ಚಿತ್ರಮಂದಿರ ಮೂಲಕ ವಿಜಯನಗರ, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ತಲುಪಲಿದೆ. ಅಲ್ಲಿಂದ ರಾಜ್‌ಕುಮಾರ್‌ ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ಹೋಗಿ, ರಾಜಾಜಿನಗರ, ಕಾಡುಮಲ್ಲೇಶ್ವರದಲ್ಲಿ ರೋಡ್‌ ಶೋ ಮುಕ್ತಾಯವಾಗಲಿದೆ. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ರಾರ‍ಯಲಿಯು ಬೆಳಗ್ಗೆ 12.30ಕ್ಕೆ ಮುಕ್ತಾಯವಾಗಲಿದೆ. ಪ್ರಜಾಪ್ರಭುತ್ವದ ದೊಡ್ಡ ಉತ್ಸವದಲ್ಲಿ ಭಾಗಿಯಾಗಿ ರೋಡ್‌ಶೋ ಅನ್ನು ಯಶಸ್ವಿಗೊಳಿಸಬೇಕು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಅಶ್ವತ್ಥ ನಾರಾಯಣ ಸಭೆ: ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಲಿರುವ ಚುನಾವಣಾ ರೋಡ್‌ ಶೋ ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗಲಿದ್ದು, ಈ ಸಂಬಂಧ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಸಭೆ ನಡೆಸಿದರು. ಶುಕ್ರವಾರ ಬಿಜೆಪಿ ವಾರ್ಡ್‌ ಅಧ್ಯಕ್ಷರುಗಳ ಸಭೆ ನಡೆಸಿ, ಪ್ರಧಾನಿಗಳ ರೋಡ್‌ ಶೋಗೆ ಮಲ್ಲೇಶ್ವರಂ ವ್ಯಾಪ್ತಿಯ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಖುದ್ದು ಸಾಕ್ಷಿಯಾಗುವ ಕಾತರದಲ್ಲಿದ್ದಾರೆ. ಈ ಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಿಸಲು ವಾರ್ಡ್‌ ಅಧ್ಯಕ್ಷರು ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ಅವರು ಚರ್ಚಿಸಿದರು.

ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ಕ್ಷೇತ್ರದ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ಸನ್ನಿವೇಶವಾಗಲಿದೆ. ಭಾರತ ದೇಶ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಉತ್ತಮ ನಾಯಕತ್ವದಿಂದ ಗಮನ ಸೆಳೆದಿರುವ ಮೋದಿಯವರು ತಮ್ಮ ಕ್ಷೇತ್ರಕ್ಕೆ ಬರಬೇಕೆಂಬುದು ಇಲ್ಲಿನ ಜನರ ಬಹುದಿನಗಳ ನಿರೀಕ್ಷೆಯಾಗಿತ್ತು. ಅದು ಅವರ ಈ ರೋಡ್‌ಶೋ ಮೂಲಕ ಈಡೇರುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. ಮೇರು ನಾಯಕ ಮೋದಿ ಅವರನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಲು ಜನತೆ ಅಪಾರ ಉತ್ಸಾಹದಲ್ಲಿದ್ದಾರೆ. ಮೆರವಣಿಗೆ ಯುದ್ದಕ್ಕೂ ಬಿಜೆಪಿ ಹಾಗೂ ಮೋದಿ ಅವರ ಪರವಾಗಿ ಜೈಕಾರ, ಘೋಷಣೆಗಳು ಮೊಳಗಲಿವೆ. ಜೊತೆಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಲಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios