ಹಿಂದೂ-ಮುಸ್ಲಿಂ ನಡುವೆ ಗಲಾಟೆಗೆ ಪ್ರೇರೇಪಿಸಿದ ಪಕ್ಷ ಕಾಂಗ್ರೆಸ್‌: ಸಚಿವ ಅಶೋಕ್‌

ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸಿದ್ದಷ್ಟೇ ಅಲ್ಲ ಒಂದಾಗಿದ್ದ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆದಿದ್ದು ಕೂಡಾ ಕಾಂಗ್ರೆಸ್‌ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದರು. 

Karnataka Election 2023 Minister R Ashok Slams On Congress gvd

ಆನೇಕಲ್‌ (ಮೇ.06): ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸಿದ್ದಷ್ಟೇ ಅಲ್ಲ ಒಂದಾಗಿದ್ದ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆದಿದ್ದು ಕೂಡಾ ಕಾಂಗ್ರೆಸ್‌ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದರು. ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್‌ ಪರ ಪ್ರಚಾರ ಮಾಡುವ ವೇಳೆ ಮಾತನಾಡಿದ ಅವರು, ಹಿಂದೆ ಬ್ರಿಟಿಷರು ನಮ್ಮನ್ನು ಒಡೆದು ಆಳಿದರು. ಅದೇ ಪ್ರವೃತ್ತಿಯನ್ನು ಕಾಂಗ್ರೆಸ್‌ ಈಗಲೂ ಅನುಸರಿಸಿಕೊಂಡು ಬರುತ್ತಿದೆ. ಹಿಂದೂ ಮುಸ್ಲಿಮರ ನಡುವೆ ದ್ವೇಷದ ವಿಷಬೀಜ ಬಿತ್ತಿ ಆಮೇಲೆ ಎಲ್ಲಾ ಆರೋಪವನ್ನ ಬಿಜೆಪಿ ಮೇಲೆ ಹೊರಿಸಿದರು. 

ಅಷ್ಟಕ್ಕೆ ಸುಮ್ಮನಾಗದೇ ವೀರಶೈವ ಮತ್ತು ಲಿಂಗಾಯತರ ನಡುವೆಯೂ ಒಡಕು ಮೂಡಿಸಿದ್ದು ಕಾಂಗ್ರೆಸ್‌. ಇವರು ಎಷ್ಟರ ಮಟ್ಟಿಗೆ ಧರ್ಮ ವಿರೋಧಿ ಎಂದರೆ ರಾಮಮಂದಿರ ಕಟ್ಟುವಾಗಲೂ ಕೂಡಾ ತಗಾದೆ ತೆಗೆದು, ಹಿಂದೂ-ಮುಸ್ಲಿಮರ ನಡುವೆ ಗಲಾಟೆಗೆ ಪ್ರೇರೇಪಿಸಿದ ಪಕ್ಷ ಇದು. ಇಂಥ ಪಕ್ಷ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಬಂದರೆ ಹಿಂದೂಗಳಿಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು. ಸಚಿವ ಎ.ನಾರಾಯಣಸ್ವಾಮಿ, ಆನೇಕಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್‌ ಇನ್ನಿತರರು ಹಾಜರಿದ್ದರು.

ಮೇ 12ರೊಳಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ?: ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸಂಪನ್ನ

ಕತ್ರಿಗುಪ್ಪೆ ವಾರ್ಡಲ್ಲಿ ಟೀ ಮಾಡಿ ಆರ್‌.ಅಶೋಕ್‌ ಮತಯಾಚನೆ: ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಪರ ಬುಧವಾರ ಕಂದಾಯ ಸಚಿವ ಆರ್‌.ಅಶೋಕ್‌ ಕ್ಷೇತ್ರದ ಕತ್ರಿಗುಪ್ಪೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು. ಅಶೋಕ್‌ ಅವರು ಕತ್ರಿಗುಪ್ಪೆ ವಾರ್ಡಿನಲ್ಲಿ ರಸ್ತೆ ಬದಿ ಚಾಯ್‌ ವಾಲಾ ಮಾದರಿಯಲ್ಲಿ ಟೆಂಟ್‌ ಹಾಕಿಕೊಂಡು ಚಹಾ ಮಾರುವ ಮುಖಾಂತರ ರವಿ ಸುಬ್ರಮಣ್ಯ ಪರ ವಿಭಿನ್ನವಾಗಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅಶೋಕ್‌, ರವಿ ಸುಬ್ರಮಣ್ಯ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅಣಿಯಾಗಿದ್ದಾರೆ. ಹಾಗಾಗಿ ಅವರನ್ನು ಈ ಬಾರಿ ದಾಖಲೆ ಮತದ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಚುನಾವಣೆ ಎಫೆಕ್ಟ್: ರಾಜ್ಯದಲ್ಲಿ ಮದ್ಯಕ್ಕೆ 2.5 ಪಟ್ಟು ಡಿಮ್ಯಾಂಡ್‌, ಮದ್ಯ ಸೇವನೆಗೆ ಮುಗಿ ಬೀಳುತ್ತಿರುವ ಜನ

ರವಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ನಿಮಗೇ ಗೊತ್ತಿದೆ. ಈ ಬಾರಿಯೂ ಅವರನ್ನೇ ಆಯ್ಕೆ ಮಾಡಿದರೆ ಬಸವನಗುಡಿ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ರವಿ ಸುಬ್ರಹ್ಮಣ್ಯಗೆ ತಮ್ಮ ಅಮೂಲ್ಯ ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು. ಬಿಜೆಪಿ ಮುಖಂಡರಾದ ಸಂಗಾತಿ ವೆಂಕಟೇಶ್‌, ಗುಜರಾತ್‌ನ ಗಾಂಧಿನಗರ ಮಹಾನಗರ ಪಾಲಿಕೆ ಮಾಜಿ ಉಪಮೇಯರ್‌ ನಾಜಾಭಾಯ್‌ ಗಂಗರ್‌ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios