ಮಾಗಡಿಯನ್ನು ಮಾದರಿ ಕ್ಷೇತ್ರ ಮಾಡುವೆ: ಎಚ್.ಸಿ.ಬಾಲಕೃಷ್ಣ
ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಭರವಸೆ ನೂರಕ್ಕೆ ನೂರರಷ್ಟಿದೆ. ನಮ್ಮದೇ ಸರ್ಕಾರ ಆಡಳಿತಕ್ಕೆ ಬರುತ್ತದೆ. ಆಗ ಮಾಗಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ನಾನು ಮಾಡದೇ ಹೋದರೆ ಮುಂಬರುವ ಚುನಾವಣೆಗೆ ಮತ ಕೇಳಲು ಜನರ ಮುಂದೆ ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಕುದೂರು (ಏ.16): ಈ ಬಾರಿ ನಿಮ್ಮೆಲ್ಲರ ಆಶೀರ್ವಾದದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಭರವಸೆ ನೂರಕ್ಕೆ ನೂರರಷ್ಟಿದೆ. ನಮ್ಮದೇ ಸರ್ಕಾರ ಆಡಳಿತಕ್ಕೆ ಬರುತ್ತದೆ. ಆಗ ಮಾಗಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ನಾನು ಮಾಡದೇ ಹೋದರೆ ಮುಂಬರುವ ಚುನಾವಣೆಗೆ ಮತ ಕೇಳಲು ಜನರ ಮುಂದೆ ಬರುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಕುದೂರು ಗ್ರಾಮದಲ್ಲಿ ಜನಾಶೀರ್ವಾದ ಕಾರ್ಯಕ್ರಮದ ಸಲುವಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನನ್ನನ್ನು ಇದುವರೆಗೂ ಕ್ಷೇತ್ರದ ಜನ ಆರಿಸಿ ಅಧಿಕಾರ ಕೊಟ್ಟು ಕಳುಹಿಸಿದ್ದರು. ಆಗೆಲ್ಲಾ ವಿರೋಧ ಪಕ್ಷದ ಸರ್ಕಾರಗಳೇ ಇದ್ದವು. ಅಂತದ್ದರಲ್ಲೂ ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಈ ಬಾರಿ ಜನರು ಪ್ರತಿ ಗ್ರಾಮದಲ್ಲೂ ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡು ಮನೆಯಲ್ಲಿ ಕೂರಿಸಿ ಮತ್ತೆ ನೀವು ಗೆಲ್ಲಬೇಕಪ್ಪಾ, ಎಂದು ಮನದುಂಬಿ ಆಶೀರ್ವಾದ ಮಾಡುತ್ತಿದ್ದಾರೆ. ಈ ಬಾರಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ತಂಡ ಸ್ವಯಂ ಇಚ್ಚೆಯಿಂದ ನನ್ನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಈ ಅಂಶಗಳು ನನ್ನ ಗೆಲುವಿಗೆ ಸ್ಪಷ್ಟಸೂಚನೆಗಳನ್ನು ನೀಡುತ್ತಿವೆ ಎಂದು ಹೇಳಿದರು.
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್
ಕುದೂರಿಗೆ ಕುಡಿವ ನೀರು: ಕುದೂರು ಗ್ರಾಮಕ್ಕೆ ಕುಡಿಯವ ನೀರಿಗೆ ಶಾಶ್ವತ ಪರಿಹಾರ ನೀಡಲು ಯೋಜನೆ ಸಿದ್ದಪಡಿಸಿದ್ದೇವೆ. ಗ್ರಾಮಕ್ಕೆ ತಮ್ಮೇನಹಳ್ಳಿ ಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಆ ಕೆರೆಗೆ ಹೇಮಾವತಿ ನದಿ ನೀರನ್ನು ಹರಿಸುವ ಕೆಲಸ ಮಾಡುತ್ತೇವೆ. ಎತ್ತಿನಹೊಳೆಯ ಯೋಜನೆಗೂ ಕುದೂರು ಹೋಬಳಿಯನ್ನು ಸೇರಿಸಲಾಗುತ್ತದೆ. ಅದು ಪಕ್ಕದ ಸೋಲೂರಿನ ಮೂಲಕ ಹಾದು ಹೋಗುವಂತೆ ನಕಾಶೆ ಸಿದ್ದಪಡಿಸಿದ್ದಾರೆ. ಅದನ್ನು ಬದಲಿಸಿ ನಮ್ಮ ಜನರಿಗೂ ಅನುಕೂಲವಾಗಲು ಕಾರ್ಯರೂಪಕ್ಕೆ ಬರುವಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕುದೂರು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿಸುವ, ಸುಸಜ್ಜಿತ ಬಸ್ ನಿಲ್ದಾಣ, ಉದ್ಯಾನವನ, ಸ್ಟೇಡಿಯಂ, ಇಂತಹ ಅನೇಕ ಶಾಶ್ವತ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತೇವೆ. ಈಗ ಶಾಸಕರಾಗಿರುವರು ಹಿಂದೆ ಕುದೂರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಆಗ ಕುದೂರು ಎಷ್ಟರ ಮಟ್ಟಿಗೆ ಪ್ರಗತಿಯಾಯಿತು? ಶಾಸಕರಾದ ನಂತರ ಕುದೂರಿಗೆ ದೊರೆತ ಅನುಕೂಲಗಳೇನು? ಜನರ ಟೀಕೆಗಳನ್ನು ತಡೆಯಲಾಗದೆ, ಚುನಾವಣೆ ಹೊಸ್ತಿಲಿನಲ್ಲಿ ಮುಖ್ಯರಸ್ತೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಆ ಎಂಜಿನಿಯರ್ ಎಸ್ಟಿಮೇಚ್ ಕಾಪಿನಾ ಯಾರಿಗೂ ಕೊಡುತ್ತಿಲ್ಲ ಎಂದರು.
ಶಾಸಕನಾಗಿ ನಾನು ಗೆದ್ದ ನಂತರ ಮಾಡುವ ಮೊದಲ ಕೆಲಸ ಎಲ್ಲಾ ಕಚೇರಿಗಳಲ್ಲೂ ಪಾರದರ್ಶಕ ಕೆಲಸ ಆಗಬೇಕು. ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುತ್ತೇನೆ. ಜನರು ಮಧ್ಯವರ್ತಿಗಳ ಸಹಾಯವಿಲ್ಲದೆ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳ ಕೆಲಸಕ್ಕೆ ವೇಗ ಹೆಚ್ಚಾಗುವಂತೆ ಮಾಡುತ್ತೇನೆ ಎಂದು ಹೇಳಿದರು. ಗ್ರಾಪಂ ಉಪಾಧ್ಯಕ್ಷ ಕೆ.ಬಿ.ಬಾಲರಾಜ ಮಾತನಾಡಿ, ಕುದೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣರ ಪರ ಒಲವಿದ್ದು, ಈಬಾರಿ ಎಲ್ಲರೂ ಒಟ್ಟಾಗಿ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದರು.
ರಾಮನಗರದ 4 ಕ್ಷೇತ್ರಗಳಲ್ಲೂ ಬಿಜೆಪಿಯದ್ದೇ ಗೆಲುವು: ಸಚಿವ ಅಶ್ವತ್ಥ ನಾರಾಯಣ
ಬಮೂಲ ನಿರ್ದೇಶಕ ರಾಜಣ್ಣ, ಗ್ರಾಪಂ ಸದಸ್ಯ ಹನುಮಂತರಾಯಪ್ಪ, ರಮೇಶ್, ಗೀತಾ, ನಿರ್ಮಲ, ತಾಪಂ ಮಾಜಿ ಸದಸ್ಯೆ ದಿವ್ಯ ಚಂದ್ರಶೇಖರ್, ರಾಮಯ್ಯ, ಮುನಿಭೈರೇಗೌಡ, ಬಸವನಗುಡಿಪಾಳ್ಯ ಗೋಪಾಲ, ತಿಪ್ಪಸಂದ್ರ ವೆಂಕಟೇಶ್, ಜಗದೀಶ್, ವೆಂಕಟೇಶ್, ಯುವ ಮುಖಂಡ ಚಂದ್ರಶೇಖರ್, ಸಿದ್ದಲಿಂಗಪ್ಪ, ಪ್ರಕಾಶ್, ಶಶಾಂಕ್, ಕಿರಣ್ ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.