Asianet Suvarna News Asianet Suvarna News

ನನ್ನ, ಶೆಟ್ಟರ್‌ ಬಗ್ಗೆ ಮಾತಾಡುವ ನೈತಿಕತೆ ಬಿಎಸ್‌ವೈಗಿಲ್ಲ: ಲಕ್ಷ್ಮಣ ಸವದಿ

ನನಗೆ ಮತ್ತು ಜಗದೀಶ ಶೆಟ್ಟರ್‌ ಅವರಿಗೆ ಕೊಟ್ಟಮಾತನ್ನು ಉಳಿಸಿಕೊಳ್ಳದೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ವಚನ ಭ್ರಷ್ಟರಾಗಿದ್ದಾರೆ. ನನ್ನ ಹಾಗೂ ಶೆಟ್ಟರ್‌ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.

Karnataka Election 2023 Laxman Savadi Slams On BS Yediyurappa gvd
Author
First Published Apr 18, 2023, 1:00 AM IST

ಅಥಣಿ (ಏ.18): ನನಗೆ ಮತ್ತು ಜಗದೀಶ ಶೆಟ್ಟರ್‌ ಅವರಿಗೆ ಕೊಟ್ಟಮಾತನ್ನು ಉಳಿಸಿಕೊಳ್ಳದೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ವಚನ ಭ್ರಷ್ಟರಾಗಿದ್ದಾರೆ. ನನ್ನ ಹಾಗೂ ಶೆಟ್ಟರ್‌ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು. ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿಯಿಂದ ಸಿಎಂ ಆಗಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷವನ್ನು ಕಟ್ಟಿಮತ್ತೆ ಬಿಜೆಪಿಗೇ ಬಂದು ಅಧಿಕಾರ ಅನುಭವಿಸಿದ್ದಾರೆ. ಈಗ ಅದೇ ಪಕ್ಷವನ್ನು ಮುಳುಗಿಸಿದ ಕೀರ್ತಿ ಅವರಿಗಿದೆ ಎಂದು ಟೀಕಿಸಿದರು.

ಯಡಿಯೂರಪ್ಪ ಅವರು ಹಿಂದಿನ ವಿಚಾರಗಳನ್ನು ಸ್ವಲ್ಪ ಮೆಲುಕು ಹಾಕಿ ಮಾತನಾಡಬೇಕು. ಅವರು ಹಿರಿಯರು ಅವರ ಬಗ್ಗೆ ನನಗೆ ಗೌರವವಿದೆ. ಅವರ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ. ನನ್ನ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಹೇಳಿದರು. ಬಿಜೆಪಿ ಹಿರಿಯ ನಾಯಕರು ಹಾಗೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕುಟುಂಬಕ್ಕೆ ಬಿಜೆಪಿಯವರು ತೀವ್ರ ಅವಮಾನ ಮಾಡಿದ್ದಾರೆ. ಶೆಟ್ಟರ್‌ ಕುಟುಂಬ ದಶಮಾನಗಳಿಂದ ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿದೆ. ಇವತ್ತು ಶೆಟ್ಟರ್‌ ಬಿಜೆಪಿಗೆ ರಾಜೀನಾಮೆ ಕೊಡುವ ರೀತಿ ಅನ್ಯಾಯ ಮಾಡಿದ್ದಾರೆ.  ಜಗದೀಶ್‌ ಶೆಟ್ಟರ್‌ ಅವರು ಆಪ್ತರೊಂದಿಗೆ ಮಾತನಾಡಿ ಒಂದು ತೀರ್ಮಾನಕ್ಕೆ ಬರುತ್ತಾರೆ ಎಂದರು. 

ಪಂಚರತ್ನ ಯೋಜನೆಯೇ ಜೆಡಿಎಸ್‌ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ: ಮಾಲೂರು ಅಭ್ಯರ್ಥಿ ಜಿ.ರಾಮೇಗೌಡ

ಕಾಂಗ್ರೆಸ್‌ ಪಕ್ಷದ ನಾಯಕರು ನನಗೆ ರಾಜ್ಯದ ವಿವಿಧ ವಿಧಾನಸಭೆಗಳಲ್ಲಿ ಪ್ರಚಾರ ಮಾಡಬೇಕು. ನನ್ನ ನೇತೃತ್ವದಲ್ಲಿ ಸುಮಾರು 15ರಿಂದ 20 ಸ್ಥಾನ ಗೆಲ್ಲಬೇಕೆಂದು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ನಿರ್ಮಾಣವಾಗಿದೆ. ಇದರಿಂದ ರಾಜ್ಯಾದ್ಯಂತ 120ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿದರು. ಈ ವೇಳೆ ಕಾಂಗ್ರೆಸ್‌ ಮುಖಂಡರಾದ ಗಜಾನನ ಮಂಗಸುಳಿ, ಧರೇಪ್ಪ ಟಕ್ಕಣ್ಣನವರ, ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ರಮೇಶ್‌ ಶಿಂದಗಿ, ಅನಿಲ ಸುಣಧೋಳಿ, ರೇಖಾ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಸವದಿಗೆ ಏನು ಕಮ್ಮಿ ಮಾಡಿದ್ವಿ?: ಲಕ್ಷ್ಮಣ ಸವದಿ ಅವರಿಗೆ ನಾವೇನು ಕಡಮೆ ಮಾಡಿದ್ದೆವು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತಂದು ಶಾಸಕ, ಸಚಿವನನ್ನಾಗಿ ಮಾಡಲಾಗಿತ್ತು. ಸೋತ ನಂತರವೂ ವಿಧಾನಪರಿಷತ್‌ ಸದಸ್ಯನಾಗಿ ಮಾಡಿ ಬಳಿಕ ಉಪಮುಖ್ಯಮಂತ್ರಿ ಮಾಡಿದ್ದಲ್ಲದೆ ಪಕ್ಷದ ಕೋರ್‌ ಕಮಿಟಿ ಸದಸ್ಯ ಸ್ಥಾನವನ್ನೂ ಕೊಟ್ಟಿತ್ತು’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಟಿ ಒಡೆಯ: ಆದರೆ ಕೈಯಲ್ಲಿರುವುದು ಬರೀ 86 ಸಾವಿರ..

‘ಇನ್ನೂ 5 ವರ್ಷ 2 ತಿಂಗಳು ಪರಿಷತ್‌ ಸದಸ್ಯರಾಗಿ ಇರಬಹುದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರನ್ನು ಮತ್ತೊಮ್ಮೆ ಸಚಿವರನ್ನಾಗಿ ಮಾಡಲು ಯಾವುದೇ ಅಡ್ಡಿ-ಆತಂಕ ಇರಲಿಲ್ಲ. ನಾನು ಸವದಿ ಅವರನ್ನು ಕೇಳುತ್ತೇನೆ. ನಿಮಗೆ ಪಕ್ಷದಲ್ಲಿ ಏನು ಅನ್ಯಾಯವಾಗಿತ್ತು? ನಿಮಗೆ ಎಲ್ಲ ಸ್ಥಾನಮಾನ ಕೊಟ್ಟರೂ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದೀರಿ. ಇದು ಕೇವಲ ಪಕ್ಷಕ್ಕೆ ಅಲ್ಲ, ನಾಡಿನ ಜನತೆಗೆ ಮಾಡಿದ ದ್ರೋಹ. ಇದು ನಂಬಿಕೆ, ವಿಶ್ವಾಸ ದ್ರೋಹ. ಜನ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios