ತುಮಕೂರು ಕಾಂಗ್ರೆಸ್ ನಲ್ಲಿ ಮುಂದುವರಿದ ರಾಜೀನಾಮೆ ಪಾಲಿಟಿಕ್ಸ್: ಕೆ.ಎನ್ ರಾಜಣ್ಣ ಶಿಷ್ಯ ರಾಜೀನಾಮೆ!
ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಾದ ಮೇಲೆ ತುಮಕೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಅಸಮಧಾನ ಮುಂದುವರಿದಿದೆ. ಕೊಂಡವಾಡಿ ಚಂದ್ರಶೇಖರ್ ಮಧುಗಿರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಜೊತೆಗೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು,
ತುಮಕೂರು (ಏ.8) : ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆಯಾದ ಮೇಲೆ ತುಮಕೂರು ಜಿಲ್ಲೆಯ ಕಾಂಗ್ರೆಸ್ ನಲ್ಲಿ ಅಸಮಧಾನ ಮುಂದುವರಿದಿದೆ.
ಡಾ.ರಫೀಕ್ ಅಹಮದ್ ಗೆ ಟಿಕೆಟ್ ಕೈ ತಪ್ಪಿದ ಪರಿಣಾಮ ತುಮಕೂರು ನಗರ ಕಾಂಗ್ರೆಸ್(Tumakuru congress) ನಲ್ಲಿ ಅಸಮಧಾನ ಭುಗಿಲೆದಿದ್ದೆ, ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮಾಜಿ ಶಾಸಕ ಶಫಿ ಅಹಮದ್ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೊಂದೆಡೆ ಮಧುಗಿರಿ ಕ್ಷೇತ್ರದಲ್ಲೂ ಅಸಮಧಾನ ವ್ಯಕ್ತವಾಗಿದ್ದು, ಟಿಕೆಟ್ ಸಿಗದ ಪರಿಣಾಮ, ಮಾಜಿ ಶಾಸಕ ಕೆ.ಎನ್.ರಾಜಣ್ಣ(KN Rajanna) ಶಿಷ್ಯ ಕೊಂಡವಾಡಿ ಚಂದ್ರಶೇಖರ್ ಹಾಗೂ ಆತನ ಪುತ್ರ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಸುಮುಖ್ ಕೊಂಡವಾಡಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಈ ಇಬ್ಬರು ನಾಯಕರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಗೆ ರಾಜಿನಾಮೆ ಪತ್ರ ರವಾನೆ ಮಾಡಿದ್ದಾರೆ.
Tumkuru: ಕುಣಿಗಲ್ ಮತದಾರರಿಗೆ ಹಂಚಲು 2 ಟ್ರಕ್ ಕುಕ್ಕರ್ ಆಗಮನ: ತೆರಿಗೆ ಅಧಿಕಾರಿಗಳು ದಾಳಿ
ಕೊಂಡವಾಡಿ ಚಂದ್ರಶೇಖರ್ ಮಧುಗಿರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಜೊತೆಗೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು, ಕೊಂಡವಾಡಿ ಚಂದ್ರಶೇಖರ್.
ಮಾಜಿ ತು.ಮು.ಲ್ ಅಧ್ಯಕ್ಷ ನಾಗಿದ್ದು, ಟಿಕೆಟ್ ವಿಚಾರವಾಗಿ ನನ್ನ ಮನವಿ ಆಲಿಸದೆ ಏಕಪಕ್ಷಿಯವಾಗಿ ಕೆ.ಎನ್ ರಾಜಣ್ಣ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈಗಾಗ್ಲೇ ಜೆಡಿಎಸ್ ಮುಖಂಡರೊಂದಿಗೆ ಸಂಪರ್ಕದಲ್ಲಿರುವ , ಕೊಂಡವಾಡಿ ಚಂದ್ರಶೇಖರ್ ನ ಎರಡು ದಿನದೊಳಗೆ ಜೆಡಿಎಸ್(Join jds party) ಸೇರುವುದು ನಿಶ್ಚಿತವಾಗಿದೆ.