ಜಾತಿವಾದಿ ರಾಜಕಾರಣಿ ನಾನಲ್ಲ, ಎಲ್ಲ ಧರ್ಮದವರನ್ನು ಸಮಾನವಾಗಿ ನೋಡಿದ್ದೇನೆ: ಸಚಿವ ಎಂಟಿಬಿ
ನಾನು ಹೊಸಕೋಟೆ ಬಂದಾಗಿನಿಂದಿಂದ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಬದಲಾಗಿ ಎಲ್ಲ ಧರ್ಮದವರನ್ನು ಸಮಾನವಾಗಿ ನೋಡಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ (ಏ.16): ನಾನು ಹೊಸಕೋಟೆ ಬಂದಾಗಿನಿಂದಿಂದ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಬದಲಾಗಿ ಎಲ್ಲ ಧರ್ಮದವರನ್ನು ಸಮಾನವಾಗಿ ನೋಡಿ ಅಭಿವೃದ್ಧಿ ಮಾಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ಕೊಳತೂರು ಗ್ರಾಮದಲ್ಲಿ ಕಾಂಗ್ರೆಸ್ ತೊರದು ಬಿಜೆಪಿ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ನಾನು ಜಾತಿವಾದಿ ರಾಜಕಾರಣಿ, ಜಾತಿ ನೋಡಿ ಅಭಿವೃದ್ಧಿ ಮಾಡ್ತೇನೆ ಎಂದು ವಿಪಕ್ಷದವರು ಮತದಾರರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಾರೆ. ಆದರೆ ಕೊಳತೂರು ಗ್ರಾಮದಲ್ಲಿ ನಮ್ಮ ಕುರುಬ ಸಮುದಾಯದ ಜನರೇ ಇಲ್ಲ.
ಆದರೂ ಎರಡೂವರೆ ಕೋಟಿ ಅನುದಾನ ಗ್ರಾಮಕ್ಕೆ ನೀಡಿ ಅಗತ್ಯ ಅಭಿವೃದ್ಧಿ ಮಾಡಿದ್ದೇನೆ. ನಾನು ಜಾತಿವಾದಿ ಆಗಿದ್ರೆ ಅಭಿವೃದ್ಧಿ ಮಾಡ್ತಿದ್ನಾ ಎಂಬುದನ್ನು ಜನ ನಿರ್ಧಾರ ಮಾಡಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಕೋಡಿಹಳ್ಳಿ ಜನಾರ್ಧನ್ ಮಾತನಾಡಿ, ಎಂಟಿಬಿ ನಾಗರಾಜ್ ಅವರು 2004ರಲ್ಲಿ ಬಂದಾಗಿ ತಾಲೂಕಿನ ಬೆಂಡಿಗಾನಹಳ್ಳಿ, ತೆನೆಯೂರು, ತಿಮ್ಮಪ್ಪನಹಳ್ಳಿ, ಕೋಡಿಹಳ್ಳಿ, ಬಿಸನಹಳ್ಳಿ, ಕೊಳತೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮತದಾರರು ಮತದಾನ ಮಾಡಲು ಬಿಡದೆ, ಬಚ್ಚೇಗೌಡರ ಬೆಂಬಲಿಗರೆ ಹಾಕಿಕೊಳ್ಳುತ್ತಿದ್ದರು.
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್
ಆದರೆ ಎಂಟಿಬಿಯವರು ಅದನ್ನೆಲ್ಲಾ ಮೆಟ್ಟಿನಿಂತು ಮತದಾನ ಮಾಡುವ ಹಕ್ಕನ್ನು ಕೊಡಿಸಿದ್ದಾರೆ. ಆದ್ದರಿಂದ ಅವರ ಅಭಿವೃದ್ಧಿಪರ ರಾಜಕಾರಣ ಕಂಡು ಬಿಜೆಪಿಗೆ ಸೇರ್ಪಡೆ ಆಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮತದಾರರು ಈ ಬಾರಿ ವಿಪಕ್ಷದವರಿಗೆ ತಕ್ಕ ಉತ್ತರ ನೀಡಲಿದ್ದಾರೆ. ಗ್ರಾಮಸ್ಥರೆಲ್ಲರೂ ಒಗ್ಗೂಡಿ ಎಂಟಿಬಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಬಾಲಚಂಧ್ರ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ನಾಗರಾಜ್, ಕುರುಬರ ಸಂಘದ ಅಧ್ಯಕ್ಷ ರಘುವೀರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್
ಕೊಳತೂರು ಗ್ರಾಮದಲ್ಲಿ ಬಿಜೆಪಿಗೆ ಸೇರ್ಪಡೆ ಆಗುವವರನ್ನು ಶರತ್ ಬಚ್ಚೇಗೌಡರ ಬೆಂಬಲಿಗರು ಧಮ್ಕಿ ಹಾಕಿದ್ದಾರೆ. ಆದರೆ ಅವರ ದೌರ್ಜನ್ಯ, ದಬ್ಬಾಳಿಕೆಯನ್ನು ನಾನು 2004ರಿಂದ ನೋಡಿಕೊಂಡು ಬಂದಿದ್ದೇನೆ. ಮತದಾರರ ಮನಸ್ಸನ್ನು ಅಭಿವೃದ್ಧಿಯಿಂದ ಗೆಲ್ಲಬೇಕೆ ಹೊರತು ಧಮ್ಕಿ ಹಾಕಿ ಅಲ್ಲ. ಈ ಬಾರಿ ನೂರಕ್ಕೆ ನೂರರಷ್ಟುಪಾರದರ್ಶಕವಾಗಿ ಚುನಾವಣೆ ಮಾಡ್ತೇನೆ.
-ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ