ಕಾಂಗ್ರೆಸ್‌ ಜನರಿಗೆ ಕೇವಲ ಭರವಸೆಯ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ. ಆದರೆ, ನಮ್ಮ ಕುಮಾರಣ್ಣ ನುಡಿದಂತೆ ನಡೆಯುವ ಗ್ಯಾರಂಟಿ ಕಾರ್ಡ್‌ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. 

ಕಿಕ್ಕೇರಿ (ಏ.29): ಕಾಂಗ್ರೆಸ್‌ ಜನರಿಗೆ ಕೇವಲ ಭರವಸೆಯ ಗ್ಯಾರಂಟಿ ಕಾರ್ಡ್‌ ನೀಡುತ್ತಿದೆ. ಆದರೆ, ನಮ್ಮ ಕುಮಾರಣ್ಣ ನುಡಿದಂತೆ ನಡೆಯುವ ಗ್ಯಾರಂಟಿ ಕಾರ್ಡ್‌ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಪರ ರೋಡ್‌ ಶೋ ಮೂಲಕ ಪ್ರಚಾರ ನಡೆಸಿ, ನಮ್ಮ ಪಕ್ಷ ನೀಡುವ ಯೋಜನೆಗಳಿಗೆ ಕುಮಾರಣ್ಣನೇ ಗ್ಯಾರಂಟಿ ಕಾರ್ಡ್‌. ಅವರು ಅಧಿಕಾರಿದಲ್ಲಿದ್ದ ವೇಳೆ ನೀಡಿರುವ ಕೊಡುಗೆಗಳೇ ಇದಕ್ಕೆ ಸಾಕ್ಷಿ. ಅದರಂತೆ ತಾಲೂಕಿನಲ್ಲಿ ದೇವೇಗೌಡರು ಮಾಡಿರುವ ಕೆಲಸಗಳೇ ಇಂದಿಗೂ ಜೀವಂತವಾಗಿವೆ ಎಂದರು.

ನಾನು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಯೋಜನೆ ನೀಡಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಿಲ್ಲೆಯ ರೈತರ 3ಸಾವಿರ ಕೋಟಿ ರು. ಸಾಲಮನ್ನಾವಾಗಿದೆ. ಆದರೆ, ವಿಪಕ್ಷದವರಿಗೆ ಜೆಡಿಎಸ್‌ ಕೊಡುಗೆ ಕಾಣುತ್ತಿಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಗ್ಯಾರಂಟಿ ಇಲ್ಲ ಎಂದ ಮೇಲೆ ಗ್ಯಾರಂಟಿ ಕಾರ್ಡ್‌ಗೆ ಬೆಲೆ ಎಲ್ಲಿದೆ ಎಂದು ಟೀಕಿಸಿದರು. ಇದೇ ವೇಳೆ ಹಲವು ಗ್ರಾಮಗಳಲ್ಲಿ ನಡೆಸಿದ ರೋಡ್‌ ಶೋ ವೇಳೆ ಜೆಡಿಎಸ್‌ ಕಾರ್ಯಕರ್ತರು ಬಾರಿ ಗಾತ್ರದ ಸೇಬಿನ ಹಾರ ಹಾಕಿ ರೇವಣ್ಣ ಪುತ್ರ ಸೂರಜ್‌ ರೇವಣ್ಣ ಅವರನ್ನು ಸ್ವಾಗತಿಸಿದರು. ರೈತಾಪಿ ಮಹಿಳೆಯರು ಆರತಿ ಬೆಳಗಿ ಆಮಂತ್ರಿಸಿದರು.

ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?: ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್‌ ವಾಗ್ದಾಳಿ

ಈ ವೇಳೆ ಅಭ್ಯರ್ಥಿ ಎಚ್‌.ಟಿ.ಮಂಜು, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್‌. ಪುಟ್ಟಸ್ವಾಮಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್‌, ತಾಲೂಕು ಅಧ್ಯಕ್ಷ ಜಾನಕೀರಾಂ, ಹೋಬಳಿ ಅಧ್ಯಕ್ಷಕಾಯಿ ಮಂಜೇಗೌಡ, ಐಕನಹಳ್ಳಿ ಕೃಷ್ಣೇಗೌಡ, ಡಾಲುರವಿ, ವಕೀಲ ಧನಂಜಯ, ಎಂಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಶೋಕ್‌, ಎಂ.ಡಿ.ಹರೀಶ್‌, ಮಲ್ಲೇಶ್‌, ಐ.ಡಿ. ಉದಯಶಂಕರ್‌, ಹರೀಶ್‌, ಶೇಖರ್‌ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಸಂಕಷ್ಟದಲ್ಲಿ ದೇವೇಗೌಡ್ರೇ ಬೇಕು: ನಾಡಿಗೆ ಸಂಕಷ್ಟಎದುರಾದಾಗ ಹೋರಾಟ ಮಾಡುವುದು ಮಾಜಿ ಪ್ರಧಾನಿ ದೇವೇಗೌಡರು. ಆದರೆ, ರಾಜ್ಯದಲ್ಲಿ ಅತಿವೃಷ್ಟಿ, ರೈತರ ಸಾವು ನೋವು ಸಂಭವಿಸಿದಾಗ ಬಾರದ ಬಿಜೆಪಿಯ ಉತ್ತರ ಭಾರತದ ಘಟಾನುಘಟಿ ನಾಯಕರು ಅಧಿಕಾರಕೋಸ್ಕರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು. ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶಾಸಕರು ರೋಡ್‌ ಶೋ ನಡೆಸಿ ಮಾತನಾಡಿ, ಬಿಜೆಪಿ ನಾಯಕರಿಗೆ ಕನ್ನಡದ ಒಂದು ಸಾಲ ಸಹ ಗೊತ್ತಿಲ್ಲ. ಮೂರ್ನಾಲ್ಕು ಜನ ಬರೆದುಕೊಟ್ಟು ಮಾತನಾಡಿಸುತ್ತಿದ್ದಾರೆ ಅಷ್ಟೆ. ಇಂತಹವರು ಜಿಲ್ಲೆಯಲ್ಲಿ ಮತ ಕೇಳಲು ಬರುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಹಿಂದಿನ ಅಭಿವೃದ್ಧಿಗಳೇ ನಾಳೆಯ ಅಧಿಕಾರಕ್ಕೆ ದಾರಿ: ಡಾ.ಜಿ.ಪರಮೇಶ್ವರ್‌

ಬೆಳಗಾವಿಯಲ್ಲಿ ಗಲಾಟೆ, ಕಾವೇರಿ ನೀರಿನ ವಿಚಾರ ಸೇರಿಜಂತೆ ರಾಜ್ಯಕ್ಕಾದ ಸಮಸ್ಯೆಗಳಿಗೆ ಇವರಾರ‍ಯರು ಕರ್ನಾಟಕಕ್ಕೆ ಬರಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರೇ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ನಡೆಸುವಂತಾಗಿದೆ. ಎಲ್ಲದಕ್ಕೂ ದೇವೇಗೌಡರೇ ಬರಬೇಕು ಎಂದರು. ಕನ್ನಡಕ್ಕೆ ಇರುವ ಏಕೈಕ ಪಕ್ಷ ಎಂದರೆ ಜೆಡಿಎಸ್‌. ರೈತರೇ ಕಟ್ಟಿರುವ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಲೋಚಿಸಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ರೈತರು ಹಾಗೂ ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಬೇಕು ಎಂಬ ಕಾಳಜಿಯನ್ನು ಜೆಡಿಎಸ್‌ ಹೊಂದಿದೆ. ಬಡ ಸಮಾನ್ಯರ ಪರವಾದ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೊರಡಿಸಿದೆ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಜಾರಿಗೊಳಿಸಲಿದೆ ಎಂದರು.