ಸೋಲುವ ಹತಾಶೆಯಿಂದ ವರುಣದಲ್ಲಿ ಕಾಂಗ್ರೆಸ್‌ನಿಂದ ಗಲಾಟೆ: ಸಿಎಂ ಬೊಮ್ಮಾಯಿ
ವರುಣ ಕ್ಷೇತ್ರದಲ್ಲಿ ಸೋಲುವ ಹತಾಶೆಯಿಂದ ಕಾಂಗ್ರೆಸ್‌ನವರು ಗಲಾಟೆ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದರು.
ಮೈಸೂರು (ಮೇ.02): ವರುಣ ಕ್ಷೇತ್ರದಲ್ಲಿ ಸೋಲುವ ಹತಾಶೆಯಿಂದ ಕಾಂಗ್ರೆಸ್‌ನವರು ಗಲಾಟೆ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಟೀಕಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಪ್ರಚಾರಕ್ಕೆ ಬಂದ ಮೇಲೆ ನಮ್ಮ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ. ವರುಣದಲ್ಲಿ ಹತಾಶೆಯಿಂದ ಕಾಂಗ್ರೆಸ್ ನವರು ಗಲಾಟೆ ಮಾಡಿಸುತ್ತಿದ್ದಾರೆ. ಮೊದಲೆಲ್ಲಾ ಬಹಳ ಸುಲಭವಾಗಿ ಗೆದ್ದು ಬಿಡುತ್ತಿದ್ದರು.
ಈ ಬಾರಿ ಆ ಪರಿಸ್ಥಿತಿ ಇಲ್ಲ. ಹೀಗಾಗಿ ಇತಂಹ ಗಲಾಟೆ ಹೆಚ್ಚಾಗುತ್ತಿವೆ ಎಂದರು. ದಿನ ದಿನಕ್ಕೂ ಬಿಜೆಪಿ ಪರವಾದ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತಿದೆ. ಜನರನ್ನು ಭಯ ಬೀಳಿಸಿ ಮತ ಹಾಕದಂತೆ ತಡೆಯುವುದು ಕಾಂಗ್ರೆಸ್‌ನ ಉದ್ದೇಶ. ಕಾಂಗ್ರೆಸ್ ಈ ಹಳೇ ಚಾಳಿ ಈಗ ಕೆಲಸ ಮಾಡುವುದಿಲ್ಲ. ಜನ ನಿರ್ಭಯವಾಗಿ ಬಂದು ಮತ ಹಾಕುತ್ತಾರೆ. ನಾನೂ ಕೂಡ ಮುಂದಿನ ದಿನಗಳಲ್ಲಿ ವರುಣ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಅವರು ತಿಳಿಸಿದರು.
ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಹೇಳಿ: ಅಪ್ಪಚ್ಚು ರಂಜನ್‌ಗೆ ಮಂತರ್ ಗೌಡ ಸವಾಲು
ಇನ್ನೇನು ನಿರೀಕ್ಷೆ ಸಾಧ್ಯ: ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಪ್ರಿಯಾಂಕ ಅವರಿಂದ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ. ಅವರು ಈ ಹಿಂದೆ ಕೂಡ ಮಾತನಾಡಿ ಆ ಮಾತನ್ನು ಹಿಂದಕ್ಕೆ ಪಡೆದಿದ್ದರು. ಅಂತವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದಿದ್ದಾರೆ. ಅವರನ್ನು ಕ್ಷಮಿಸುತ್ತೀರಾ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್‌ನ ಗ್ಯಾರೆಂಟಿಗಳನ್ನು ನಂಬಬಾರದು. ಚುನಾವಣೆಯಲ್ಲಿ ವಂಚಿಸುವ ಕೆಲಸವನ್ನು ಮೊದಲಿನಿಂದಲೂ ಆ ಪಕ್ಷ ಮಾಡುತ್ತಿದೆ. ಎಲ್ಲಾ ಹಣವನ್ನು ದುಂದುವೆಚ್ಚ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ. ಮೇ 10ರವರೆಗೆ ಕಾಂಗ್ರೆಸ್ಸಿಗರು ಗ್ಯಾರಂಟಿ ಎನ್ನುತ್ತಾರೆ. ನಂತರ ಗಳಗಂಟಿ ಎನ್ನುವುದಾಗಿ ವ್ಯಂಗ್ಯವಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಯಾರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ನೀಡುತ್ತೀರಿ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಮೀಸಲಾತಿ ತೆಗೆದು ಎಸ್ಸಿ, ಲಿಂಗಾಯತರು, ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅಧಿಕಾರಕ್ಕೆ ಬಂದರೆ ಮುಸ್ಲಿಂರಿಗೆ ಮೀಸಲಾತಿ ನೀಡುವುದಾಗಿ ಹೇಳಿದ್ದಾರೆ. ಯಾರ ಮೀಸಲಾತಿ ಕಿತ್ತು ಇವರಿಗೆ ನೀಡುತ್ತಾರೆ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು. ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಪರ ಭರ್ಜರಿ ರೋಡ್ ನಡೆಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರಚಾರ ಪರೇಡ್: ಜೆಡಿಎಸ್ ಪಕ್ಷಕ್ಕೆ ಭರವಸೆ ಮೂಡಿಸಿದ ಕ್ಷೇತ್ರಗಳು ಯಾವುವು ಗೊತ್ತಾ?
ನೀವು ಯಾರ ಮೀಸಲಾತಿ ತೆಗೆಯುವಿರಿ? ಯಾರದು ಬಂದ್ ಮಾಡುವಿರಿ? ಲಿಂಗಾಯತರದಾ? ಒಕ್ಕಲಿಗರದಾ? ಎಸ್‌ಸಿ, ಎಸ್‌ಟಿ ಜನರದ್ದು ತೆಗೆಯುವಿರಾ? ಎಂದು ಪ್ರಶ್ನಿಸಿದರು. ಹಾಗಾದರೆ ಹೇಗೆ ಮುಸ್ಲಿಂರಿಗೆ ಮೀಸಲಾತಿ ನೀಡುವಿರಿ? ಎಂದರು. ರಾಣಿಬೆನ್ನೂರಿನ ಜನತೆ 2024ರಲ್ಲಿ ನರೇಂದ್ರ ಮೋದಿಯನ್ನು ಪುನಃ ಪ್ರಧಾನಿ ಮಾಡಲು ಬಯಸುವುದಾದರೆ ಅರುಣಕುಮಾರ ಪೂಜಾರ ಅವರನ್ನು ಶಾಸಕರನ್ನಾಗಿ ಮಾಡುವಿರಲ್ಲವೇ? ಕಮಲದ ಚಿನ್ಹೆಗೆ ಬಟನ್ ಒತ್ತುವಿರಲ್ಲವೇ? ಅದಕ್ಕಾಗಿ ಕೈ ಎತ್ತಿ ಹೇಳಿ ಎಂದು ನೆರದಿದ್ದ ಕಾರ್ಯಕರ್ತರನ್ನು ಹುರಿದುಂಭಿಸಿದರು.