ಭಾನುವಾರದಿಂದ ಸಿಎಂ ಬೊಮ್ಮಾಯಿ ರೋಡ್ ಶೋ ನಡೆಸಲಿದ್ದು, ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಸಿಎಂ ರೋಡ್ ಶೋ ರೋಡ್ ಮ್ಯಾಪ್ ಇಲ್ಲಿ ನೀಡಲಾಗಿದೆ.
ಬೆಂಗಳೂರು (ಏ.22): ಕರ್ನಾಟಕ ಚುನಾವಣಾ ಕಣ ರಂಗೇರಿದೆ. ಪಕ್ಷಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದೆ. ಭಾನುವಾರದಿಂದ ಮುಖ್ಯಮಂತ್ರಿ ಬೊಮ್ಮಾಯಿ ಭರ್ಜರಿ ರೋಡ್ ಶೋ ಆರಂಭಿಸಲಿದ್ದು, ಈ ಮೂಲಕ ಮತಬೇಟೆಗೆ ಇಳಿದಿದ್ದಾರೆ. ಬಸವೇಶ್ವರರ ಪುತ್ಥಳಿಗೆ ಮಾಲರ್ಪಣೆ ಮಾಡಿ ತಮ್ಮ ರೋಡ್ ಶೋಗೆ ಬೊಮ್ಮಾಯಿ ಚಾಲನೆ ನೀಡಲಿದ್ದು, ಯಲಹಂಕದಿಂದ ಆರಂಭಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ವಿಶೇಷವೆಂದರೆ ನಾಳೆ ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ ನಡೆಸಲಿದ್ದಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಪ್ರಚಾರ ನಡೆಸಲಿದ್ದು, ಸಿಎಂ ಬೊಮ್ಮಾಯಿ ನಡೆಸುವ ರೋಡ್ ಶೋಗೆ ಜಯ ವಾಹಿನಿ ಎಂದು ಹೆಸರಿಡಲಾಗಿದೆ.
ಯಲಹಂಕದಿಂದ ಆರಂಭಿಸಿ ಚಿಕ್ಕಮಗಳೂರುವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಯಲಹಂಕದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬಳಿಕ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಗ್ರಾಮಾಂತರ, ತುಮಕೂರು ನಗರ, ಗುಬ್ಬಿ , ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ, ಸಾರ್ವಜನಿಕ ಸಭೆ ಗಳಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಗ್ಗೆ ಬಾಷಣ ಮಾಡಲಿದ್ದಾರೆ.
ಹೆಚ್‌ಡಿಕೆಗೆ ಅನಾರೋಗ್ಯ, ಚುನಾವಣಾ ಪ್ರಚಾರ ಕಾರ್ಯಕ್ರಮಗಳು ದಿಢೀರ್ ರದ್ದು!
ಸಿಎಂ ರೋಡ್ ಶೋ ರೋಡ್ ಮ್ಯಾಪ್ ಇಂತಿದೆ:
ಯಲಹಂಕ - 17 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ದೊಡ್ಡಬಳ್ಳಾಪುರ - 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ನೆಲಮಂಗಲ - 31 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ
ದಾಬಸಪೇಟೆ - 22 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ
ತುಮಕೂರು ಗ್ರಾ. ಗೊಳೂರು - 25 ಕಿಮೀ ರೋಡ್ ಶೋ..
ತುಮಕೂರು ನಗರ - 6 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ಗುಬ್ಬಿ - 20 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ಕೆ.ಬಿ ಕ್ರಾಸ್ - 33 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ತಿಪಟೂರು - 21 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ಅರಸಿಕೇರೆ - 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ..
ಬಾಣವರ - 15 ಕಿಮೀ ರೋಡ್ ಶೋ
ಕಡೂರು - 23 ಕಿಮೀ ರೋಡ್ ಶೋ ಮತ್ತು ಸಾರ್ವಜನಿಕ ಸಭೆ.
Chikkamagaluru: ನಮಾಜ್ ವೇಳೆ ಕಾಂಗ್ರೆಸ್ ಪ್ರಚಾರಕ್ಕೆ ಮುಸ್ಲಿಮರ ವಿರೋಧ, 2 ಗುಂಪುಗಳ ನಡುವೆ
ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
