ಏ.9 ಅಥವಾ 10ಕ್ಕೆ ಜೆಡಿ​ಎಸ್‌ ಅಂತಿಮ ಪಟ್ಟಿ ಬಿಡು​ಗಡೆ: ಎಚ್‌.ಡಿ.ಕುಮಾ​ರ​ಸ್ವಾಮಿ

ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಅಂತಿಮ ಪಟ್ಟಿ​ಯನ್ನು ಭಾನು​ವಾರ ಅಥವಾ ಸೋಮ​ವಾರ ಬಿಡು​ಗಡೆ ಮಾಡ​ಲಾ​ಗು​ವುದು ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಹೇಳಿದ್ದಾರೆ. 

Karnataka Election 2023 April 9th or 10th JDS Final List Release Says HD Kumaraswamy gvd

ರಾಮ​ನ​ಗ​ರ (ಏ.08): ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಅಂತಿಮ ಪಟ್ಟಿ​ಯನ್ನು ಭಾನು​ವಾರ ಅಥವಾ ಸೋಮ​ವಾರ ಬಿಡು​ಗಡೆ ಮಾಡ​ಲಾ​ಗು​ವುದು ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಹೇಳಿದ್ದಾರೆ. ಶುಕ್ರವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಕಡೂರು ಮತ್ತು ಹಾನ​ಗಲ್‌ನ ಕಾರ್ಯ​ಕ್ರಮ ಮುಗಿ​ದ ಬಳಿಕ ಪಕ್ಷದ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ ಅವ​ರೊಂದಿಗೆ ಚರ್ಚಿಸಿ ಜೆಡಿಎಸ್‌ ಅಭ್ಯ​ರ್ಥಿ​ಗಳ ಅಂತಿಮ ಪಟ್ಟಿಸಿದ್ಧ​ಪ​ಡಿ​ಸುವು​ದಾಗಿ ತಿಳಿ​ಸಿ​ದರು. ಅಂತಿಮ ಪಟ್ಟಿ​ಯಲ್ಲಿ ಹಾಸನ ಕ್ಷೇತ್ರದ ಟಿಕೆಟ್‌ ವಿಚಾ​ರವನ್ನು ಕ್ಲಿಯರ್‌ ಮಾಡು​ತ್ತೇವೆ.  ವರುಣಾ ಕ್ಷೇತ್ರ​ದಲ್ಲಿ ನಮ್ಮ ಅಭ್ಯರ್ಥಿ ನಾಪತ್ತೆಯಾಗಿದ್ದು, ಎಲ್ಲಿ ಕಾಣೆ​ಯಾ​ಗಿ​ದ್ದಾರೋ ಹುಡು​ಕಿ​ಸು​ತ್ತೇನೆ. 

ಆ ಕ್ಷೇತ್ರದ ಅಭ್ಯರ್ಥಿ ಬದ​ಲಾ​ವಣೆ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು. ಜೆಡಿಎಸ್‌ ಈ ಹಿಂದೆಯೇ ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದೆ. ನಂತರ ಹಾಸನದಲ್ಲಿ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಕುಮಾರಸ್ವಾಮಿ ಅವರು ಎಚ್‌.ಪಿ.ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಲು ಹಟ ಹಿಡಿದಿರುವುದರಿಂದ ಕಗ್ಗಂಟಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಪಂಚರತ್ನ ಯೋಜನೆ ಜಾರಿಯಾದರೆ ರಾಜ್ಯ ಸ್ವರ್ಗ ಸದೃಶ್ಯವಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ

ನನ್ನನ್ನು ಕಟ್ಟಿ ​ಹಾ​ಕಲು ಯಾರಿಂದಲೂ ಆಗು​ವು​ದಿಲ್ಲ: ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗು​ವು​ದಿಲ್ಲ. ಯಾರು ಏನೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಗೊ​ಡದೆ ನನಗೆ ರಕ್ಷಣೆ ಕೊಡು​ತ್ತಾ​ರೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. ತಾಲೂ​ಕಿನ ಜಾಲ​ಮಂಗ​ಲ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಚನ್ನ​ಪ​ಟ್ಟಣ ಕ್ಷೇತ್ರದ ಜನರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿ​ದ್ದಾರೆ. ರಾಮ​ನ​ಗರ, ಚನ್ನ​ಪ​ಟ್ಟಣ ಹಾಗೂ ಮಾಗಡಿ ಜನರು ನನ್ನನ್ನು ಮನೆ ಮಗ​ನಂತೆ ನೋಡು​ತ್ತಿ​ದ್ದಾರೆ. ಯಾರು ಎಷ್ಟೇ ಅಪ​ಪ್ರ​ಚಾರ ಮಾಡಿ​ದರು ಜನರು ಕಿವಿ​ಕೊ​ಡು​ವು​ದಿಲ್ಲ. 

ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಪಕ್ಷ​ದಿಂದ ಯಾರೇ ಸ್ಪರ್ಧೆ ಮಾಡಿ​ದರು ನಾನು ತಲೆ ಕೆಡಿ​ಸಿ​ಕೊ​ಳ್ಳು​ವು​ದಿಲ್ಲ. ಎಲ್ಲ​ವನ್ನೂ ಕ್ಷೇತ್ರದ ಜನ​ರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡು​ತ್ತಿ​ದ್ದೇನೆ ಎಂದು ಪ್ರಶ್ನೆ​ಯೊಂದಕ್ಕೆ ಉತ್ತರಿ​ಸಿ​ದ​ರು. ಸಚಿ​ವರು ಹಾಗೂ ಶಾಸ​ಕರು ಉದ್ಘಾ​ಟನೆ ಮಾಡುವ ಕಾರ್ಯ​ಕ್ರ​ಮ​ಗ​ಳಿಗೆ ಪ್ರಧಾನಿ ಮೋದಿ ಅವ​ರನ್ನು ಕರೆ​ಸು​ತ್ತಿ​ದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗು​ತ್ತಿ​ದ್ದಾರೆ. ಕೋವಿಡ್‌ ಹಾಗೂ ಪ್ರವಾಹ ಬಂದಾಗ ಕರ್ನಾ​ಟ​ಕಕ್ಕೆ ಬರಲು ಪ್ರಧಾ​ನಿ​ಯ​ವ​ರಿಗೆ ಸಮಯ ಇರ​ಲಿಲ್ಲ. ಈಗ ಕರ್ನಾ​ಟ​ಕದ ಮೇಲೆ ಪ್ರೀತಿ ಉಕ್ಕಿ ಹರಿ​ಯು​ತ್ತಿದೆ. ಅವರು ಬರು​ತ್ತಾರೆ, ಹೋಗು​ತ್ತಾರೆ ಅಷ್ಟೇ ಎಂದು ಕುಮಾ​ರ​ಸ್ವಾಮಿ ಲೇವಡಿ ಮಾಡಿ​ದರು.

ಯಾರೇ ಸ್ಪರ್ಧಿಸಿದರೂ ಕಣ​ಕ್ಕಿ​ಳಿ​ಯಲು ತಯಾ​ರು: ರಾಮ​ನ​ಗರ ಕ್ಷೇತ್ರ​ದಲ್ಲಿ ನಮ್ಮ ವಿರುದ್ಧ ಯಾರೇ ಅಭ್ಯ​ರ್ಥಿ​ಯಾ​ದರು ಕಣ​ಕ್ಕಿ​ಳಿ​ಯಲು ತಯಾ​ರಿ​ದ್ದೇವೆ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಪ್ರತಿ​ಕ್ರಿ​ಯಿ​ಸಿ​ದರು. ತಾಲೂ​ಕಿನ ಜಾಲ​ಮಂಗ​ಲ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ರಾಮ​ನ​ಗರ ಕ್ಷೇತ್ರಕ್ಕೆ ಸಂಸದ ಡಿ.ಕೆ.​ಸು​ರೇಶ್‌ ಹೆಸರು ಪ್ರಸ್ತಾ​ಪಿಸಿ ಇಕ್ಬಾಲ್‌ ಹುಸೇ​ನ್‌ ಅವ​ರಿಗೆ ಟಿಕೆಟ್‌ ಘೋಷಣೆ ಮಾಡಿ​ರು​ವುದು ಕಾಂಗ್ರೆಸ್‌ ಪಕ್ಷಕ್ಕೆ ಬಿಟ್ಟವಿಚಾರ. ರಾಮ​ನ​ಗರ ಜಿಲ್ಲೆ ಜನರು ದೇವೇ​ಗೌ​ಡರ ಮೇಲೆ ಇಟ್ಟಿ​ರುವ ಗೌರವವನ್ನು ಯಾರಿಂದಲೂ ಕಟ್ಟಿ​ಹಾ​ಕಲು ಸಾಧ್ಯವಿಲ್ಲ. 

ಕಾಂಗ್ರೆಸ್‌ ಬಂಡಾಯ ತೀವ್ರ: 2ನೇ ಟಿಕೆಟ್‌ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು

ಕುಮಾ​ರ​ಸ್ವಾಮಿ ಹಾಗೂ ನನ್ನನ್ನು ಕಟ್ಟಿ ​ಹಾ​ಕಲು ಯಾರಿಂದಲೂ ಸಾಧ್ಯ​ವಿಲ್ಲ. ಚನ್ನ​ಪ​ಟ್ಟಣ ಜೆಡಿ​ಎಸ್‌ ಕಾರ್ಯ​ಕ​ರ್ತರು ಸಹ ಸಜ್ಜಾ​ಗಿ​ದ್ದಾರೆ ಎಂದು ಹೇಳಿ​ದ​ರು. ಇತಿಹಾಸದಲ್ಲಿ ಯಾರು ಕೂಡ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದು ಅಭಿ​ವೃದ್ಧಿ ಕೆಲಸ ಮಾಡಿ​ರ​ಲಿಲ್ಲ. ಕುಮಾ​ರ​ಸ್ವಾ​ಮಿ​ರ​ವರು ಆ ಕೆಲಸ ಮಾಡಿ ತೋರಿ​ಸಿ​ದ್ದಾರೆ. ಜನರು ನಮಗೆ ಆಶೀ​ರ್ವಾದ ಮಾಡು​ತ್ತಾ​ರೆಂಬ ವಿಶ್ವಾ​ಸ​ವಿದೆ ಎಂದು ನಿಖಿಲ್‌ ತಿಳಿ​ಸಿ​ದ​ರು.

Latest Videos
Follow Us:
Download App:
  • android
  • ios