Asianet Suvarna News Asianet Suvarna News

ಜನರ ಕೈಗೆ ಮೋದಿ ಸರ್ಕಾರದ ಚೊಂಬು: ಡಿ.ಕೆ. ಶಿವಕುಮಾರ್‌

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಯ 27 ಸಂಸದರು ಆಯ್ಕೆಯಾಗಿದ್ದರೂ ಈ ಭಾಗದ ಪ್ರಮುಖ ಕುಡಿಯುವ ನೀರಿನ ಯೋಜನೆ ಯಾಗಿರುವ ಮಹದಾಯಿ ಹೋರಾಟಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ 10 ತಿಂಗಳಲ್ಲಿ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಪ್ರತಿ ಮನೆಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ 

Karnataka DCM DK Shivakumar Slams PM Narendra Modi Government grg
Author
First Published May 5, 2024, 1:21 PM IST

ಕುಂದಗೋಳ(ಮೇ.05):  ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಜನಪರ ಯೋಜನೆ ನೀಡದೇ ದೇಶದ ಜನರ ಕೈಗೆ ಖಾಲಿ ಚೊಂಬು ನೀಡಿದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹರಿಹಾಯ್ದರು.  ಅವರು ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಯ 27 ಸಂಸದರು ಆಯ್ಕೆಯಾಗಿದ್ದರೂ ಈ ಭಾಗದ ಪ್ರಮುಖ ಕುಡಿಯುವ ನೀರಿನ ಯೋಜನೆ ಯಾಗಿರುವ ಮಹದಾಯಿ ಹೋರಾಟಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ 10 ತಿಂಗಳಲ್ಲಿ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಪ್ರತಿ ಮನೆಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.

ಪ್ರಜ್ವಲ್‌ ವಿದೇಶಕ್ಕೆ ಹೋಗುವುದರ ಹಿಂದೆ ಸಿದ್ದರಾಮಯ್ಯ ಕೈವಾಡ: ಪ್ರಲ್ಹಾದ್ ಜೋಶಿ ಆರೋಪ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ಆರೋಪಿಗೆ ಕಠಿಣ ವಾದ ಶಿಕ್ಷೆ ಕೊಡಿಸಲು ಸರ್ಕಾರ ಬದ್ಧವಾಗಿದೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಸುಳ್ಳು ಹಬ್ಬಿಸುತ್ತಿರುವ ಬಿಜೆಪಿಯವರ ಕುತಂ ತ್ರವನ್ನು ಜನತೆ ನಂಬುವುದಿಲ್ಲ. 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಏನು ಮಾಡಲೂ ಸಾಧ್ಯವಿಲ್ಲ ಎಂದರು.

ಸಣ್ಣ ಟಗರು: 

ಧಾರವಾಡ ಲೋಕಸಭಾ ಚುನಾವಣೆ ಅಭ್ಯರ್ಥಿ ವಿನೋದ ಅಸೂಟಿ ಸಣ್ಣ ಟಗರು. ಶಿವಳ್ಳಿಯವರ ಇನ್ನೊಂದು ತದ್ರೂಪಿ ಎನ್ನುತ್ತಾ ದಿ. ಸಿ.ಎಸ್. ಶಿವಳ್ಳಿ ಅವರನ್ನು ಡಿ.ಕೆ. ಶಿವಕುಮಾರ ನೆನಪು ಮಾಡಿಕೊಂಡರು. ನಿಮಗೆ ಕಾಂಗ್ರೆಸ್ ಸರ್ಕಾರ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ಗೆ ಮತಹಾಕುವ ಮೂಲಕ ಕೂಲಿ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದ ಮೋದಿ ಸರ್ಕಾರಕ್ಕೆ ಎರಡು ಅವಧಿ ಅವಕಾಶ ಕೊಟ್ಟರೂ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಗೊಬ್ಬರ, ಕೀಟನಾಶಕಗಳ ಮೇಲಿನ ಬೆಲೆ ಏರಿಕೆಯಾಗಿದ್ದೇ ದೇಶದ ಜನತೆಗೆ ನೀಡಿದ ಮೋದಿ ಗ್ಯಾರಂಟಿ ಎಂದು ಕಿಡಿಕಾರಿದರು.

ವಿದೇಶಗಳಲ್ಲಿನ ಯುದ್ಧ ನಿಲ್ಲಿಸಿದ ಮೋದಿಗೆ ಮಹದಾಯಿ ಯೋಜನೆ ಜಾರಿಗೆ ತರಲು ಆಗಿಲ್ಲ: ಸಂತೋಷ್ ಲಾಡ್

ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ, ಶಾಸಕ ಎ.ಸಿ. ಶ್ರೀನಿವಾಸ್, ವಿಪ ಸದಸ್ಯ ನಾರಾಯ ಣಸ್ವಾಮಿ, ಹು-ಧಾ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಶಾಕೀರ ಸನದಿ, ಚಿತ್ರನಟ ಸಾಧು ಕೋಕಿಲ, ತಾಲೂಕು ಅಧ್ಯಕ್ಷ ಶಿವಾನಂದ ಮಾತನಾಡಿದರು. 

ಈ ವೇಳೆ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಎ.ಎಂ. ಹಿಂಡಸಗೇರಿ, ಮೋಹನ ಲಿಂಬಿಕಾಯಿ, ಶಾಕೀರ ಸನದಿ, ಅರವಿಂದ ಕಟಗಿ, ಷಣ್ಮುಖ ಶಿವಳ್ಳಿ, ವೆಂಕನಗೌಡ ಹಿರೇಗೌಡ್ರ, ಅರವಿಂದ ಕಟಗಿ, ಜಗದೀಶ ಉಪ್ಪಿನ, ಬಾಬಾಜಾನ ಮಿಶ್ರಿಕೋಟಿ, ಸಲೀಂ ಕ್ಯಾಲ್ಗೊಂಡ, ಅಪ್ಪಣ್ಣ ಹಿರೇಗೌಡ್ರ ಸೇರಿದಂತೆ ಹಲವರಿದ್ದರು. 

Latest Videos
Follow Us:
Download App:
  • android
  • ios