ಸಿ.ಟಿ. ರವಿ ಅವರು ಎಲ್ಲ ದೇವರನ್ನೂ ಪೂಜಿಸುವುದಾಗಿ ಹೇಳಿದರು. ಜಮೀರ್ ಅಹ್ಮದ್ ಪಾಕಿಸ್ತಾನ ಜಿಂದಾಬಾದ್ ಎನ್ನುವವರ ವಿರುದ್ಧ ಹೋರಾಡಬೇಕೆಂದರು. ರೌಡಿಶೀಟರ್ ಹಾಕಲು ಹಲವು ಕಾರಣಗಳಿವೆ ಎಂದರು. ಕಾಂಗ್ರೆಸ್ ದನಗಳ್ಳರಿಗೆ ಪರಿಹಾರ ನೀಡಿದೆ, ಹಿಂದುಗಳ ಮೇಲಿನ ದಾಳಿಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರ ಅಗತ್ಯವಿದೆ ಎಂದರು.

ಬೆಂಗಳೂರು (ಮೇ 06): ನಾವು ಅಲ್ಲಾಹು ದೇವರಲ್ಲ ಎಂದು ಹೇಳೊದಿಲ್ಲ. ನಾವು ಎಲ್ಲ ದೇವರನ್ನೂ ಕೂಡ ಪೂಜಿಸವವರು. ಅಲ್ಲಾ ಒಬ್ಬನೇ ಹೆಚ್ಚಲ್ಲ. ಆದರೆ, ನೀವು ಅಲ್ಲಾ ಒಬ್ಬನೇ ದೇವರು ಎನ್ನೋದನ್ನ ಬದಲಿಸಿ. ನೀವು ದೇವನೊಬ್ಬ ನಾಮ ಹಲವು ಎಂದು ಹೇಳಿ ನೋಡೊಣ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಅವರು ಯುದ್ಧಕ್ಕೆ ಹೋಗ್ತೇನೆ ಎಂದಿದ್ದಾರೆ. ನಾನು ಅವರ ಸ್ಪಿರಿಟ್ ಅನ್ನು ಒಪ್ಪುತ್ತೇನೆ. ಇದನ್ನು ನಾನು ಪಾಸಿಟಿವ್ ಆಗಿ ತಗೋತಿನಿ. ಆದರೆ, ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಸೈನಿಕರು ಇದ್ದಾರೆ. ಜಮೀರ್ ಅಹಮ್ಮದ್ ಹೋರಾಡ ಬೇಕಿರೋದು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ. ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಗಲಭೆ ಮಾಡಿದವರನ್ನು ಮಟ್ಟ ಹಾಕಲು ಜಮೀರ್ ಅಹ್ಮದ್ ಬೇಕು. ಪಾಕಿಸ್ತಾನ ಜಿಂದಾಬಾದ್ ಎನ್ನುವ ಕುನ್ನಿಗಳ ವಿರುದ್ಧ ನೀವು ಹೋರಾಟ ಮಾಡಿ. ಭಾರತದ ಒಳಗೆ ಇದ್ದು ನಾಯಿ ತರ ಬೊಗಳುವ ವಿರುದ್ಧ ಹೋರಾಡಿ ಎಂದು ಹೇಳಿದರು.

ಭಾರತದಲ್ಲಿ ನಾವು (ಹಿಂದುಗಳು) ಅಲ್ಲಾಹು ದೇವರಲ್ಲ ಎಂದು ಹೇಳುವುದಿಲ್ಲ. ನಾವು ಎಲ್ಲ ದೇವರ ಪೂಜಿಸವವರು. ಅಲ್ಲಾ ಒಬ್ಬ ಹೆಚ್ಚಲ್ಲ. ಆದರೆ ನೀವು ಅಲ್ಲಾ ಒಬ್ಬನೇ ದೇವರು ಎನ್ನೋದನ್ನ ಬದಲಿಸಿ. ನೀವು ದೇವನೊಬ್ಬ ನಾಮ ಹಲವು ಎಂದು ಹೇಳಿ ನೋಡೊಣ ಎಂದು ಸವಾಲು ಹಾಕಿದರು. ನನ್ನ ಮೇಲೂ ರೌಡಿಶೀಟರ್ ಇತ್ತು, ಆದರೆ ನಾನು ರೌಡಿ ಅಲ್ಲ. ಹಲವು ಕಾರಣಕ್ಕೆ ರೌಡಿಶೀಟರ್ ಹಾಕ್ತಾರೆ. ಕ್ರಿಮಿನಲ್‌ ಮೊಕದ್ದಮೆ ದಾಖಲಾದರೆ ರೌಡಿಶೀಟರ್ ಹಾಕ್ತಾರೆ. ಕಾಂಗ್ರೆಸ್‌ನ ದೊಡ್ಡ ನಾಯಕರನ್ನು ಕೋತ್ವಾಲ್ ಶಿಷ್ಯ ಎನ್ನುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಆತ ರೌಡಿ ಶೀಟರ್ ಎಂದು ಆತನ ಮನೆಗೆ ಕಾಂಗ್ರೆಸ್ ಹೋಗಿಲ್ಲ ಎಂದಿದೆ. ದನಗಳ್ಳ‌ ಕಬೀರ್ ಎನ್ಕೌಂಟ್ ಆಗಿತ್ತು. ಕಬೀರ್ ಹೆಬ್ಯುಚುವೆಲ್ ಅಫೆಂಡರ್ ಆಗಿದ್ದ. ಆತನ ಮನೆಗೆ ಕಾಂಗ್ರೆಸ್ ನಾಯಕರು ಹೋಗಿದ್ದರು. ಆತನ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನೂ ಕೊಟ್ಟಿದ್ದಾರೆ. ಇದ್ರಿಶ್ ಪಾಶಾ ದನಗಳ್ಳ, ಹೃದಾಯಾಘಾತದಿಂದ ಸತ್ತಿದ್ದನು. ಆದರೆ, ಆತನ ಸಾವಿಗೆ ಪುನೀತ್‌ ಕೆರೆಹಳ್ಳಿ ಕಾರಣ ಎಂದು ದೂರು ದಾಖಲಿಸಿದ್ದರು. ಇದ್ರಿಷ್ ಪಾಷಾಗೆ 25 ಲಕ್ಷ ಪರಿಹಾರ ಕೊಟ್ಟರು ಎಂದರು.

ಸುಹಾಸ್ ಹತ್ಯೆ ಯಾವ ಕಾರಣಕ್ಕೆ ಆಯ್ತು. ಎಸ್‌ಡಿಪಿಐ ಮೇಲಿನ ಕೇಸ್ ಯಾಕೆ ವಾಪಸ್ ತಗೊಂಡರು. ಕೋಮು ಗಲಭೆ, ದೊಂಬಿ, ಪೊಲಿಸ್ ಸ್ಟೇಷನ್ ಗೆ ಬೆಂಕಿ ಹಾಕಿದ ಪ್ರಕರಣ ಆಗಿತ್ತು. ಆಗ ದಿನೇಶ್ ಗುಂಡೂರಾವ್ ಗೆ ಮುಜುಗರ ಆಗಿಲ್ಲ. ಅವರೆಲ್ಲ ನಿಮ್ಮ ನೆಂಟರಾ? ಮಂತ್ರಿಗಳಿಗೆ ಗೊತ್ತಿಲ್ಲದಂತೆ ಕೆಲವರ ಮೇಲೆ ರೌಡಿ ಶೀಟ್ ಹಾಕಿರುತ್ತಾರೆ. ಅದನ್ನ ಬಿಜೆಪಿ ಕಾಲದಲ್ಲಿ ತಗೆಸಿದ್ದು ಅಷ್ಟೆ. ಕಾಂಗ್ರೆಸ್ ದನಗಳ್ಳನಿಗೆ ತಕ್ಷಣ ಪರಿಹಾರ ಕೊಟ್ಟರು. ಜಮ್ಮು ಕಾಶ್ಮೀರದಂತೆ ಇಲ್ಲಿ ಕಾಂಗ್ರೆಸ್ ಕೂಡ ಧರ್ಮ ಕೇಳುತ್ತಿದೆ ಎಂದು ತಿಳಿಸಿದರು.

ನಾಳೆ ಯುದ್ಧ ಎದುರಿಸುವ ಮಾಕ್ ಡ್ರಿಲ್ ನಡೆಯಲಿರುವ ವಿಚಾರದ ಬಗ್ಗೆ ಮಾತನಾಡಿ, ಜನ ಎಚ್ಚರ ವಹಿಸಬೇಕು. ಹೊರಗಿನ ಶತೃಗಳ ಬಗ್ಗೆ ನಮಗೆ ಭಯ ಇಲ್ಲ. 1962ರ ಯುದ್ಧ ಒಂದು ಹೊರತು ಪಡಿಸಿ ಉಳಿದ ಯುದ್ಧಗಳಲ್ಲೆಲ್ಲ ನಮ್ಮ ಸಾಮರ್ಥ್ಯ ಏನು ಅಂತ ತೋರಿಸಿದೀವಿ. 1962ರಲ್ಲಿ ಅಂದಿನ ಪ್ರಧಾನಿಯ ಮೂರ್ಖತನದಿಂದ ನಮ್ಮ ಸೈನಿಕರನ್ನು ಬಲಿಕೊಡುವ ಸಂದರ್ಭ ಬಂತು. ಆದರೆ, ಅಪಾಯ ಇರೋದು ಒಳಗಿನ ದ್ರೋಹಿಗಳ ಬಗ್ಗೆ. ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯ ನಾಗರೀಕರಿಗೆ ಬೇಕಿದೆ ಎಂದರು.