ಸಿ.ಡಿ ಯುವತಿಯ ಪರವಾಗಿ ವಕೀಲರೊಬ್ಬರು ದೂರು ನೀಡಿದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರು, (ಮಾ.26): ರಾಸಲೀಲೆ ಸಿ.ಡಿ. ಕೇಸ್‌ಗೆ ಸಂಬಂಧಿಸಿದಂತೆ ಯುವತಿ ದೂರು ನೀಡಿದ್ದೇ ತಡ ರಮೇಶ್ ಜಾರಕಿಹೊಳಿ ಅವರು ನಾಳೆಯಿಂದ ನನ್ನ ಆಟ ಶುರು ಎಂದು ಗುಡುಗಿದ್ದಾರೆ.

"

ಅಲ್ಲದೇ ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ, ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಿ.ಡಿ.ಕೇಸ್: ಯುವತಿ ಕಂಪ್ಲೆಂಟ್ ಕೊಟ್ಟ ಬೆನ್ನಲ್ಲೇ ಗುಡುಗಿದ ರಮೇಶ್ ಜಾರಕಿಹೊಳಿ

ಇನ್ನು ಈ ಹೇಳಿಕೆಗೆ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಸಿಡಿ ಪ್ರಕರಣದ ಮೇಲೆ ಜಾರಕಿಹೊಳಿ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು, ದಿಕ್ಕು ತಪ್ಪಿಸಲು ಏನನ್ನು ಬೇಕಾದರೂ ಮಾಡಬಲ್ಲರು ಎನ್ನುವುದಕ್ಕೆ ಈ ಹೇಳಿಕೆಗಳೇ ಸಾಕ್ಷಿ ಎಂದು ಟ್ವೀಟ್ ಮಾಡಿದೆ.

Scroll to load tweet…

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ ಇದಕ್ಕೆ ಅವಕಾಶ ನೀಡದಂತೆ ಕೂಡಲೇ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಆಗ್ರಹಿಸಿದೆ.

Scroll to load tweet…

ಸಿಡಿ ಯುವತಿ ಇಂದು ಲಿಖಿತ ದೂರು ನೀಡಿದ ಬೆನ್ನಲ್ಲೇ ಬೆಂಗಳೂರಿನ ಸದಾಶಿವನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ಸರ್ಕಾರವನ್ನೇ ಬೀಳಿಸಿದವನಿಗೆ ಸಿಡಿ ಕೇಸ್ ಯಾವ ಲೆಕ್ಕ. ನಾಳೆಯಿಂದ ನಮ್ಮ ಆಟ ಶುರುವಾಗಲಿದೆ'' ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.