ಬೆಂಗಳೂರು, (ಮಾ.12): ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಪದವಿ ಮುಂದಿರುವ ಉಪ ಹೋಗಿ ಆದಷ್ಟು ಬೇಗ ಮುಖ್ಯಮಂತ್ರಿಯಾಗಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದು ರಾಜ್ಯ ರಾಜಕಾರಣದಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಲ್ಲೇ ರಾಜ್ಯ ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವರೇ ಹೀಗೆ ಹೇಳಿದ್ಯಾಕೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಚುನಾವಣೆ ಅಖಾಡಕ್ಕೆ ಸಿಂಗಂ , ಆತಂಕ ಹೆಚ್ಚಿಸಿದ ಹೊಸ ಸಿಡಿ ಬಾಂಬ್; ಮಾ.12ರ ಟಾಪ್ 10 ಸುದ್ದಿ!

ಈ ಹೇಳಿಕೆಯನ್ನೇ ದಾಳವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್, ಬಿಎಸ್ ಯಡಿಯೂರಪ್ಪ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ ಎಂದು ಟಾಂಗ್ ಕೊಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ, ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಲಾಗದೆ ಸದನದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಪತ್ತೆಯಾದರೆ, ಇತ್ತ ಡಿವಿ ಸದಾನಂದಗೌಡ ಮುಖ್ಯಮಂತ್ರಿ ಗಾದಿಗೆ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಹೆಸರನ್ನು ತೇಲಿಬಿಡುತ್ತಿದ್ದಾರೆ. ಬಿಎಸ್ ವೈ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ ಎಂದು ಹೇಳಿದೆ.

ಬಿಎಸ್ ಯಡಿಯೂರಪ್ಪನವರ ಮುಂದಿನ ದಾರಿ ಮಾರ್ಗದರ್ಶಕ ಮಂಡಲವೋ ಅಥವಾ ದವಳಗಿರಿಯೋ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಬರೆದು ಟ್ಯಾಗ್ ಮಾಡಿದೆ.