ಮಲ್ಲಿಕಾರ್ಜುನ್ ಖರ್ಗೆಯಲ್ಲ ನಡ್ಡಾ ರಬ್ಬರ್‌ ಸ್ಟಾಂಪ್‌: ಕಾಂಗ್ರೆಸ್‌ ತಿರುಗೇಟು

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ರಬ್ಬರ್‌ ಸ್ಟಾಂಪ್‌ ಆಗಲಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದು, ‘9 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಐದು ದಶಕಗಳ ರಾಜಕೀಯ ಅನುಭವವುಳ್ಳ ಖರ್ಗೆ ಅವರು ಚುನಾವಣೆ ಮೂಲಕ ಅಧ್ಯಕ್ಷರಾಗುತ್ತಿದ್ದಾರೆ. 

Karnataka Congress Slams To Bjp Over AICC President Election gvd

ಬೆಂಗಳೂರು (ಅ.18): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ರಬ್ಬರ್‌ ಸ್ಟಾಂಪ್‌ ಆಗಲಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದು, ‘9 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಐದು ದಶಕಗಳ ರಾಜಕೀಯ ಅನುಭವವುಳ್ಳ ಖರ್ಗೆ ಅವರು ಚುನಾವಣೆ ಮೂಲಕ ಅಧ್ಯಕ್ಷರಾಗುತ್ತಿದ್ದಾರೆ. ಯಾವುದೇ ಚುನಾವಣೆಯಿಲ್ಲದೆ ಅಧ್ಯಕ್ಷರಾದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿಜವಾದ ರಬ್ಬರ್‌ ಸ್ಟಾಂಪ್‌’ ಎಂದು ತಿರುಗೇಟು ನೀಡಿದ್ದಾರೆ. 

‘ಮಲ್ಲಿಕಾರ್ಜುನ ಖರ್ಗೆ ರಬ್ಬರ್‌ ಸ್ಟಾಂಪ್‌ ಎಂಬುವುದು ಬಿಜೆಪಿಯವರ ಸುಳ್ಳು ಆರೋಪ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ನಂಬಿಕೆಯಿಲ್ಲ. ಜೆ.ಪಿ.ನಡ್ಡಾ ಅವರನ್ನು ಚುನಾವಣೆ ಮಾಡಿ ನೇಮಿಸಿಲ್ಲ. ಅಷ್ಟೇಕೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರೂ ಆರ್‌ಎಸ್‌ಎಸ್‌ ಕೃಪಾಕಟಾಕ್ಷದಿಂದಲೇ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾದರೆ, ಅವರನ್ನ ರಬ್ಬರ್‌ ಸ್ಟಾಂಪ್‌ ಎನ್ನಬಹುದಲ್ಲವೇ? ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಕಾಂಗ್ರೆಸ್‌ಗೆ ಗಜೇಂದ್ರ ಮೋಕ್ಷ ಸಿಕ್ಕಿದೆ: ಸಂಸದ ಶ್ರೀನಿವಾಸ್ ಪ್ರಸಾದ್‌

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ‘ಬಿಜೆಪಿಯವರದ್ದು ಕ್ಷುಲ್ಲಕ ಆರೋಪವಷ್ಟೆ. ಖರ್ಗೆ ಅವರಿಗೆ ಐದು ದಶಕಗಳ ಸುದೀರ್ಘ ರಾಜಕೀಯ ಅನುಭವವಿದೆ. ಅಲ್ಲದೆ ಚುನಾವಣೆ ನಡೆಸಿ ಆಯ್ಕೆ ಮಾಡುತ್ತಿದ್ದೇವೆ. ಬಿಜೆಪಿಯವರು ಚುನಾವಣೆ ನಡೆಸಿ ನಡ್ಡಾ ಅವರನ್ನು ಆಯ್ಕೆ ಮಾಡಿದ್ದಾರಾ? ಯಾರು ರಬ್ಬರ್‌ ಸ್ಟಾಂಪ್‌?’ ಎಂದು ಪ್ರಶ್ನಿಸಿದರು. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೊತ್ತಿದ್ದರೆ ಬಿಜೆಪಿಯವರು ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ಅವರ ಅನುಭವ ಗೊತ್ತಿಲ್ಲದೆ ಬೂಟಾಟಿಕೆ ಮಾತು ಆಡುತ್ತಿದ್ದಾರೆ. ಅವರು ನೂರಕ್ಕೆ ನೂರರಷ್ಟುಅಧ್ಯಕ್ಷರಾಗುವುದು ನಿಶ್ಚಿತ. ಹೀಗಾಗಿ ಬಿಜೆಪಿಯವರಿಗೆ ಹತಾಶೆಯಾಗಿ ಏನೇನೋ ಮಾತನಾಡುತ್ತಿದ್ದಾರೆ’ ಎಂದರು.

ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾಗಲಿದ್ದಾರೆ. ಖರ್ಗೆ ಅವರು 9 ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಶಾಸಕಾಂಗ ಪಕ್ಷ ಹಾಗೂ ಸದನದ ಒಳಗೆ, ಹೊರಗೆ ಹೋರಾಟ ಮಾಡಿದ ಅನುಭವ ಹೊಂದಿದ್ದಾರೆ. ಗುಜರಾತ್‌ ಸೇರಿದಂತೆ ಹಲವೆಡೆ ಇರುವ ಚುನಾವಣೆಯಲ್ಲಿ ಖರ್ಗೆ ಅವರ ಅನುಭವದ ಲಾಭ ಕಾಂಗ್ರೆಸ್‌ಗೆ ಆಗಲಿದೆ. ಅವರ ನೇತೃತ್ವದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಹೇಳಿದರು.

ಎಸ್ಸೆಸ್‌, ಎಸ್ಸೆಸ್ಸೆಂ ಮತದಾನ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಬೆಂಗಳೂರಿನಲ್ಲಿ ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲೆಯ 14 ಜನ ಕೆಪಿಸಿಸಿ ಸದಸ್ಯರು ಮತ ಚಲಾಯಿಸಿದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6ನೇ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಕಣದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಶಶಿ ತರೂರ್‌ ಕಣದಲ್ಲಿದ್ದಾರೆ. ಬಹುತೇಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಅ.19ರಂದು ಫಲಿತಾಂಶ ನಂತರ ಸ್ಪಷ್ಟಚಿತ್ರಣ ಲಭ್ಯವಾಗಲಿದೆ.

ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಜೊತೆಗೆ ಹರಿಹರ ಶಾಸಕ ಎಸ್‌.ರಾಮಪ್ಪ, ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ, ವಡ್ನಾಳ್‌ ರಾಜಣ್ಣ, ಎಚ್‌.ಪಿ.ರಾಜೇಶ, ಹರಿಹರದ ರೇವಣಸಿದ್ದಪ್ಪ, ಸೈಯದ್‌ ಸೈಫುಲ್ಲಾ, ಮುದೇಗೌಡ್ರ ಗಿರೀಶ, ಬಸವಾಪಟ್ಟಣದ ಬಿ.ಜಿ.ನಾಗರಾಜ, ಮಾಯಕೊಂಡ ಕೆ.ಎಸ್‌.ಬಸವಂತಪ್ಪ, ಚನ್ನಗಿರಿ ವಡ್ನಾಳ ಜಗದೀಶ, ಹೊನ್ನಾಳಿಯ ಡಾ.ಎಲ್‌.ಈಶ್ವರನಾಯ್ಕ, ಜಗಳೂರಿನ ಅಸಗೋಡು ಜಯಸಿಂಹ ಇತರರು ಇದ್ದರು.

ಒಕ್ಕಲಿಗರ ಮೀಸಲಾತಿ ಶೇ.8ಕ್ಕೆ ಏರಿಸಲು ಹೋರಾಟ: ಚುಂಚಶ್ರೀ

ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ. ಜೆ.ಪಿ.ನಡ್ಡಾ ಅವರು ಚುನಾವಣೆಯಿಲ್ಲದೆ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ ಕೃಪಾಕಟಾಕ್ಷದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ರಬ್ಬರ್‌ ಸ್ಟಾಂಪ್‌ ಎನ್ನಬಹುದಲ್ಲವೇ?
- ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ

Latest Videos
Follow Us:
Download App:
  • android
  • ios