Asianet Suvarna News Asianet Suvarna News

ಹಿರಿಯ ನಾಯಕ ಕಾಂಗ್ರೆಸ್ ತೊರೆಯುವುದು ಖಚಿತ, ಜೆಡಿಎಸ್ ಸೇರ್ಪಡೆ ಫಿಕ್ಸ್ ..!

ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಕೈ ತೊರೆದು ಜೆಡಿಎಸ್ ಸೇರ್ಪಡೆಯಾಗುವುದನ್ನು ಖಚಿತಪಡಿಸಿದ್ದು, ಅವರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೊಡಿ.

Karnataka Congress Senior Leader CM ibrahim confirms quitting Party rbj
Author
Bengaluru, First Published Jan 6, 2021, 3:02 PM IST

ಬೆಂಗಳೂರು, (ಜ.06): ಕಾಂಗ್ರೆಸ್, ಹಿರಿಯ ನಾಯಕ, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದು ಸ್ಪಷ್ಟವಾಗಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ದಿನಾಂಕ ಫಿಕ್ಸ್ ಆಗಿಲ್ಲ.

ಈ ಬಗ್ಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ,  ಈ ರಾಜ್ಯದ ಜನರಿಗೆ ಒಳ್ಳೇದಾಗಬೇಕು ಎಂದು ಜೆಡಿಎಸ್​ಗೆ ಹೋಗ್ತಿದ್ದೇನೆಯೇ ಹೊರತು ಮತ್ಯಾವುದೇ ಕಾರಣದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಡಿಕೆಶಿ ಖುದ್ದು ಭೇಟಿಯಾಗಿ ಬೇಡವೆಂದ್ರೂ ದೇವೇಗೌಡ್ರ ಮನೆಗೆ ಹೋದ ಕಾಂಗ್ರೆಸ್ ಹಿರಿಯ ನಾಯಕ...!

ಜೆಡಿಎಸ್‌ಗೆ ಸೇರೋದು, ಕಾಂಗ್ರಸ್ಸಿಗೆ ರಾಜೀನಾಮೆ ನೀಡೋದಕ್ಕೆ ಸಮಯಾವಕಾಶವಿದೆ. ನಾನೀಗ ಕಾಂಗ್ರೆಸ್​ಬಿಟ್ಟರೆ ನನ್ನ ಎಮ್​ಎಲ್​ಸಿ ಸ್ಥಾನ ಹೋಗುತ್ತದೆ. ಅದಕ್ಕೆ ಏನು ಮಾಡೋಕಾಗತ್ತೆ. ದೇವರ ಅನುಗ್ರಹದಿಂದ ನಾನು ಈ ವರೆಗೆ ಮಾಡಿರೋ ಯಾವುದೇ ಕಾರ್ಯ ವಿಫಲವಾಗಿಲ್ಲ, ಅದೇ ರೀತಿ ನಾನು ಹೇಳಿರುವ ಮಾತುಗಳೂ ಸುಳ್ಳಾಗಿಲ್ಲ ಎಂದು ಹೇಳಿದರು.

ಡಿಸೆಂಬರ್ ಬಂದರೆ ರಾಜಕೀಯ ಬದಲಾವಣೆ ಆಗುತ್ತೆ ಅಂತ ಹೇಳಿದ್ದೆ ಆಗಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮತ್ತಷ್ಟು ಬದಲಾಗಲಿದೆ ಎಂದು ವಿಷ್ಯ ನುಡಿದರು.

ಯಡಿಯೂರಪ್ಪ ಹಾಗೂ ಮೋದಿ ಟೆಂಟಿಗೆ ಬೆಂಕಿ ಬಿದ್ದಿದೆ. ಎಲ್ಲ ಬದುಕಿದ್ರೆ ಸಾಕು ಅಂತ ಓಡಿ ಹೋಗ್ತಾರೆ.  ಅಪ್ಪ ಮಕ್ಕಳ ಪಕ್ಷ ಕಾಂಗ್ರಸ್‌ನಲ್ಲಿ ಇಲ್ವಾ, ಆರ್.ಜೆ.ಡಿಯಲ್ಲಿ ಇಲ್ವಾ...? ದೇವೇಗೌಡರು ಒಳ್ಳೆ ತಳಿಯ ಬೀಜ ಇಟ್ಕೊಂಡಿದಾರೆ. ರೈತರು ಮುಂದಿನ ಬೆಳೆ ಬೆಳೆಯೋಕೆ ಬೀಜ ಇಟ್ಕೊಳ್ತಾರೋ,..? ಅದೇ ರೀತಿ ಉತ್ತಮ ಬೀಜ ಇಟ್ಕೊಂಡಿದಾರೆ ಎಂದು ಜೆಡಿಎಸ್‌ ಅನ್ನು ಗುಣಗಾನ ಮಾಡಿದರು.

Follow Us:
Download App:
  • android
  • ios