ಬೆಂಗಳೂರು(ಜ.17): ಕಳೆದ ಕೆಲವು ದಿನಗಳಿಂದ ಹರಿಯಾಣದ ಸ್ಟಾರ್ ಹೋಟೆಲ್‌ನಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಮರಳಿ ರಾಜ್ಯಕ್ಕೆ ಬರುತ್ತಿದ್ದಾರೆ.

ಈ ಮಧ್ಯೆ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ವ್ಯಂಗ್ಯಭರಿತ ಸ್ವಾಗತ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಲಕ್ಸುರಿ ಹೋಟೆಲ್ ನಲ್ಲಿ ಜಾಲಿ ಹಾಲಿ ಡೇ ಮುಗಿಸಿ ಬರುತ್ತಿರುವ ಬಿಜೆಪಿ ಶಾಸಕರಿಗೆ ಸ್ವಾಗತ. ಇನ್ನು ಮುಂದಾದರೂ ಈ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸುತ್ತಾರೆ ಎಂಬ ವಿಶ್ವಾಸವಿದೆ..’ ಎಂದು ಕಿಚಾಯಿಸಿದ್ದಾರೆ.

ಆಪರೇಶನ್ ಸಂಕ್ರಾಂತಿ ಹೆಸರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ತರುವ ಮೂಡ್‌ನಲ್ಲಿದ್ದ ಬಿಜೆಪಿ, ಇದೀಗ ಮತ್ತೊಮ್ಮೆ ತನ್ನ ತಂತ್ರದಲ್ಲಿ ವಿಫಲತೆ ಕಂಡಿದೆ. ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ರಾಜ್ಯಕ್ಕೆ ವಾಪಸ್ ಬರುತ್ತಿದ್ದಾರೆ.