ಆಯೋಗ ಎಚ್ಚೆತ್ತುಕೊಳ್ಳದಿದ್ದರೆ ಚುನವಣಾ ವ್ಯವಸ್ಥೆ ಸುಧಾರಣೆ ಕಷ್ಟ ಸದನದಲ್ಲಿ ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ್‌ ಆಗ್ರಹ ದೇಶದಲ್ಲಿಯೇ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತ

ಬೆಂಗಳೂರು(ಮಾ.30): ನ್ಯಾಯಾಂಗ ವ್ಯವಸ್ಥೆ ಮತ್ತು ಕೇಂದ್ರ ಚುನಾವಣಾ ಆಯೋಗವು ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡುವವರೆಗೆ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆ ಕಷ್ಟಎಂದಿರುವ ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ್‌, ಕಣ್ಮರೆಯಾಗಿರುವ 19 ಲಕ್ಷ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ಗಳನ್ನು (ಇವಿಎಂ) ಕೇಂದ್ರ ಚುನಾವಣಾ ಆಯೋಗವು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವಿಎಂ ತಯಾರಿಸುವ ಬಿಇಎಲ್‌ ಸಂಸ್ಥೆಯಿಂದ 9,64,270 ಮತ್ತು ಇಸಿಐಎಲ್‌ನಿಂದ 9,29,992 ಇವಿಎಂಗಳು ನಾಪತ್ತೆಯಾಗಿವೆ. ಚುನಾವಣಾ ಆಯೋಗವು ನಾಪತ್ತೆಯಾಗಿರುವ ಇವಿಎಂಗಳನ್ನು ಪತ್ತೆ ಹಚ್ಚುವಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ವಿಧಾನಸಭೆಯು ಈ ನಿಟ್ಟಿನಲ್ಲಿ ನಿರ್ಣಯವೊಂದನ್ನು ಮಾಡಿ ಕೇಂದ್ರಕ್ಕೆ ತಿಳಿಸಬೇಕು. ಸಂಸ್ಥೆಯಿಂದ ನೀಡಿರುವ ಇವಿಎಂ ಎಲ್ಲಿ ಹೋದವು? ಅವುಗಳನ್ನು ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಬೇಕು. ಈ ಹಿನ್ನೆಲೆಯಲ್ಲಿಯಲ್ಲೇ ದೇಶದಲ್ಲಿಯೇ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು ಎಂದು ಹೇಳಿದರು.

ಇವಿಎಂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದ ಚುನಾವಣಾ ಆಯುಕ್ತ

ಚುನಾವಣೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯಗಳು ಸುದೀರ್ಘವಾಗಿ ನಡೆಸುತ್ತವೆ. ತ್ವರಿತಗತಿಯಲ್ಲಿ ವಿಚಾರಣೆ ನಡೆಸದ ಕಾರಣ ಚುನಾವಣೆಯ ಮೇಲೆ ಪರಿಣಾಮ ಬೀರುತ್ತವೆ. ಕೆಲವು ಸಂದರ್ಭದಲ್ಲಿ ಮತದಾರರ ಪಟ್ಟಿಸಿದ್ಧವಾಗದಿರುವ ವೇಳೆ ದಿಢೀರ್‌ ಚುನಾವಣೆ ನಡೆಸುವಂತೆ ಸೂಚನೆ ನೀಡಲಾಗುತ್ತದೆ. ಇದರಿಂದ ಜನಪ್ರತಿನಿಧಿಗಳ ಮೇಲೆ ಒತ್ತಡ ಬೀರುತ್ತದೆ. ಈ ಬಗ್ಗೆ ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಇನ್ನು ಚುನಾವಣಾ ಆಯೋಗವು ಪಾರದರ್ಶಕತೆಯಿಂದ ಚುನಾವಣೆ ನಡೆಸುತ್ತಿಲ್ಲ. ಚುನಾವಣಾ ಆಯೋಗದ ಬಳಿ ಒಂದು ಮತದಾರರ ಪಟ್ಟಿಇದ್ದರೆ, ಜನಪ್ರತಿನಿಧಿಗಳ ಬಳಿ ಮತ್ತೊಂದು ಮತದಾರರ ಪಟ್ಟಿಇರುತ್ತದೆ. ಇದರಿಂದ ಪಾರದರ್ಶಕತೆ ಚುನಾವಣೆ ನಡೆಯುವುದು ಸಾಧ್ಯನಾ? ಈ ಲೋಪಗಳನ್ನು ಸರಿಪಡಿಸಿಕೊಂಡು ಆಯೋಗವು ಒಂದೇ ರೀತಿಯ ಮತದಾರರ ಪಟ್ಟಿಇರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಭಾರತಕ್ಕೆ ಇವಿಎಂ ಬಂದಿದ್ದು ಎಲ್ಲಿಂದ? ಮತಗಳು ಕೌಂಟ್ ಆಗೋದು ಹೇಗೆ?

19 ಲಕ್ಷ ಇವಿಎಂ ನಾಪತ್ತೆ..!
ಇವಿಎಂ ತಯಾರಿಸುವ ಬಿಇಎಲ್‌ ಸಂಸ್ಥೆಯಿಂದ 9,64,270 ಮತ್ತು ಇಸಿಐಎಲ್‌ನಿಂದ 9,29,992 ಇವಿಎಂಗಳು ನಾಪತ್ತೆಯಾಗಿವೆ. ಚುನಾವಣಾ ಆಯೋಗವು ನಾಪತ್ತೆಯಾಗಿರುವ ಇವಿಎಂಗಳನ್ನು ಪತ್ತೆ ಹಚ್ಚುವಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ವಿಧಾನಸಭೆಯು ಈ ನಿಟ್ಟಿನಲ್ಲಿ ನಿರ್ಣಯವೊಂದನ್ನು ಮಾಡಿ ಕೇಂದ್ರಕ್ಕೆ ತಿಳಿಸಬೇಕು. ಸಂಸ್ಥೆಯಿಂದ ನೀಡಿರುವ ಇವಿಎಂ ಎಲ್ಲಿ ಹೋದವು? ಅವುಗಳನ್ನು ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಬೇಕು. ಈ ಹಿನ್ನೆಲೆಯಲ್ಲಿಯಲ್ಲೇ ದೇಶದಲ್ಲಿಯೇ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು ಎಂದು ಹೇಳಿದರು.

ಇನ್ನು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪದ್ಧತಿಯಲ್ಲಿಯೂ ಬದಲಾವಣೆ ತರಬೇಕಾದ ಅಗತ್ಯತೆ ಇದೆ. ಚುನಾವಣಾ ಬಾಂಡ್‌ ಯೋಜನೆಯಡಿ ಬಂದಿರುವ ಮೊತ್ತದಲ್ಲಿ ಶೇ.95ರಷ್ಟುಮೊತ್ತ ಬಿಜೆಪಿಗೆ ಹೋಗಿದೆ. ಉಳಿದ ರಾಜಕೀಯ ಪಕ್ಷಗಳಿಗೂ ಹಣ ಬಂದಿದ್ದು, ಇದನ್ನು ನೀಡಿದವರು ಯಾರು? ಯಾವ ಉದ್ದೇಶವನ್ನಿಟ್ಟುಕೊಂಡು ನೀಡಿದ್ದಾರೆ. ಅಗರ್ಭ ಶ್ರೀಮಂತರು ಹೆಚ್ಚಿನ ಸಂದರ್ಭದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಜನಪ್ರತಿನಿಧಿಗಳನ್ನು ಬಳಕೆ ಮಾಡಿಕೊಳ್ಳಲು ದೇಣಿಗೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಈ ಪದ್ಧತಿಯಲ್ಲಿ ಸಾಕಷ್ಟುಪಾರದರ್ಶಕತೆ ತರಬೇಕಾಗಿದೆ ಎಂದು ತಿಳಿಸಿದರು.