Asianet Suvarna News Asianet Suvarna News

ಲೋಕಸಭಾ ಎಲೆಕ್ಷನ್: ಬಿಜೆಪಿ ಟ್ರ್ಯಾಕ್ ಮಾಡಲು ಕಾಂಗ್ರೆಸ್ ಸ್ಪೆಷಲ್ ಟೀಂ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ನಿಯಂತ್ರಿಸಲು ಕರ್ನಾಟಕ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಏನದು ಪ್ಲ್ಯಾನ್? ಇಲ್ಲಿದೆ ನೋಡಿ.

Karnataka Congress appoints Advocate Unit for Loksabha Poll 2019
Author
Bengaluru, First Published Dec 2, 2018, 3:16 PM IST

ಬೆಂಗಳೂರು, [ಡಿ.02]: ಮುಂಬರುವ ಲೋಕಸಬಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ತಯಾರಿ ನಡೆಸಿವೆ.

ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್, ಮುಂಬರುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನ ಮಾಡುಕೊಳ್ಳುತ್ತಿದೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿಯನ್ನು ಟ್ರ್ಯಾಕ್ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಸ್ಪೆಷಲ್ ಟೀಂ ರೆಡಿ ಮಾಡಿದೆ. 28 ಕ್ಷೇತ್ರಕ್ಕೆ ಪಕ್ಷದ ಕಾನೂನು ಘಟಕವನ್ನ ರೆಡಿ ಮಾಡಲಾಗಿದೆ.

28 ಕ್ಷೇತ್ರಕ್ಕೂ 28 ವಕೀಲರ ನೇಮಕ ಮಾಡಲಾಗಿದ್ದು,  ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳು ಬಿಜೆಪಿ ಕಡೆಯಿಂದ ಪೋಸ್ಟ್ ಆದರೆ ಅದನ್ನು ಪತ್ತೆ ಹಚ್ಚುವುದು ಈ ಟೀಮ್​ನ ಕೆಲಸವಾಗಿದೆ.

ಬಿಜೆಪಿ ಪೋಸ್ಟ್ ಗಳಿಗೆ ಕೌಂಟರ್ ಕೊಡುವ ಜತೆಗೆ, ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸುವುದು ಕೂಡಾ ಟೀಮ್​ನ ಜವಾಬ್ದಾರಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನ ಕಾಲೆಳೆಯುವ ದೃಷ್ಟಿಯಿಂದ ಈ ಘಟಕ ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios