ಬಿ.ಎಸ್. ಯಡಿಯೂರಪ್ಪ ದುರ್ಬಲ ಹಾಗೂ ಭ್ರಷ್ಟಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯತ್ನ ಕೊನೆಯ ಹಂತ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು (ಮೇ.27): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರ್ಬಲ ಹಾಗೂ ಭ್ರಷ್ಟಮುಖ್ಯಮಂತ್ರಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯತ್ನ ಕೊನೆಯ ಹಂತ ತಲುಪಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವೈಫಲ್ಯ ಹಾಗೂ ಕೊರೋನಾ ನಿಯಂತ್ರಣದಲ್ಲಿ ವಿಫಲತೆಯಿಂದಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಿದೆ. ಇವರ ಬಳಿ ಯಾರೇ ಮುಖ್ಯಮಂತ್ರಿಯಾದರೂ ಅವರೂ ದುರ್ಬಲ ಮುಖ್ಯಮಂತ್ರಿಯೇ ಆಗುತ್ತಾರೆ ಎಂದು ದೂರಿದರು.
ನಗರಗಳಿಂದ ಹಳ್ಳಿಗೆ ಹೋಗುವ ಜನರ ಮೇಲೆ ನಿಗಾ ಇಡಿ: ಸಿಎಂ! ..
ಯಡಿಯೂರಪ್ಪ ಅವರ ಮೇಲೆ ಸಚಿವರು ವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಪಕ್ಷದವರೇ ಅವರ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಬಹುಮತ ಇಲ್ಲ. ಹೈಕಮಾಂಡ್‌ಗೂ ಯಡಿಯೂರಪ್ಪ ಅವರ ಬಗ್ಗೆ ದೂರುಗಳು ಹೋಗಿವೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಹೇಳಿದ್ದಾರೆ ಎಂದರು.
