Asianet Suvarna News Asianet Suvarna News

ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸರ್ಜರಿ ಪಕ್ಕಾ: ಯಾರು ಇನ್? ಯಾರು ಔಟ್?

ಸಿಎಂ ಯಡಿಯೂರಪ್ಪ ಸಂಪುಟಕ್ಕೆ ಸರ್ಜರಿ ಪಕ್ಕಾ | ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸಂಪುಟ ಪುನಾರಚನೆ ಫಿಕ್ಸ್ ? | ಮೊದಲ ವಾರದಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿರುವ ಸಿಎಂ ಬಿಎಸ್'ವೈ| ಹಾಗಾದರೆ ಯಾರು ಇನ್ ಯಾರು ಔಟ್ .

Karnataka CM BS Yediyurappa To Reshuffle The Cabinet Here is The Possible Ministers List
Author
Bangalore, First Published Jul 29, 2020, 11:00 AM IST

ಬೆಂಗಳೂರು(ಜು.29):  ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸಿಎಂ ಯಡಿಯೂರಪ್ಪ ಸಂಪುಟ ಪುನಾರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಆಗಸ್ಟ್ ಮೊದಲ ವಾರದಲ್ಲಿ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಅಷ್ಟಕ್ಕೂ ಸಿಎಂ ಯಡಿಯೂರಪ್ಪ ಮಾಡಿರುವ ಸಚಿವರ ಪಟ್ಟಿಯಲ್ಲಿ ಯಾರ ಹೆಸರಿದೆ? ಯಾರು ಈಗಿನ ಸಂಪುಟದಿಂದ ಹೊರ ಹೋಗುತ್ತಾರೆ? ಯಾರಿಗೆ ಮಂತ್ರಿ ಭಾಗ್ಯ ದೊರಕುತ್ತೆ? ಎಂಬುವುದು ಭಾರೀ ಕುತೂಹಲ ಮೂಡಿಸಿದೆ.

ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್...

ಜಾತಿ ಸಮೀಕರಣ, ಪ್ರಾದೇಶಿಕವಾರು, ವರ್ಚಸ್ಸು, ಎಲ್ಲವನ್ನೂ ಪರಿಗಣಿಸಿ ಪ್ರಾಥಮಿಕ ಚರ್ಚೆ ಮಾಡಿರುವ ಸಿಎಂ ಬಿಎಸ್'ವೈ ಚಿಂತಿಸಿ ತರ್ಕಿಸಿರುವ ಹೆಸರನ್ನು ಹೈಕಮಾಂಡ್ ಮುಂದೆ ಇಡಲಿದ್ದಾರೆ. ಆದರೆ ಸದ್ಯ ಸಿದ್ಧವಾಗಿರುವ ಪಟ್ಟಿಯಲ್ಲಿ ಆಶ್ಚರ್ಯ ಎನ್ನುವಂತೆ ಪರಿಷತ್ ಗೆ ಆಯ್ಕೆ ಆಗಿರುವ ಹೆಚ್ ವಿಶ್ವನಾಥ್ ಗೆ ಸ್ಥಾನ ಇಲ್ಲ. ಹಾಗಾದ್ರೆ ಬಿಎಸ್‌ವೈ ಕ್ಯಾಬಿನೆಟ್‌ನಲ್ಲಿ ಮಂತ್ರಿಗಿರಿ ಪಡೆಯುವವರಾರು? ಇಲ್ಲಿದೆ ನೋಡಿ ಸಂಭಾವ್ಯ ಪಟ್ಟಿ

ಯಾರಿಗೆ ಮಂತ್ರಿ ಸ್ಥಾನ ? 

* ಕರಾವಳಿ ಭಾಗದಿಂದ ಸುನೀಲ್ ಕುಮಾರ್(ಕೋಟಾ ಶ್ರೀನಿವಾಸ್ ಪೂಜಾರಿಗೆ ಕೋಕ್ ಸಾಧ್ಯತೆ)

* ಉತ್ತರ ಕರ್ನಾಟಕ ಭಾಗದಿಂದ ಉಮೇಶ್ ಕತ್ತಿ, ಯತ್ನಾಳ್

* ಎಂಟಿಬಿ ನಾಗರಾಜ್, ಆರ್ ಶಂಕರ್

* ದಾವಣಗೆರೆ ಜಿಲ್ಲೆಗೆ ಒಂದು ಸ್ಥಾನ 

* ದಾವಣಗೆರೆಯಿಂದ ರೇಣುಕಾಚಾರ್ಯ

ಎ* ಸ್ ಆರ್ ವಿಶ್ವನಾಥ್ ಗೆ ಚಾನ್ಸ್  ಸಾಧ್ಯತೆ .

* ಮಹಿಳಾ ಕೋಟಾದಲ್ಲಿ ಒಬ್ಬರನ್ನು ಕೈ ಬಿಟ್ಟು ಇನ್ನೊಬ್ಬರಿಗೆ ಅವಕಾಶವಾದರೆ ಪೂರ್ಣಿಮಾ ಶ್ರೀನಿವಾಸ್ 

ಕೊರೋನಾ ಸೋಂಕಿನಿಂದ ಕರ್ನಾಟಕದ ಮಾಜಿ ಸಚಿವ ಸಾವು

ಯಾರ್ ಔಟ್ ಆಗಲಿದ್ದಾರೆ ? 

* ಜಗದೀಶ್ ಶೆಟ್ಟರ್ , ಉತ್ತರ ಕರ್ನಾಟಕ ( ಲಿಂಗಾಯತ) 

* ಕೆ ಎಸ್ ಈಶ್ವರಪ್ಪ - ಕುರುಬ ಸಮುದಾಯ

* ಆರ್ ಅಶೋಕ್ - ಒಕ್ಕಲಿಗ ( ಬೆಂಗಳೂರು) 

* ಕೋಟಾ ಶ್ರೀನಿವಾಸ್ ಪೂಜಾರಿ ( ಕರಾವಳಿ ಭಾಗ ) 

* ಶಶಿಕಲಾ ಜೊಲ್ಲೆ - ಉತ್ತರ ಕರ್ನಾಟಕ ( ಲಿಂಗಾಯತ) 

* ಮಾಧುಸ್ವಾಮಿ - ಗಾಣಿಗ ಲಿಂಗಾಯತ .

ಒಂದು ವೇಳೆ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನದಲ್ಲೇ ಯಾರೆಲ್ಲಾ ಮುಂದುವರಿಯುವ ಸಾಧ್ಯತೆ?

ಈಶ್ವರಪ್ಪ - ಜಾತಿ ಆಧಾರ, ಹಿರಿತನ, ಪಕ್ಷದ ಮುಖವಾಣಿ ಹೈಕಮಾಂಡ್ ನಾಯಕರ ಒಡನಾಟ.

ಜಗದೀಶ್ ಶೆಟ್ಟರ್ - ಅನುಭವ, ಉತ್ತರ ಕರ್ನಾಟಕ ಭಾಗದ ಪ್ರಮುಖ, ಮಾಜಿ ಸಿಎಂ ಹೈಕಮಾಂಡ್ ಜೊತೆಗಿನ ಒಡನಾಟ .

ಕೊನೆಯಲ್ಲಿ ಆರ್ ಅಶೋಕ್  - ಜಾತಿಯಲ್ಲಿ ಒಕ್ಕಲಿಗ, ಪೊಲಿಟಿಕಲ್ ಮ್ಯಾನೆಜ್ಮೆಂಟ್ ತಿಳಿದವರು. ಆದರೆ ಹೈಕಮಾಂಡ್ ನಾಯಕರ ಅವಕೃಪೆ, ಸಂಘದಿಂದ ದೂರವಿದ್ದಾರೆ. 

Follow Us:
Download App:
  • android
  • ios