Asianet Suvarna News Asianet Suvarna News

ಬೊಮ್ಮಾಯಿ ಜನತಾ ಪರಿವಾರದಿಂದ ಬಿಜೆಪಿಗೆ ಸೇರಿದ ಒಂದು ಇಂಟ್ರಸ್ಟಿಂಗ್ ಪ್ರಸಂಗ

* ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ
*  ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರಿಗೆ ಮಣೆ 
* ಬಸವರಾಜ ಬೊಮ್ಮಾಯಿ ಅವರನ್ನ ಬಿಜೆಪಿಗೆ ಕರೆತಂದಿದ್ದು ಯಾರು? 

Karnataka CM basavaraj Bommai How Came To BJP from janata parivar rbj
Author
Bengaluru, First Published Jul 27, 2021, 11:01 PM IST

ಬೆಂಗಳೂರು, (ಜು.27): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇಂದು (ಜು.27) ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ. 

ಬಿಎಸ್‌ವೈ ರಾಜೀನಾಮೆ ನಂತರ ಹೈಕಮಾಂಡ್, ಮೂಲ ಬಿಜೆಪಿಗ, ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಸಂಘ ಪರಿವಾರದಿಂದ ಬಂದವರನ್ನು ಮುಂದಿನ ಸಿಎಂ ಮಾಡುತ್ತೆ ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು.

ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಿರುಪರಿಚಯ

ಆದ್ರೆ, ಜನತಾ ಪರಿವಾರದಿಂದ ಬಂದ ಬೊಮ್ಮಾಯಿ ಅವರಿಗೆ ಮಣೆ ಹಾಕಿರುವುದು ಹಲವರಿಗೆ ಅಚ್ಚರಿಯಾಗಿದೆ. ಹಾಗಾದ್ರೆ ಬಸವರಾಜ ಬೊಮ್ಮಾಯಿ ಅವರನ್ನ ಬಿಜೆಪಿಗೆ ಕರೆತಂದಿದ್ದು ಯಾರು? ಅವರು ಬಿಜೆಪಿಗೆ ಬಂದಿದ್ದೇಗೆ ಎನ್ನುವ ಒಂದು ಇಂಟ್ರಸ್ಟಿಂಗ್ ಪ್ರಸಂಗ ಈ ಕೆಳಗಿನಂತಿದೆ.

ಆಗ ನಾನು ಜನತಾ ಪರಿವಾರದಲ್ಲಿ ಇದ್ದೆ. ಸಿಎಂ ಉದಾಸಿ ಅವರು ಒಂದು ದಿನ ನನ್ನನ್ನು ಹಾನಗಲ್ಲಿಗೆ ಕರೆಯಿಸಿಕೊಂಡರು. ಅಂದು ಅವರ ಹುಟ್ಟುಹಬ್ಬ.  ಇಡೀ ದಿನ ಅವರು ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದರು.  ಮರುದಿನ ಬೆಂಗಳೂರಿಗೆ ಕರೆದುಕೊಂಡು ಹೋದರು.ಬಿಜೆಪಿ ರಾಷ್ಟ್ರೀಯ ಮುಖಂಡ ರಾಜನಾಥ್ ಸಿಂಗ್ ಹಾಗೂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದರು.‌ ಭಾರತೀಯ ಜನತಾ ಪಕ್ಷ ಸೇರುವಂತೆ ಸಲಹೆ ನೀಡಿದರು. 

ಆದರೆ ಆಗ ಬಿಜೆಪಿ ಸೇರಲು ಮಾನಸಿಕವಾಗಿ ನಾನು ಅಷ್ಟು ಸಿದ್ಧವಿರಲಿಲ್ಲ. ಆದರೂ ಆಗ ಅವರು ಬಿಜೆಪಿಗೆ ಬರುವಂತೆ ನನ್ನ ಮನಸ್ಸು ಒಲಿಸಿದರು. ಹೀಗಾಗಿ ನಾನು ಬಿಜೆಪಿಗೆ ಬರಲು ಸಿಎಂ ಉದಾಸಿ ಅವರೇ ಕಾರಣೀಭೂತ ವ್ಯಕ್ತಿ ಆದರು.  ನನ್ನ ತಂದೆ ಎಸ್ ಆರ್  ಬೊಮ್ಮಾಯಿ ಅವರು ತೀರಿ ಕೊಂಡ ನಂತರ ಸಿಎಂ ಉದಾಸಿ ಅವರೇ ನನಗೆ ಗಾಡ್ ಫಾದರ್ ಆದರು.

ಹೀಗೆ ಬಸವರಾಜ ಬೊಮ್ಮಾಯಿ ಅವರು ಸಿಎಂ ಉದಾಸಿ ನಿಧನವಾದಾಗ ಅವರನ್ನ ನೆನೆದು ಸಾಮಾಜಿಕ ಜಾಲತಾಣಗಳ ಬರೆದುಕೊಂಡಿದ್ದರು. 

ಬಸವರಾಜ ಬೊಮ್ಮಾಯಿ ಅವರು ಜನತಾ ಪರಿವಾರ ಬಿಟ್ಟು ಬಿಜೆಪಿಗೆ ಬರಲು ಸಿಎಂ ಉದಾಸಿ ಕಾರಣೀಭೂತ. ಇದೀಗ ಸಿಎಂ ಆಗಿರುವ ಬೊಮ್ಮಾಯಿ ಅವರು ಉದಾಸಿ ಅವರನ್ನ ನೆನೆಯಲೇ ಬೇಕು. 

Follow Us:
Download App:
  • android
  • ios