ಮತ್ತೊಮ್ಮೆ ಸಂಪುಟ ವಿಸ್ತರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ, ಅದು ಸಾಧ್ಯನೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಿ?

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿಕೂಟ ಸರ್ಕಾರ ಸಂಪುಟ ವಿಸ್ತರಣೆ ಮಾಡಿದ ದಿನವೇ ಸರ್ಕಾರ ಬಿದ್ದು ಹೋಗಲಿದೆ. ಇದೆಲ್ಲ ಗೊತ್ತಿರುವ ಸಮ್ಮಿಶ್ರ ಸರ್ಕಾರದ ನಾಯಕರು ಸರ್ಕಾರ ಬೀಳದಂತೆ ಕಾಪಾಡಿಕೊಳ್ಳುವ ದಾರಿ ಕಂಡುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ. ಇದೇ ವೇಳೆ ಅ. 12ಕ್ಕೂ ಸಂಪುಟ ವಿಸ್ತರಣೆಯಾಗುವುದಿಲ್ಲ. ಈ ಕುರಿತು ನಾನು ಲಿಖಿತವಾಗಿ ಬರೆದುಕೊಡಲು ಸಿದ್ಧವಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದೊಳಗಿನ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಅವರಿಗೆ ಸಚಿವ ಸ್ಥಾನ ನೀಡುವ ಸುಳ್ಳು ಭರವಸೆ ನೀಡಿದ್ದಾರೆ ಎಂದರು.

ಅ. 12ಕ್ಕೂ ಸಂಪುಟ ವಿಸ್ತರಣೆಯಾಗುವುದಿಲ್ಲ. ಈ ಕುರಿತು ನಾನು ಲಿಖಿತವಾಗಿ ಬರೆದುಕೊಡಲು ಸಿದ್ಧವಿದ್ದೇನೆ. ಮೈತ್ರಿಕೂಟ ಸರ್ಕಾರ ಅತೃಪ್ತ ಶಾಸಕರ ಅಸಮಾಧಾನದಿಂದ ಬೆಚ್ಚಿಬಿದ್ದಿದೆ. ಕಾರಣ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅತೃಪ್ತ ಶಾಸಕರು ಅಷ್ಟೊಂದು ಕೆಂಡಾಮಂಡಲವಾಗಿದ್ದಾರೆ. ಮೈತ್ರಿಕೂಟದ ಎರಡೂ ಪಕ್ಷಗಳ ನಾಯಕರು 20ರಿಂದ 30 ಶಾಸಕರ ಮೂಗಿಗೆ ಸಚಿವ ಸ್ಥಾನ ಆಮಿಷ ಒಡ್ಡಿದ್ದಾರೆ ಎಂದರು.